ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಿತ್ಯ ಬಿರಿಯುವ ನಗೆ ಮಲ್ಲಿಗೆ ಮೊಗ್ಗುಗಳು ಮಾಯವಾಗಿವೆ ಇಂದು
 ಸದಾ ಹೊಳೆಯುವ ಕಂಗಳ ನಕ್ಷತ್ರಗಳು ಮಾಯವಾಗಿವೆ ಇಂದು

ಕಣ್ಣ ಕನ್ನಡಿಯಲಿ ನಿಸರ್ಗದ ಸೊಬಗು ಸೆರೆ ಹಿಡಿದು ನಲಿದಿದ್ದೆವು
ಒಲವ  ದರ್ಪಣದಲಿ  ಕಾಣುವ  ಬಿಂಬಗಳು ಮಾಯವಾಗಿವೆ ಇಂದು

ಒಲುಮೆಯಿಂದ ಉಸಿರಲಿ ಉಸಿರು ಬೆರೆಸಿ ನಾವು ಜಗವನು ಸುತ್ತಿದೆವು
ನದಿ ತಟದಲಿ ನಡೆದ ಹೆಜ್ಜೆಯ ಗುರುತುಗಳು ಮಾಯವಾಗಿವೆ ಇಂದು

ಪ್ರೇಮದ ಕುರುಹಾದ ತಾಜ್ ಮಹಲ್ ಕಟ್ಟಲು ಬಯಸಿದ್ದೆವು ನಾವು
ಯಮುನೆಯ ದಡದಲ್ಲಿ ಬಿತ್ತಿದ ಕನಸುಗಳು ಮಾಯವಾಗಿವೆ ಇಂದು

ಕದವಿಲ್ಲದ ಬಂಧೀಖಾನೆಯಲ್ಲಿ ಬಂಧಿಯಾಗಿ ಸುಖ ಪಡೆದೆವು
ಪ್ರಣಯದ ಅಮಲಿನಲ್ಲಿ ಕೊಟ್ಟ ಮಾತುಗಳು ಮಾಯವಾಗಿವೆ  ಇಂದು

ಅನುರಾಗದ ಬನದಲಿ ರಂಗಿನ ಚಿಟ್ಟೆ ಹಿಡಿಯಲು ಓಡಿ ದಣಿದೆವು
ಬಣ್ಣದ ಪತಂಗಗಳ ಹಿಡಿದ ನೆನಪುಗಳು ಮಾಯವಾಗಿವೆ ಇಂದು

ಹೃದಯ ಗೂಡಲಿ ಸಿಂಗರಿಸಿ ಇಟ್ಟಿದ್ದೆವು ಮೋಹದ ಕಂದೀಲನು
ಪ್ರಭೆ ಎಣ್ಣೆ ಹಾಕಿ ಹಚ್ಚಿದ್ದ ಹಣತೆಗಳು ಮಾಯವಾಗಿವೆ ಇಂದು


About The Author

Leave a Reply

You cannot copy content of this page

Scroll to Top