ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಾಸ್ಯ

ಮನೆ ಮುಂದೆ ಹೊಗೆಯೂ ಗ್ಯಾರಂಟಿ..!

ಗೊರೂರು ಅನಂತರಾಜು, ಹಾಸನ.

ಬೆಂಗಳೂರು ಮಹಾ ನಗರದಲ್ಲಿ ಕಬ್ಬನ್ ಪಾರ್ಕ್ ಇತ್ತು. ಈಗಲೂ ಇದೆ. ಅದರ ಎಡಕ್ಕೆ ಒಂದು ಮೈನ್ ರೋಡ್ ಇದೆ. ಅದನ್ನು ಡಬ್ಬಲ್ ರೋಡ್ ಮಾಡುವ ಪ್ಲಾನ್ ಕೂಡ ರೆಡಿ ಇದೆ. ಅಲ್ಲಿ ಒಂದು ಉಡುಪಿ ಹೋಟೆಲ್ ಇತ್ತು. ಈಗಿಲ್ಲವಾ ಎಂದು ಯಾರೂ ಕೇಳಬಾರದು. ಇದು ಕಥೆ ಅಷ್ಟೇ. ಅಲ್ಲಿಗೆ ಬೆಳಗಿನ ವಾಕ್ ಮುಗಿಸಿ ರಾಜು ರೈಟರ್ ಹೋದರು. ಒಂದು ಖಾಲಿ ದೋಸೆಗೆ ಆರ್ಡರ್ ಮಾಡಿದರು.
ಹಲೋ ಸಪ್ಲೇಯರ್ ಬನ್ನಿ ಇಲ್ಲಿ. ಏನಿದು ದೋಸೆಯಲ್ಲಿ ಹಸಿ ಕಸ..! ನಿಮ್ಮ ಹೋಟೆಲ್‌ಗೆ ಆರೋಗ್ಯ ಸಚಿವರು ಇನ್ನೂ ಬಂದಿಲ್ಲವಾ..
ಇಲ್ಲಾ ಸಾರ್. ಇದು ಸಪ್ಸಿಗೆ ದೋಸೆ. ನಮ್ಮ ಭಟ್ಟರು ದೋಸೆ ಹಿಟ್ಟಿಗೆ ಸಪ್ಸಿಗೆಸೊಪ್ಪು ಬೆರೆಸಿ ಸ್ಪೆಷಲ್ ದೋಸೆ ಮಾಡಿದ್ದರೆ. ಹಿಟ್ಟು ಉಳಿದರೆ ಹುಳಿ ಬರುವುದಲ್ಲಾ.. ಸಿಟ್ಟು ಬೇಡ..ನಗುವನು.
ಏನು..ಕಾಮಿಡಿ ರೈಟರ್‌ಗೆ ಕಿಂಡಲ್.. ನೀನು ಹೆಸರೇನು ಇಟ್ಕೊಂಡಿದ್ದಿ..? .
ನಮ್ಮಪ್ಪ ಇಟ್ಟಿದ್ದು ಮೆಣಸಿನಕಾಯಿ. ಅಜ್ಜ ಅಪ್ಪನಿಗೆ ಇಟ್ಟಿದ್ದು ಹೀರೆಕಾಯಿ..
ನಿನ್ನ ಮಗನಿಗೆ ನೀನು ಬದನೆಕಾಯಿ ಇಡ್ತಿಯಾ..
ಅರೇ, ಅದ್ಹೇಗೆ ನಮ್ಮ ಗುಟ್ಟು ನಿಮಗೆ ಗೊತ್ತಾಯ್ತು ಮಾರೆಯರೆ..
ನಿಮ್ಮದು ತರಕಾರಿ ವಂಶ ಅಂತ ನಿನ್ನ ಮುಖ ನೋಡಿದ್ರೇ ತಿಳಿಯುತ್ತೆ..
ಹೌದಾ..! ನೀವು ಪೇಸ್ ರೀಡ್ ಮಾಡ್ತಿರಾ..
ಇಲ್ಲಪ್ಪ, ಬುಕ್ ರೀಡ್ ಮಾಡ್ತಿನಿ.. ಬೇಜಾರಾದ್ರೇ ಬರೀತಿನಿ..
ಹೋ.. ನೀವು ರೈಟರ್..! ಏನೆಲ್ಲಾ ಬರೀತೀರಿ ಮಾರೆಯರೇ..?
ಕಾಮಿಡಿ ಸ್ಟೋರಿ..
ಕಾಮಿಡಿಯಾ.. ಅದೇ ಟಿವಿಯಲ್ಲಿ ಬರುತ್ತಲ್ಲಾ ಕಾಮಿಡಿ ಕಿಲಾಡಿಗಳು..ನನಗೂ ಆ ತರಹ ಹಾಸ್ಯ ಪಾತ್ರಗಳಲ್ಲಿ ನಟಿಸೋ ಆಸೆ ಇದೇ ಸಾರ್. ಅದೇ ಆಸೆಯಲ್ಲಿ ಬಾದಾಮಿ ಬಿಟ್ಟು ಇತ್ತ ಬಂದಿದುAಟು. ನಿಮಗೆ ಯಾರಾದರೂ ಟಿ.ವಿ. ಮಂದಿ ಗೊತ್ತಿದ್ದರೇ ಹೇಳಿ ನನಗೂ ಒಂದು ಚಾನ್ಸ್ ಕೊಡ್ಸಿ..
ನೋಡು ಬದನೆಕಾಯಿ..
ಇಲ್ಲಾ,.ಅದು ನನ್ನ ಮಗನಿಗೆ ಇಡಬೇಕೆಂದಿರುವ ಹೆಸರು. ನಮ್ಮಪ್ಪ ಇಟ್ಟಿದ್ದು ಮೆಣಸಿನಕಾಯಿ.
ಅದು ಹಿಂದೆ ಇಟ್ಟಿದ್ದಾ..
ಹೌದು.. ಸ್ವಲ್ಪ ಕಾರ ಜಾಸ್ತಿ..!
ನೀನು ಕಾಮಿಡಿಯಾಗಿಯೇ ಮಾತನಾಡ್ತಿಯಾ ನಮ್ಮೂರಲ್ಲಿ ಶಿವು ಅಂತ ಒಬ್ಬ ಇದ್ದ.
ಅವನು ಮೇಯರ್ ಮುತ್ತಣ್ಣ ಬೆಂಗಳೂರಿಗೆ ಬಂದ ಹಾಗೇ ಇಲ್ಲಿಗೆ ಬಂದ.. ನಗುವನು.
ನಿನಗೆ ನಗೆ. ನನಗೆ ಹೊಗೆ. ಹೋಗಿ ಒಂದು ಬರಕ್ಲೇ ಸಿಗರೇಟು ತಗೊಂಡು ಬಾ. ನಮ್ಮೂರ
ಶಿವು ಕಾಮಿಡಿ ಕಿಲಾಡಿಗಳು ಗೆದ್ದ ಕಥೆ ಹೇಳ್ತಿನಿ.
ಓಕೆ ಸಾರ್, ಹಿಂಗೆ ಹೋಗಿ ಹಂಗೆ ರ‍್ತೀನಿ.. ಹೂಂ ಬಂದೆ ಹೇಳಿ ಸಾರ್ ಶಿವು ಕಥೆ..
ನೋಡು ಹೀರೇಕಾಯಿ..
ಅದು ನಮ್ಮಪ್ಪನ ಹೆಸರು..
ತಥ್..! ಮೆಣಸಿನಕಾಯಿ. ನಮ್ಮ ಶಿವು ಇದಾನಲ್ಲಾ ಅವನು ನಮ್ಮೂರು ಡಿಗ್ರಿ ಕಾಲೇಜಿನಲ್ಲಿ ಫಸ್ಟ್ ಬಿ.ಎ. ಓದುತ್ತಿದ್ದಾಗಲೇ ನನ್ನ ನಾಟಕದಲ್ಲಿ ಪಾರ್ಟು ಮಾಡಿದ್ದ. ಅದ್ಯಾವಾಗ ಬೆಂಗಳೂರಿಗೆ ಬಂದನೋ ಗೊತ್ತಿಲ್ಲ.. ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿಬಿಟ್ಟ. ಈಗ ಪೋನ್ ಮಾಡಿದ್ರು ರಿಸೀವ್ ಮಾಡ್ತಿಲ್ಲಾ..
ನೀವು ನಾಟಕದ ಮೇಷ್ಟç..!
ನಮ್ಮ ಕಡೆ ಹರ‍್ಮೋನಿಯಂ ಮಾಸ್ಟರಿಗೆ ಹೀಗೆ ಕರೀತ್ತಾರೆ. ಅವರದು ಪೌರಾಣಿಕ ನಾನು ಸಾಮಾಜಿಕ.
ನೀವು ಸಮಾಜ ತಿದ್ದುವ ಮೇಷ್ಟುç..! ತುಂಬಾ ಸಂತೋಷ ಸಾರ್. ನಾನು ಚಿಕ್ಕ ವಯಸ್ಸಿನಲ್ಲಿ ನಮ್ಮೂರ ಬನಶಂಕರಿ ಜಾತ್ರೆಲಿ ಕ್ಯಾಂಪ್ ಮಾಡ್ತಿದ್ದ ಕಂಪನಿ ನಾಟಕಗಳನ್ನು ನೋಡ್ತಿದ್ದೆ. ಅದೆಂತಹ ಡಬ್ಬಲ್ ಮೀನಿಂಗ್ ಡೈಲಾಗ್ ಸಾರ್..! ಆಗಲೇ ನನಗೂ ನಟ ಆಗಬೇಕೆಂಬ ಆಸೆ ಹುಟ್ಟಿಬಿಡ್ತು. ಅದಕ್ಕೆ ಈ ಕಡೆ ಬಂದೆ. ನಿಮ್ಮ ನಾಟಕದಲ್ಲಿ ಒಂದು ಚಾನ್ಸ್ ಕೊಡಿ ಸಾರ್. ನಾನು ಒಂದು ಪಾರ್ಟು ಮಾಡಿ ಆ ಅನಂತ್ ತರಹ ನಟ ಆಗ್ತಿನಿ..
ತುಂಬಾ ದೊಡ್ಡ ಕನಸು ಕಾಣ್ತ ಇದ್ದಿಯಾ ಮೆಣಸಿನಕಾಯಿ..
ನನಗೆ ಕನಸಲೂ ನೀನೇ ಮನಸಲೂ ನೀನೇ.. ಹಾಡು ತುಂಬಾ ಇಷ್ಟ ಸಾರ್. ನೀವು ಯಾವ ನಾಟಕ ಬರೆದಿದ್ದಿರಿ ಸಾರ್..
ನಾನು ಮೂವತ್ತು ವರ್ಷದ ಹಿಂದೆ ವೀರಪ್ಪನ್ ಭೂತ ನಾಟಕ ಬರೆದಿದ್ದೆ. ಅದು ತುಂಬಾ ಹಿಟ್ ಆಗಿತ್ತು. ಆ ಕಡೆ ಕಾಡಲ್ಲಿ ವೀರಪ್ಪನ್ ಸತ್ತ, ಈ ಕಡೆ ನಮ್ಮೂರಲ್ಲಿ ನಾಟಕನೂ ಡೆಡ್.,!
ಹೋ ಸ್ಯಾಡ್..! ಮತ್ತೇ ನೀವು ಬೇರೆ ಯಾವ ನಾಟಕನೂ ಬರೀಲಿಲ್ವಾ ಸಾರ್..
ಬರೆದೆ. ಅದೇ ತೋಳ ಬಂತು ತೋಳ. ಅದ್ರಲ್ಲೇ ಶಿವು ಕಾಮಿಡಿ ರೋಲ್ ಮಾಡಿದ್ದು. ಅದರಲ್ಲಿ ಒಂದು ಲೇಡಿ ರೋಲ್ ಬರುತ್ತೆ. ಆಕೆ ಮಾನಭಂಗ ರಂಗದ ಮೇಲೆ ಆಗುತ್ತೆ. ಮಾಡ್ದೋನು ಮುಂದೆ ಒಳ್ಳೆಯ ರಾಜಕಾರಣಿ ಆಗ್ತಾನೆ..
ಅದ್ಹೆಂಗೆ ಸಾರ್, ರಂಗದ ಮೇಲೆ ಮಾನಭಂಗ ಮಾಡ್ದೋನು ಒಳ್ಳೆಯ ರಾಜಕಾರಣಿ ಆಗ್ತಾನೆ..? ನೋಡು ಕಾಮಿಡಿ ಟಾಕ್‌ಗೂ ಒಂದು ಲಿಮಿಟ್ ಇದೆ. ನನಗೆ ಸರ್ಕಾರಿ ಡಾಕ್ಟುç ಎರಡು ಉಚಿತ ಸಲಹೆ ನೀಡಿದ್ದಾರೆ. ರಾತ್ರಿ ಲಿಮಿಟ್‌ನಲ್ಲಿ ಒಂದು ಪೆಗ್ ಹಾಕು. ಬೆಳಿಗ್ಗೆ ಎರಡು ಇಡ್ಲಿ ತಿನ್ನು.. ದಿನ ಇಡ್ಲಿ ತಿಂದು ಬೇಸರ ಆಗಿತ್ತು. ಅದಕ್ಕೆ ಇವತ್ತು ದೋಸೆಗೆ ಆರ್ಡರ್ ಮಾಡಿದ್ದೆ. ಇರಲಿ ಸೊಪ್ಸಿಗೆ ದೋಸೆ ಹೇಗಿದೆ ಟೇಸ್ಟ್ ನೋಡ್ತೀನಿ. ಈಗ ಹೋಗಿ ಅರ್ಧ ಸಕ್ಕರೆ ಇಲ್ಲದ ಕಾಫಿ ತಗೊಂಡು ಬಾ.. (ಕಾಫಿ ತಂದಿಟ್ಟ ನಂತರ) ಇದು ಎಂತದು ಮಾರಾಯಾ ಕಾಫಿ ಬಿಸಿ ಇಲ್ಲ. ನನಗೆ ಸುಡುವ ಕಾಫಿ ಕುಡಿದು ಅಭ್ಯಾಸ. ಕಾಫಿ ಕುಡಿತಾ ಇದ್ರೇ ಬಾಯಿಂದ ಹೊಗೆ ರ‍್ತಾ ಇರಬೇಕು ಗೊತ್ತಾ..
ಕತೆಗಾರರೇ ಇದಕ್ಕಿಂತಲೂ ಬಿಸಿ ಕಾಫಿ ಎಂತಾ..! ಈಗ ನೀವು ಇದನ್ನು ಕುಡಿಯಿರಿ. ಆಮೇಲೆ ಬಂದು ನಮ್ಮ ಹೋಟೆಲಿನ ಸೌದೆ ಒಲೆ ಮೇಲೆ ಕುಳಿತುಕೊಳ್ಳಿ. ಆಗ ನಿಮ್ಮ ಹೊಟ್ಟೆಯಲ್ಲಿನ ಕಾಫಿಯೂ ಬಿಸಿ.. ಮನೆ ಮುಂದೆ ಹೊಗೆಯೂ ಗ್ಯಾರಂಟಿ..! ನಗುವನು.


About The Author

Leave a Reply

You cannot copy content of this page

Scroll to Top