ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
“ತಾಯಿ ನೆನೆದು”


ಹಸಿವಾದ ಕರುವೊಂದು
ಹುಡುಕುತಲಿತ್ತು ತಾಯಿ
ಆಕಳನು ಕೊಂಡೊಯ್ದ
ಹಾಲು ಕರೆಯಲು
ಸುತ್ತಲೂ ನೋಡಿತು ಮಗು
ಕಾಣಲಿಲ್ಲದ ಅವ್ವಾ
ಅಂಬಾ ಅಂಬಾ ಒದರಿತು
ಬರಲಿಲ್ಲ ಉತ್ತರ
ಬೀದಿಯಲಿ ಏಕಾಂಗಿ
ಹಸಿದ ಕರುವಿನ ಯಾತ್ರೆ
ಹುಡುಕುತ ತನ್ನ
ಹಕ್ಕಿನ ಹಾಲು
ಅಲ್ಲೊಂದು ಮನೆ
ಗೋಡೆಯ ಮೇಲೆ
ತಾಯಿ ಹೋಲುವ ಆಕಳಿನ
ಬಿತ್ತಿ ಚಿತ್ರ
ತುಂಬಿದ ಕೆಚ್ಚಲು
ನೊರೆ ತುಂಬುವ ಹಾಲು
ತಡಪಡಿಸಿ ಕೆಚ್ಚಲಿಗೆ
ಬಾಯಿ ಹಾಕಿತು ಮರಿ
ಅದು ಚಿತ್ರದ ರೂಹು
ಚಿತ್ರದ ಹಾಲು
ಅರಿಯದಾಯಿತು ಅತ್ತು
ತಾಯಿ ನೆನೆದು
______________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ*



