ಕಾವ್ಯಸಂಗಾತಿ
ಡಾ ರೇಣುಕಾತಾಯಿ ಸಂತಬಾ ರೇಮಾಸಂತ
ಗಜಲ್


ಎಂಥಾ ಚೆಲುವಿ ಅದಾಳ ಈಕೀ ಹ್ಯಾಂಗ ವರ್ಣಿಸಲಿ.
ಮಾತ ಮಾತಿಗೂ ನಗುವಾಕೀ ಹ್ಯಾಂಗ ಹಿಡಿದಿಡಲಿ.ll
ಕಾಲಿಗೆ ಗೆಜ್ಜಿ ಕಟಗೊಂಡ ಘಲ್ ಘಲ್ ಕುಣಿಸುವಾಕೀ,
ಎದ್ಯಾಗ ಪ್ರೀತಿನ ಪುಟಿಸುವಾಕೀ ಹ್ಯಾಂಗ ಮುಚ್ಚಿಡಲಿ.ll
ಎಲ್ಲಾರು ಬೆರಗಣ್ಣಾಗ ನೋಡುವಂಗ ಮಿಂಚುವಾಕೀ,
ಕಂಡವರ ಮನಸ್ಸ ಕದಿಯುವಾಕೀ ಹ್ಯಾಂಗ ಸುಮ್ಮಿರಲಿ.ll
ಬೆಳಕಿನ ಸೀರೆ ಉಟ್ಗೊಂಡು ಬೆಳದಿಂಗಳ ಆದಾಕೀ,
ಮಂಜಿನ ಹಾಂಗ ಕರಗುವಾಕೀ ಹ್ಯಾಂಗ ಕಾಪಾಡಲಿ.ll
ತಾಯಿ ದೇವಿ ಗರ್ಭಗುಡಿ ದೀಪದಂಗ ಶಾಂತ ಈಕೀ,
ರಾಗದಾಗ ಇರು ಸ್ವರದಂತಾಕೀ ಹ್ಯಾಂಗ ಹಾಡಲಿ.ll
ಡಾ ರೇಣುಕಾತಾಯಿ ಸಂತಬಾ ರೇಮಾಸಂತ




Soooper Tayi
ಒಂದೊಂದು ಶಬ್ದ ಗಳು ನಿಮ್ಮನ್ನೇ ವರ್ಣಿಸುತ್ತಿರುವಂತೆ ನನಗೆ ಭಾಸವಾಗುತ್ತಿತ್ತು…. ಓದುತ್ತಾ.. ಓದುತ್ತಾ.. ನಿಮ್ಮ picture ಕಣ್ಣ ಮುಂದೆ ಕಟ್ಟುತ್ತಿತ್ತು..
ನಿಮ್ಮ ಹಾಡು ಮನಸ್ಸಿನಿಂದ ಹೃದಯದವರೆಗೂ ಇಂಪನ್ನು ಕಂಪಿಸಿತು, ಇನ್ನೂ ಹೆಚ್ಚು ಘಜಲ್ಗಳನ್ನು ಕೇಳುವ ನಮ್ಮ ಇಚ್ಛೆಯನ್ನು ಪೂರೈಸಿ ಮೇಡಂ ಧನ್ಯವಾದಗಳು
ಬಸವರಾಜ ಹಿರೇಮಠ