ಅನುವಾದ ಸಂಗಾತಿ
“ನಿನ್ನೆಯೊಳಗೆ”
ತೆಲುಗು ಮೂಲ:ರಾಜಾಬಾಬು ಕಂಚರ್ಲ
ಕನ್ನಡಕ್ಕೆ:ಧನಪಾಲ ನಾಗರಾಜಪ್ಪ


ಜೀವನವನ್ನು ದಾಟಿಕೊಂಡು ಹೊರಟಿದ್ದೇನೆ
ಎಲ್ಲೋ, ಎಂದೋ…
ನನ್ನ ಭವಿಷ್ಯವನ್ನೇ
ಕಳೆದುಹೋಗುವಂತೆ ಬಿಟ್ಟು ಬಂದವನಂತೆ
ಎದುರಾದವರು
ನಗುತ್ತಾ ಮಾತಾಡಿಸುವರು
ಕಾಲವು ಮಾತ್ರ
ನನ್ನ ಕೈ ಹಿಡಿದು
ಮುಂದಕ್ಕೆ ಎಳೆದೊಯ್ಯುತ್ತಿದೆ
ಆದರೂ…
ನನ್ನೊಳಗಿನ ಒಂದು ಸಣ್ಣ ತುಣುಕು
ಇಂದಿಗೂ ಅಲ್ಲೇ ನಿಂತಿದೆ
ನೀನು ಕೊನೆಯ ಸಲ
ಕಂಡ ಆ ಹೊಸ್ತಿಲ ಬಳಿ
ನೀನು…
ಮೌನದೊಳಗೆ ಮುಳುಗಿಹೋದೆ
ನಾನು ಮಾತ್ರ
ನನಗಿಷ್ಟವಾದ ನಿನ್ನೆಯೊಳಗೆ
ನಡೆಯುತ್ತಾ ಹೊರಟುಹೋದೆ
ದಿನಗಳು ಕಳೆದವು
ಋತುಗಳು ಬದಲಾದವು
ಮನುಷ್ಯರು ಬದಲಾಗಿಬಿಟ್ಟರು
ಆದರೆ… ನನ್ನೊಳಗೆ
ಇನ್ನೂ ಒಂದು ಬಾಗಿಲು ಮಾತ್ರ
ಇಂದಿಗೂ ತೆರೆದೇ ಇದೆ
ನೀನು ಮರಳಿ ಬರಬಹುದೆಂಬ ನಿರೀಕ್ಷೆಯಿಂದಲ್ಲ
ನಾನು ಕಳೆದುಕೊಂಡ
ನನ್ನ ನಿನ್ನೆಯನ್ನು
ಎಂದಾದರೂ ಮತ್ತೆ
ಪಡೆಯುವೆನೇನೋ ಎಂಬ ನಿರೀಕ್ಷೆಯಿಂದ!!
ತೆಲುಗು ಮೂಲ : ರಾಜಾಬಾಬು ಕಂಚರ್ಲ
ಕನ್ನಡಾನುವಾದ : ಧನಪಾಲ ನಾಗರಾಜಪ್ಪ



