ಕಾವ್ಯ ಸಂಗಾತಿ
ಹಮೀದ್ ಹಸನ್ ಮಂಗಳೂರು
“ವಿಕೋಪ”


ಮಾನವೀಯತೆಯೇ
ಮಾನವನ ನಿಜ ಧರ್ಮವಯ್ಯ,!
ಅಶಾಂತಿ ಅನೀತಿ ಸಹಿಷ್ಣುತೆ
ಯಾವ ರೀತಿಯ ಧರ್ಮವಯ್ಯ,!
ದೇವಾಲಯ ಮಸ್ಜಿದ್
ಕೆಡವುದೇ ಅಧರ್ಮವಯ್ಯ,?!
ಧರ್ಮ ಧರ್ಮಗಳ ಮಧ್ಯೆ
ಕಂದಕ ಸೃಷ್ಟಿಸುವುದು ಕೆಡುಕಯ್ಯ,!
ಕೆಡುಕೇ ಅಧರ್ಮ ಹಾದಿಯು
ಸಮಾಜಕ್ಕೆ ಮಾರಕ ಕಳಂಕವಯ್ಯ!,
ದುರಾಡಳಿತೆಯ ತಂತ್ರವು
ಲೋಕ ಅವಸಾನದ ಲಕ್ಷಣವಯ್ಯ,!
ಕಣ್ಣಾರೆ ಕಂಡೆವು ಸತ್ಯವ
ಮುಂದೆ ಎಚ್ಚರಿಕೆಯಿಂದ ಬಾಳುವಯ್ಯ,!
ಪ್ರಕೃತಿ ವಿಕೋಪವು ಇದಲ್ಲ
ಹಮೀದ್ ಹಸನ್ ಮಂಗಳೂರು.



