ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬರೆಯಬೇಕು ಕವನ
ನೋವು ಮರೆತು ನಲಿಯಲು
ಜೀವ-ಭಾವ ಬೆಸೆಯಲು
ಸ್ನೇಹ-ಪ್ರೀತಿ ಹಂಚಲು
ತನು-ಮನಗಳು ತಣಿಯಲು
ಸೃಷ್ಟಿ ಸೊಬಗ ಸವಿಯಲು
ಬಚ್ಚಿಟ್ಟ ಬಯಕೆ ಬಿಚ್ಚಿಡಲು
ಮಧುರ ಮಿಲನವಾಗಲು
ವಿಚಾರಧಾರೆ ಹರಿಸಲು
ಕನಸಗಳು ನನಸಾಗಲು
ಅಂತರಾಳವ ಅರಿಯಲು
ಅಭಿವ್ಯಕ್ತಿ ಅನಾವರಣವಾಗಲು
ಮನದಾಳದ ಮೌನ ಮಾತಾಗಲು
ತಲ್ಲಣಗಳ ತನಿಸಲು
ವಿರಹ ವೇದನೆ ಮರೆಯಲು
ಭೇದ-ಭಾವ ಅಳಿಯಲು
ಅಜ್ಞಾನ ಅಂಧಕಾರ ಕಳೆಯಲು
ಸಮರಸ ಸಮಾಜ ಉಳಿಯಲು
ಸ್ವಾಸ್ಥ್ಯ ಸಾಹಿತ್ಯ ಸೃಷ್ಟಿಸಲು
ಸೃಜನಶೀಲತೆ ಬೆಳೆಸಲು
ಶಾಂತಿ ಸಮತೆ ಸಾರಲು
ಶಬ್ದಗಳ ಪೋಣಿಸಿ ಸಂಭ್ರಮಿಸಲು
ಬರವಸೆಯ ಬಾಳು ಬೆಳಗಲು
ಬರೆಯಬೇಕು ಕವನ


About The Author

1 thought on “ಡಾ.ಗೀತಾ ದಾನಶೆಟ್ಟಿ ಅವರ “ಬರೆಯಬೇಕು ಕವನ””

Leave a Reply

You cannot copy content of this page

Scroll to Top