ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಿನ್ನ
ಕೈಯಲ್ಲಿದ್ದ ಕಲ್ಲಿಗೆ
ಅಭಿವೃದ್ಧಿಯ ಫಲಕ ತೊಡಿಸಿದೆ!

ನಿನ್ನ
ಬಾಯಲ್ಲಿದ್ದ ಸುಳ್ಳಿಗೆ
ಭರವಸೆ ಬಣ್ಣಗಳ ಬಳಿದೆ!

ನಿನ್ನ
ಜೇಬು ತುಂಬಿದ ಹಣಕ್ಕೆ
ಜನಸೇವೆಯ ಹೆಸರು ನೀಡಿದೆ!

ನಿನ್ನ
ಕುರ್ಚಿಯ ಮೇಲಿನ ಮೋಹಕ್ಕೆ
ಜನಹಿತದ ಮುಖವಾಡ ಹಾಕಿದೆ!

ನಿನ್ನ
ಜಾತಿಯ ಮೆಟ್ಟಿಲೇರಿ ನಿಂತು
ಸಮಾನತೆಯ ಭಾಷಣ ಮಾಡಿದೆ!

ನಿನ್ನ
ಧರ್ಮದ ಗೋಡೆ ಕಟ್ಟಿಕೊಂಡು
ಸೌಹಾರ್ದತೆಯ ಧ್ವಜ ಹಾರಿಸಿದೆ!

ನಿನ್ನ
ಚುನಾವಣೆಯ ಗೆಲುವಿಗೆ
ಬಡವರ ಕಣ್ಣೀರಿಗೆ ಬೆಲೆ ಕಟ್ಟಿದೆ!

ನಿನ್ನ
ಮತ ಕೇಳುವ ಮನಸಿಗೆ
ವರ್ಷಗಳ ಅಧಿಕಾರದ ಅಮಲಿದೆ!

ನಿನ್ನ
ವಿರೋಧಿಯಾದ ಮತಗಳ
ಕುರ್ಚಿಯ ಆಮಿಷದಿ ಮಿತ್ರರಾಗಿಸಿದೆ!

ನಿನ್ನ
ಜನರು ಬದಲಾಗುತ್ತಾರೆಂದು
ಪ್ರತಿ ಚುನಾವಣೆಯಲ್ಲೂ ಹೇಳಿದೆ!

ನಿನ್ನ
ಜನ ಮತ್ತದೇ ಚುನಾವಣೆಯಲ್ಲಿ
ಬದಲಾಯಿಸುತ್ತಾರೆಂಬುದ ಮರೆತೆ!
ಟಿ.ಪಿ.ಉಮೇಶ್

About The Author

Leave a Reply

You cannot copy content of this page

Scroll to Top