ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್


ಹುಟ್ಟಿ ಬಂದಿಹೆ ನೀನು ಈ ಭುವಿಯಲಿ
ಅನುಭವಿಸಲೆಲ್ಲವನು ಈ ಬದುಕಲಿ..
ಸುಖದ ಜೊತೆಗೆ ಸ್ವಲ್ಪ ದುಃಖವಿರಲಿ
ಬೆಲ್ಲದ ಜೊತೆ ತುಸು ಬೇವು ಇರಲಿ..
ನೋವುನಲಿವುಗಳು ಕೂಡಿ ಬರಲಿ
ಮೊಗದಿಎಂದೆಂದೂ ನಗುತುಂಬಿರಲಿ..
ಹಗಲು ಬರುವುದು ಇರುಳಸರಿಸುತಲಿ
ದೀಪಬೆಳಗುವುದುತಿಮಿರದೂಡುತಲಿ..
ಸ್ನೇಹಪ್ರೀತಿಗಳು ಹೃದಯದೊಳಿರಲಿ
ಕೋಪ ಅಸೂಯೆಎಲ್ಲ ಭಸ್ಮವಾಗಲಿ..
ಒಲವಝರಿಯೊಂದುಜಿನುಗುತಿರಲಿ
ಮನದೊಳೆಂದೂ ಅದು ಚಿಮ್ಮುತಿರಲಿ..
*ಇರುವಂತೆ ಇರಬೇಕು* ದೇವನೊಲುಮೆಯಲಿ
ಬಾಳಿಗದು ಭದ್ರತೆ ನಿನಗೆ ನೆನಪಿರಲಿ..
ಜಗದ ಟೀಕೆಗಳ ನೀ ಮರೆಯುತಿರಲಿ
ಏನೇ ಆದರೂ ಎಂದೂ ಹೂ ಮನವಿರಲಿ…!
ಹಮೀದಾ ಬೇಗಂ ದೇಸಾಯಿ



