ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಣ್ಣಾಗಿ ಉದುರಿದೆಲೆಗಳು ಮತ್ತೆ ಚಿಗುರಿ ಹಸಿರಾಗಬಹುದೇ ಹೇಳು
ಮುಪ್ಪಾಗಿ ಬಾಗಿದ ಕಾಯ ಮರಳಿ ತರುಣವಾಗಬಹುದೇ ಹೇಳು

ಕಳೆದು ಹೋದ ಸಮಯ ತಿರುಗಿ ಬಾರದು ಅಲ್ಲವೇ
ಬೆಳೆದು ನಿಂತ ಮರ ಕೆಳಗೆ ಬಾಗಬಹುದೇ ಹೇಳು

ಪಂಜರದ ಗಿಳಿಯು ರೆಕ್ಕೆ ಬಡಿಯುತ ಚಡಪಡಿಸಿದೆ ನೋಡು
ಬೀಸುವ ಗಾಳಿಯ ಅಲೆಗಳನು ಗಿರಿಶಿಖರ ತಡೆಯಬಹುದೇ ಹೇಳು

ಅರಳಿದ ಹೂಗಳ ಪರಿಮಳ ಸುತ್ತ  ಆವರಿಸಿ ಘಮಘಮಿಸಿದೆ
ಕೆರಳಿದ ಗಾಯಗಳ ನೋವು ಮನದಿಂದ ಬೇರೆಯಾಗಬಹುದೇ ಹೇಳು

ದುಃಖಗಳ ಮೂಟೆ ಹೊತ್ತು ನಿಂತಿಹುದು ನೊಂದ ಜೀವ
ಸವಿದಂಥ ಸುಖಗಳ ಬೇಗಂ ಎಂದಾದರೂ ಮರೆಯಬಹುದೇ ಹೇಳು.


About The Author

Leave a Reply

You cannot copy content of this page

Scroll to Top