ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನೀಲಿ ನೀಲಿ ಆಕಾಶ ಚುಕ್ಕಿಗಳಿಲ್ಲದೆ ಹೊಳೆಯುವುದೇ
ಸೂರ್ಯನು ಕೊಡದಿರೆ ಆ ಶಾಖ ಚಂದಿರ ಸುಮ್ಮನೆ ಹೊಳೆಯುವನೇ

ಹೂವುಗಳಿರದ ತೋಟಗಳು ಪರಿಮಳ ಬೀರಲು ಸಾಧ್ಯವೇ
ಜೇನುಗಳಿರುವ ಗೂಡಿನಲಿ ಸಿಹಿಗಳು ಸಿಗದೇ ಇರುವುದೇ

ಪ್ರೀತಿಯೇ ಇರದ ಹೃದಯದಲಿ ನಗುವನ್ನು ಕಾಣಲು ಸಾಧ್ಯವೇ
ನಂಬಿಕೆ ಇಲ್ಲದ ಬದುಕಿನಲಿ ನೆಮ್ಮದಿ ಹುಡುಕಲು ಸಾಧ್ಯವೇ

ವಿಶ್ವಾಸದ ನಡೆಯಲಿ ಬೆರೆತಾಗ ಜೀವನ ಸಾರ್ಥಕ ಆಗದೇ
ಸೃಷ್ಟಿಗಳೆಲ್ಲ ಹೇಳುವುದು ಶಾಶ್ವತವಾದ ಸತ್ಯವೇ

ನದಿಯು ಸಾಗರ ಸೇರದೆ ಭೂಮಿಯ ಒಡಲಲ್ಲಿ ನಿಲ್ಲುವುದೇ
ಗಾಳಿಯು ಸನಿಹಕ್ಕೆ ಬರದಿರಲು ಉರಿಯುವ ದೀಪವು ಕೂಡ ಶಾಶ್ವತವೇ

ಪ್ರೀತಿ ಇರದ ಮನುಜನಲಿ ಬದುಕಿನ ಅರ್ಥವು ತಿಳಿಯುವುದೇ
ನ್ಯಾಯದ ಬದುಕೇ ಜಗದ ನಿಯಮ ಎಂದು ಮನುಜನು ಅರಿಯುವನೇ


About The Author

Leave a Reply

You cannot copy content of this page

Scroll to Top