ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಿರುಗಿ ಬಾರದ  ಪುಟಗಳು,
ನೆನಪಿನ ಬಂಡಿಯಲಿ ಮರೆ ಕ್ಷಣಗಳು,
ಚಿನ್ನದ ರಥದಲ್ಲಿ ಓಡಿದ  ಬಾಲ್ಯ,
ಇಂದಿನ ನೆನಪಲಿ ಅರಳಿದ ಕಾವ್ಯ.

ಕೆಸರಲಿ ಹೊರಳಾಡಿದ  ದಿನಗಳು,
ಹಸಿರಲಿ ಓಡಿದ  ಹೆಜ್ಜೆಗಳು,
ಅಮ್ಮನ ಮಡಿಲ ಸವಿ ನಿದ್ದೆಯ ಸುಖ,
 ಇಂದು ಬರಿ ನೆನಪಿನ ಮುಖ.

ಗೆಳೆಯರ ಜೊತೆಗೂಡಿ ನಕ್ಕ  ದಿನಗಳು,
ಕಾಗದದ ದೋಣಿ ತೇಲಿದ ದಿನಗಳು,
ಚಿಂತೆಯಿಲ್ಲದ ನಿರಾತಂಕದ ನಗೆ,
ಮರಳಿ ಬಾರದು  ಸಂಭ್ರಮ ಜಗತ್ತಿನೆಡೆಗೆ.

ಕಾಲ ಚಕ್ರ ಉರುಳುತ ಸಾಗಿದೆ,
ವರ್ತಮಾನದ ಬದುಕು ಯಾಂತ್ರಿಕ,
ಹಳೆಯ ದಿನಗಳ ನೆನೆದ ಮನಕೆ,
 ಮಧುರ ಮೌನ ಆವರಿಸಿದೆ ತನಗೆ.

ಹಿಂತಿರುಗಿ ನೋಡಿದೆ  ನೆನಪಿನ ಸಾಲು,
ಕಳೆದು ಹೋದ  ದಿನಗಳು ಜೀವನದ ಹಾಲು.
ಬಾಲ್ಯ ಯೌವನ ಮುಪ್ಪು


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು””

  1. ನೆನಪಿನ ಸಾಲು… ಮರಳಿ ಬಾರದ ದಿನಗಳು….ತಿರುಗಿ ಬಾರದ ಪುಟಗಳು… ಅಚ್ಚಳಿಯದ ನೆನಪುಗಳು…ಎಂದೆಂದಿಗೂ ಅಮೂಲ್ಯ

    1. “ನೆನಪಿನ ಸಾಲು” ಕವನದಲ್ಲಿ, ಬಾಲ್ಯ ಜೀವನದ ಚಿನ್ನದ ನೆನಪು, ಯೌವನದ ಕನಸುಗಳು, ಮುಪ್ಪಿನ ನೆನಪುಗಳು, ಮಧುರವಾಗಿ ಮೂಡಿಬಂದಿದೆ.

Leave a Reply

You cannot copy content of this page

Scroll to Top