ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
“ಅಲ್ಲೆಲ್ಲೊ ನೀನೇ!”


ಅಂದೊಮ್ಮೆ ನನಗೆ ನಿನ್ನನ್ನು ಕಂಡು
ಮಾತಾಡೋ ಬಯಕೆ ಬಂದಿತ್ತು ಅಂದು
ಅಲ್ಲೆಲ್ಲೋ ನೀನು ಕಣ್ಮರೆಯಾಗಿ,
ಸುಳಿವೊಂದು ಸಿಗದೆ ಕಣ್ಣೀರು ತಂದೆ
ನಾ ನಿನ್ನ ಕರೆದು ಬಳಿ ಬಂದು ನಿಂದು
ನಿನ್ನ ಖುಷಿಯ ತಂದೆ ನಿನಗಾಗಿ ಇಂದು
ನಿನ್ನನ್ನು ಕರೆದು ಮಾತನಾಡೋ ಬಯಕೆ ನನಗಿತ್ತು ಅಂದು ಭಯವೆಲ್ಲ ಎಂದು
ಆರೋಪ ಇರದ ಈ ರೂಪ ನಿನಗೆ ಕೊಡಬೇಕು ನಾನು ನಾನಿರುವವರೆಗೆ
ಆ ನಿನ್ನ ನಗುವು ನನಗಾಗೆ ಇರಲು ಸವಿಯುವೆ ನಾನು ಹಗಲು ಇರುಳು
ನಗುವಲ್ಲಿ ಇರುವಂತ ಆ ನಿನ್ನ ಕನಸು
ಮಲ್ಲಿಗೆ ಹೂವಂತೆ ಅರಳುವ ಸೊಗಸು
ಕೋಗಿಲೆ ಹಾಡು ನಾವಿರುವ ನಾಡು
ಇಂಪಾಗಿ ಕೇಳು ಈ ನನ್ನ ಹಾಡು
ಮನ್ಸೂರ್ ಮುಲ್ಕಿ



