ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಇಳಿದುಬಿಡು“


ಇಳಿದು ಬಿಡು ಮಳೆ ಬೇಗನೆ,
ಸುಡುವ ಧರೆಗೆ ತಂಪು ನೀಡು.
ಕಾದು ಕುಳಿತಿವೆ ಜೀವ ಜಾಲ,
ಕಾಯುತ್ತಿವೆ ಸಿಹಿ ಹನಿಗಳ ಮುತ್ತು ರತ್ನ .
ಬತ್ತಿದ ಕೆರೆ ತೊರೆಗಳ ತುಂಬಿಸು,
ನಗೆ ಅರಳಲಿ ಗಿಡ.ಮರ ಬಳ್ಳಿಗಳಲಿ
ಒರೆಸು ಕಣ್ಣೀರು ಸರಿಸಿ ಸಾಲದ ಮೂಟೆ,
ಹಸಿರ ಹಂದರವ ಎಲ್ಲೆಡೆ ಕಟ್ಟಿ.
ಚಲಿಸುವ ಕಾರ್ಮೋಡಗಳು ಒಂದಾಗಿ ಬನ್ನಿ,
ತೆಪ್ಪನೆ ಮಳೆ ಸುರಿದು ಜಗವ ನಲಿಸಿ.
ಮಣ್ಣು ಹುಡಿ ಭಂಡಾರ ತೂರಿ ,
ಜನ್ಮ ಆಸೆಯ ಮತ್ತೆ ಚಿಗುರಿಸಿ.
ನಿನ್ನ ತಂಪ ಆ ಸಿಹಿ ಸಿಂಚನ,
ಸೃಷ್ಟಿಯ ಒಡಲಿಗೆ ಜೀವ ಗಾನ!
ಸದ್ದಿಲ್ಲದೆ ಹೊರಟು ಬಿಡು
ನಿನ್ನ ದಾರಿ ಬದುಕು ಪಾವನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಚಲಿಸುವ ಕಾರ್ಮೋಡಗಳು ಒಂದಾಗಿ ಬನ್ನಿ ಎನ್ನುವ ಮಳೆರಾಯನ ಕರೆಯುವ ಕವನವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ
ಸುತೇಜ
ಇಳಿದು ಬಿಡು ಮಳೆ ಬೇಗನೆ, ಸೃಷ್ಟಿಯ ಒಡಲಿಗೆ ಜೀವ ಗಾನ ತುಂಬಾ ಅರ್ಥ ಪೂರ್ಣವಾಗಿ ಕವನ ರಚಿಸಿರುವಿರಿ. ತಮಗೆ ಅನಂತ ಧನ್ಯವಾದಗಳು.