ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ
“ಮೌನ”


ಮೌನವೆಂದರೆ ಮಾತಿಲ್ಲದ ಸ್ಥಿತಿಯಲ್ಲ
ಮನದ ಮಾತುಗಳ ಸಮ್ಮಿಲನ
ಮೌನವೆಂದರೆ ಶೂನ್ಯವಲ್ಲ
ಸಾವಿರ ಭಾವನೆಗಳ ಸಾಗರ
ಮೌನವೆಂದರೆ ಪದಗಳ ಅಂತ್ಯವಲ್ಲ
ಅಂತರಂಗದ ಅರಿವಿನ ಆರಂಭ
ಮೌನವೆಂದರೆ ಅಂತರವಲ್ಲ
ಜೀವ ಭಾವದ ಸೇತುವೆ
ಮೌನವೆಂದರೆ ದೌರ್ಬಲ್ಯವಲ್ಲ
ಸಂಯಮ ಸಹನೆಯ ಪ್ರತಿಕ
ಮೌನವೆಂದರೆ ಕತ್ತಲೆಯಲ್ಲ
ಆತ್ಮಜ್ಞಾನದ ಹೊಂಬೆಳಕು
ಮೌನವೆಂದರೆ ಖಾಲಿತನವಲ್ಲ
ಸಚ್ಛಿಂತನೆಗಳ ಚಿಲುಮೆ
ಮೌನವೇ ಆತ್ಮಾವಲೋಕದ ಆಗರ
ಮೌನವೇ ಮನಶಾಂತಿಯ ಮಂದಿರ
ಡಾ.ಗೀತಾ ದಾನಶೆಟ್ಟಿ



