ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಮೊದಲ ಹೀರೋ
 ಅಪ್ಪನೆಂಬ ದಿವ್ಯಪುರುಷ
ಈ ಜಗದಲ್ಲಿ ಕಾಣಸಿಗುವ
 ಒಂದು ಅದ್ಭುತ ಹರುಷ

ಮನದಲ್ಲಿ ಮನೆ ಮಾಡುವ
 ಈ ನಗುವಿನ ಸ್ಪರುಷ
ಜೊತೆಯೊಳು ಸದಾ ಇದ್ದರೆ
 ಎಲ್ಲಿಲ್ಲದ ಒಂದು ಪೌರುಷ

ಹಗಲಿರಲು ದುಡಿದು ದಣಿದು
 ಬೆವರ ಹನಿಯ ಹರಿಸುತ್ತಾ
 ಸಂಸಾರಕ್ಕೆ ನೀನಾದೆ ಗಟ್ಟಿ ಶಕ್ತಿ
 ಜವಾಬ್ದಾರಿಯೊಳು ಕಟು ಭಕ್ತಿ

ಹಗಲು ಇರುಳು ಬೆಳಗಲು
 ಇರುವಂತೆ ಸೂರ್ಯ ಚಂದ್ರ
ಮಕ್ಕಳ ಮುದನಗು ಮೂಡಲು
ಇರೋತ್ಯಾಗಿ ಅಪ್ಪನೆಂಬ ವಜ್ರ

ಹೃದಯದಲ್ಲಿ ಜನ್ಮಿಸಿದ
ಈ ಭಕ್ತಿಯ ಸಾಲುಗಳು
 ನಿನಗರ್ಪಣೆ ಓ ಜನ್ಮದಾತನೆ
 ಅಪ್ಪನೆಂಬ ಸ್ಪೂರ್ತಿದಾತನೆ


About The Author

Leave a Reply

You cannot copy content of this page

Scroll to Top