ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ಒಪ್ಪದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.
ನೀ ಸುಮ್ಮನಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll

ಅಂತರಾತ್ಮ ನಿನ್ನ ಪ್ರೀತಿಗೆ ಶರಣಾಗಿ ಬಿಟ್ಟೇತಿ,
ನೀ ಕಾಣದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll

ರಾಧೆಯಾಗಿ ನಿನ್ನ ದನಿ ಪೂಜಿಸುತ್ತೇನಿ ಗೊತ್ತೇನ,
ನೀ ನೋಡದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll

ಸದ್ದಿಲ್ಲದ ಮನಸ್ಸಿನ್ಯಾಗ ಮೆತ್ತಗ ಬಂದಬಿಟ್ಟಿ,
ನೀ ಒಲಿದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll

ತಾಯಿಗೆ ಗೊತ್ತಿಲ್ಲದ ನಾ ಹೃದಯದೊಳಗಿಟ್ಟಿನಿ,
ನೀ ದೂರವಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll


 

 

About The Author

Leave a Reply

You cannot copy content of this page

Scroll to Top