ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ನಾಚಿದ ಬೆಳದಿಂಗಳು”


ಅಸುನೀಗುತಿದ್ದ ಬೆಳದಿಂಗಳಿಗೆ
ನನ್ನವಳ ಕುರಿತಾಗಿ ಹೇಳುತಿದ್ದೆ
ಒಂಚೂರು ನಗದೆ ಇತ್ತು
ಕೊಂಚವೂ ಆಸೆ ತೋರದೆ
ನನ್ನನೇ ನಿರ್ಲಕ್ಷ್ಯ ಮಾಡುತಿತ್ತು
ಇವನೊಬ್ಬ! ಎನ್ನುತಿತ್ತು
ನನ್ನದೇ ನನಗೆ ಹೇಳುವುದೆಷ್ಟೋ
ಉಳಿದಿದೆ ಕೇಳಿಸಿಕೊಳ್ಳುವರಿಲ್ಲ
ಕಗ್ಗತ್ತಲೆಯು ಹಂಗಿಸಿ ನಗುತಿದೆ
ಬೆಳದಿಂಗಳ ಮನದ
ಮಾತಿಗೆ ಕಿವಿಯಾದರೂ ಚಂದಿರನ
ಬರುವಿಕೆಯತ್ತಲೆ ಅದರೊಲವಿತ್ತು
ನಾನು ನನ್ನ ಒಲವಿನ ದಾರಿ ಹಿಡಿದೆ
ಬೆಳದಿಂಗಳು ನೋವ ಮರೆತು
ನಸುನಗುತಿತ್ತು ನಾಚುತಿತ್ತು.
ಕಲ್ಪನಾ ಎಸ್ ಪಾಟೀಲ



