ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ನಮ್ಮಪ್ಪ”


ಬೆಳಿಗ್ಗೆ ಎದ್ದು—–
ಮನೆ ಬಿಟ್ಟು ಓಡುವ
ನಿಜ ಯಜಮಾನನೇ ನಮ್ಮಪ್ಪ,!!
ದುಡಿದು ನಿತ್ಯವೂ….
ದನಿದು ಮನೆಗೆ ಬರುವ
ನಿಜ ಮನೆದೊಡೆಯ ನಮ್ಮಪ್ಪ,!!
ಶ್ರಮದ ಬೆವರ ಸುರಿಸಿ….
ಕಷ್ಟ ಪರಿಶ್ರಮ ನಿತ್ಯ ಸಹಿಸಿದ
ನಿಜ ಕರ್ಮಯೋಗಿಯೆ ನಮ್ಮಪ್ಪ,!!
ಕುಟುಂಬ ಸಂಸಾರ…
ಹೆಗಲಿಗೇರಿಸಿ ಹೊರಲಾರದ
ಹೊಣೆ ಹೊತ್ತ ಸಾಧು ನಮ್ಮಪ್ಪ,!!
ತನಗಾಗಿ ಸೂನ್ಯ….
ತನ್ನವರಿಗಾಗಿ ತಾನು ಧನ್ಯನೆಂದ
ತ್ಯಾಗಮಯಿ ಆ ಮಾಣಿಕ್ಯ ನಮ್ಮಪ್ಪ,!!
ವೃದ್ಧಾಪ್ಯದಲಿ ಎಂದೂ…
ಮರೆಯದಿರೋಣ ಆ ಹೆತ್ತವರ
“ಮುತ್ತು ಮಾಣಿಕ್ಯ” ಸಮ ಅಪ್ಪಂದಿರ.!!
ಹಮೀದ್ ಹಸನ್ ಮಾಡೂರು



