ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪನೆಂಬೋ ಅಪ್ಪ ಅವನ ಕೊನೆಯುಸಿರು ಚೆಲ್ಲಿದಾಗ
ನಾನು ಕೈಗೂಸು!
ಆರು ದಶಕ ಮತ್ತೆರಡು ಸಂವತ್ಸರಗಳನ್ನು ಅಪ್ಪನಿಲ್ಲದೆ ಕಳೆದಿರುವ ನನಗೆ ಅವನ ಪ್ರೀತಿಯ ಸವಿರುಚಿ ಸಿಕ್ಕಿದ್ದು
ವರ್ಷ ವರ್ಷದ ಅವನ ಶ್ರಾದ್ಧಗಳಂದು ಮಾಡುವ ರವೆಯುಂಡೆ ಪಾಯಸಗಳಲ್ಲಿ

ಅಪ್ಪನ ನೆನಪು ಕಾಡುವುದು
ಅಪ್ಪನ ಹೆಸರು ಲೇಟ್……
ಎಂದು ಶಾಲೆ, ಕಾಲೇಜುಗಳಿಗೆ ಸೇರುವಾಗ ಭರ್ತಿಮಾಡುವ ಅರ್ಜಿಗಳಲ್ಲಿ!
ಅಪ್ಪನೆಂದರೆ ಆಕಾಶವೇ? ಗೊತ್ತಿಲ್ಲ!
ಅಪ್ಪನೆಂದರೆ ಶಾಪಗ್ರಸ್ತ ಗಂಧರ್ವನೇ? ತಿಳಿಯದು!
ಅಪ್ಪನೆಂದರೆ …….
ಅಮ್ಮನ ನೆನಪಕೋಶಗಳಿಂದ
ಹೊರಹೊಮ್ಮಿದ ಭಾವ!
ಆಗಾಗ ಮನೆಯಲ್ಲಿ ಆಡುವ ಮಾತುಗಳಲ್ಲಿ ಇಣುಕುವ ಹೆಮ್ಮೆಯ ಜೀವ!
ಮತ್ತೆ
ನನಗುಸಿರುಕೊಟ್ಟವನು!!
ಅಪ್ಪನೆಂದರೆ….

ಜಯಂತಿ ಕೆ ವೈ

About The Author

Leave a Reply

You cannot copy content of this page

Scroll to Top