ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನೆ ಮೂಲೆ ಮೂಲೆಯಲಿ ಹುಡಕಿದೆ
ನಿನ್ನ ಪುಟ್ಟ ಹೆಜ್ಜೆಯ ಸದ್ದು ಕೇಳದೆ
ಆತುರದಿ ಓಡಿಬರುವ ನಿನ್ನ ನೋಟದ,
ನೆನಪಾಗಿ ಹೃದಯ ತುಂಬಿ ಕಾಡುತ್ತಿದೆ.!!೧!!

ತಿಂಡಿ ಬಟ್ಟಲೂ ಹಾಗೆಯೇ ಉಳಿದಿದೆ,
ಕಾಯುತ ನಿನ್ನ ದಾರಿ ನೋಡುತ್ತಿದೆ.
ಎಲ್ಲಿ ಹೋದೆ ಕಣ್ಮರೆಯಾಗಿ ಹೊರಟೆ
ನಿನ್ನಿಲ್ಲದೆ ಮನವು ಖಾಲಿಯಾಗಿದೆ.!!೨!!

ಮಡಿಲ ಮೇಲೆ ಮಲಗಿದ ಕ್ಷಣಗಳು,
ಮನದಾಳದಿ ಜೀವಂತವಾದ ದಿನಗಳು
ಮುದ್ದಿನ ಮ್ಯಾವ್ ಮ್ಯಾವ್ ಕೇಳಿದ ಕ್ಷಣ
ಕಣ್ಣಂಚಿನಲಿ ಕಂಡ ನಿನ್ನ ತುಂಟಾಟಗಳು!!೩!!

ಕರೆಗೆ ಕಿವಿಗೊಡದೆ ಗಾಳಿಗೆ ತೂರಿದ ಓಟ
ಬೇಡವೆಂದರು ಮತ್ತೆ ನನ್ನ ಮನೆಗೆ ಬಂದ ಆಟ
ನಿನ್ನ ಪುಟ್ಟ ಪಾದಗಳ ಗುರುತು ಕಂಡರೆ,
ನಲಿ ನಲಿದಾಡಿದ ದಿನಗಳ ನೆನಪಿನ ಕಾಟ!!೪!!

ದುಃಖದ ಮೋಡಗಳ ದೂರವಾಗದದು
ಅದೇತ್ತೋ ದೂರ ಮರೆಯಾಗಿ ಹೋದೆ
ನೀ ನೇಟ್ಟಿದ ಪ್ರೀತಿ ಕಳೆದು ಹೋಗದು,
ನೆನಪುಗಳ ಬೆಳಕು ಎಂದಿಗೂ ಆರದು. !!೫!!

ಹೃದಯ ನಿನ್ನನು ದೂರ ತಿಳ್ಳಿದರೂ ನೀ
ಕಲಿಸಿದ ಪ್ರೀತಿ ಹಿಡಿಸಿದೆ ಮನಸ್ಸಿಗೆ,
ಆ ನಿನ್ನ ಮುದ್ದು ಕಣ್ಣುಗಳು, ನಿಷ್ಕಲ್ಮಶ
ಆ ಪುಟ್ಟ ಮುಖ, ನನ್ನ ದಿನದ ನಗು!!೬!!

ಆ ಚೂಪಾದ ಕಿವಿಗಳು ಹೆಜ್ಜೆಯ ಸದ್ದಿಗೆ
ಎಚ್ಚರವಾಗಿ ನಿಲುವ ನಿನ್ನ ಮೈಮಾಟದ
ಸೊಬಗು, ಸವಿಯಲು ಹಬ್ಬವಾಗಿತ್ತು ನನಗೆ
ನೀ ಬಂದರೆ ಮನೆ ತುಂಬಾ ಜೀವ ತುಂಬಿತ್ತ !!೭!!

ನೀ ಹೋದರೆ ಮೌನವೇ ಉಳಿಯುತ್ತಿತ್ತು.
ಮತ್ತೆ ಮತ್ತೆ ಬಂದು ಪ್ರೀತಿ ಹರಿಸಿದ ಬೆಕ್ಕು
ನೋಡದೆ ಮನದ ಬಾಗಿಲು ಮುಚ್ಚಿದೆ.
ಆದರೆ ನೀ ಮಾತ್ರ ಹಠಮಾರಿ ಮಗು,

ಮತ್ತೆ ಮತ್ತೆ ಬಂದು ಹೃದಯ ತಟ್ಟಿದ್ದೆ.
ಆ ನಿನ್ನ ಮುದ್ದು ಮುದ್ದಾದ ಕಣ್ಣುಗಳು…
ಎರಡು ಪುಟ್ಟ ನಕ್ಷತ್ರಗಳು ಹೊಳಪು
ಒಮ್ಮೆ ನೋಡಿದರೆ ಸಾಕೆನಸದು …..

ಕಲ್ಲಿನ ಮನಕರಗುತ್ತು ಆ ಪುಟ್ಟ ಮುಖ,
ಹಾಲಿನ ನೊರೆ ಮೃದು, ಚೂಪಾದ ಕಿವಿಗಳು,
ಮಾತು ಕೇಳುತಿರೆ ನೆಟ್ಟಗೇ ನಿಲುವ ಆಟ
ಮೈ ತುಂಬಿದ್ದ ಬಣ್ಣವೋ ದೇವರು ಬಿಡಿಸಿದ

ಚಿತ್ರವೊಂದು! ಕಂದು ಮೋಡದ ನಡುವೆ
ಕಪ್ಪು ಮಳೆಯ ಗೆರೆಗಳಂತೆ, ನಿನ್ನ ಮೈಮಾಟ
ಕಣ್ಣಿಗೆ ಹಬ್ಬವಾಗಿತ್ತು.ಪುಟ್ಟ ಹೆಜ್ಜೆಗಳ ಸದ್ದು,
ಮೃದುವಾದ ಬಾಲದ ನಾಟ್ಯ ಹೇಳ್ತಿರೋದು,

ಸುತ್ತ ಸುತ್ತುವ ನಿನ್ನ ಪ್ರೀತಿ, ಮಾತಿಲ್ಲದ
ಮಮತೆಯ ಭಾಷೆಯಾಗಿತ್ತು.ನಾನು ದೂರ
ಸರಿದರು,ಮತ್ತೇ ಮತ್ತೇ ಬಂದೆ… ಅಂದು
ಅರಿಯಲಿಲ್ಲ ಅದು ಕೊನೆಯ ಬೆಟ್ಟೆಂದು..

ಈಗ ಮನೆ ತುಂಬಾ ನಿಶ್ಯಬ್ದ, ನಿನು ಪ್ರತಿ
ಮೂಲೆಯಲ್ಲೂ ಜೀವಂತವಾಗಿರುವೆ ಹಾಗೆ
ಮುದ್ದಾದ ಚೇಷ್ಟೆಗಳೆಲ್ಲ ಕಂಗಳ‌ ನೀರು
ಅದೆಂದು ನಿನ್ನ ಮೋಹದಿ ಸಿಲುಕಿದೆ….

ಎಲ್ಲೋ ಒಂದು ಕಡೆ ನೀ ಇದ್ದರೆ, ಒಮ್ಮೆ
ಮಾತ್ರ ಬಂದು ನೋಡು ಜೀವಾ.
ಕಣ್ಣಗಳ ನೋಟಕ್ಕೆ ಕಾಯುತ್ತಿವೆ,
ಮನದ ಮನೆಯ ಬಾಗಿಲು ತೆರೆದು ಮತ್ತೇ ಬರುವಿಗಾಗಿ ಕಾಯುತ್ತಿರುವೆ


About The Author

Leave a Reply

You cannot copy content of this page

Scroll to Top