ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅದೆಷ್ಟು ಮುದ್ದಿಸಿ ಹಿಡಿದರೂ,ಮೂಷ್ಟಿಯಲ್ಲಿನ ಮರಳು ಸೋರಿದಾಗ ನೀ ನೆನಪಾದೆ
ರಾತ್ರಿಯಿಡೀ ನಿಟ್ಟಿಸುತ ಕೂತರೂ,ಬೆಳಕಾದಂತೆ ಚಂದ್ರ ಮರೆಯಾದಾಗ ನೀ ನೆನಪಾದೆ

ಹೊರೆಯೆನಿಸಿದರೂ ಎಂದೂ ಹೊರಗೆಲ್ಲೂ ಹೇಳಿಕೊಳ್ಳಲಿಲ್ಲ
ಹಗಲನು ಹೊಂಗನಸಿನಂತೆ ಬದುಕಿದರೂ ,ಕತ್ತಲಾದಂತೆ ರವಿಯು  ಕರಗಿದಾಗ ನೀ ನೆನಪಾದೆ

ಪ್ರತಿದಿನವೂ ಮಮತೆಯಿಂದ, ನಗು ನಗುತಾ ನೋಡಿಕೊಂಡೆ
ಅಡಿಗಡಿಗೆ ನೀರುಣಿಸಿ ಪೋಷಿಸಿದರೂ, ಗಿಡವು ಹೂ ಬಿಡದಾದಾಗ ನೀ ನೆನಪಾದೆ

ನನ್ನದೆನ್ನುವ ಮೋಹದಲಿ ಪ್ರತಿ ಹೊಡೆತವನೂ ಅಪ್ಪಿಕೊಳ್ಳುತಾ ಹೋದೆ
ಸುನಾಮಿಯಿಂದ ಭೋರ್ಗರೆದು ಸಾಗರ ಅತ್ತರೂ, ಆ ಬಂಡೆ ಅನುನಯಿಸದಾಗ ನೀ ನೆನಪಾದೆ

ತನ್ನ ಶಾಂತ ಕಂಗಳನೇ ತಂಗುದಾಣದಂತೆ  ನೀಡಿದಳು ವಾಣಿ,
ಬೇಡೆಂದರೂ ಕೃತಘ್ನನಂತೆ ಅನ್ಯರೆದುರು ಕಂಬನಿ ಸುರಿದಾಗ ನೀ ನೆನಪಾದೆ


About The Author

6 thoughts on “ವಾಣಿ ಯಡಹಳ್ಳಿಮಠ ಅವರ ಗಜಲ್”

Leave a Reply

You cannot copy content of this page

Scroll to Top