ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮದೆನ್ನುವ ಪುಟ್ಟ
ಮನಸ್ಸು ಪುಟ್ಟ ದೋಣಿಯಂತೆ
ವಿಹಾರ ಹೊರಡುತ್ತದೆ
ಬದುಕಿನುದ್ದಕ್ಕೂ
ಎಲ್ಲರ ಮನದಿ ಮಲ್ಲಿಗೆಯಾಗಿ
ಬಳ್ಳಿಯಂತೆ ಹಬ್ಬಿ
ನಿಂತಿರುವ ಬದುಕಿಗೆ
ಚಲನೆಯಾಗುತ್ತದೆ
ವಿಶಾಲ ಆಗಸದ ಬಾನಂಚು
ಮುಟ್ಟುವ ಹಕ್ಕಿಯ
ರೆಕ್ಕೆಯ ಬಡಿತವಾಗಿ
ಮನಸ್ಸು ತುಂಬುತ್ತದೆ
ಗೂಡಂಗಡಿಯ ಮರದ
ಬೆಂಚುಗಳ ಮೇಲೆ
ಕುಳಿತು ಅವಲಕ್ಕಿ
ತಿನ್ನುವಾಗ ಅರಿವಿನ
 ಮೂಲಕ್ಕೊಂದು ಅಡಿಪಾಯದ
ಚಿತ್ರ ಬರೆಯುತ್ತದೆ
ಹೂವಿನಂದದ ಮಗುವಿನ ನಗು
ಕವಿತೆಯಾಗಿ ಸಾಲುಗಳ
ಬರೆದು ಬೆಟ್ಟವಾಗುತ್ತದೆ
ಬೆಟ್ಟದ ತುದಿಯಿಂದ
ಹರಿದು ಬಂದ ಝರಿಯೊಂದು
ಜೀವವಾಗಿ ಊರ
ತುಂಬಾ ಹರಿಯುತ್ತದೆ
ಬೆಳಗು ನಗುವ ಹೂಗಳ
ಕಂಪಿನ ನಡುವೆ ನಿಂತು
ಗಾಳಿಯಲ್ಲಿ ಸುಳಿದಾಡುತ್ತದೆ
ಮನಸಿನ ಸೇತುವೆ ಮೇಲೆ
ಅನ್ನ ನೀರಿನ ಘನತೆ
ಮನಸು ಮುಟ್ಟುತ್ತದೆ
ಸುಮ್ಮನೇ ಸೈಕಲ್ ಮೇಲೆ
ಕುಳಿತು ಹೋದ ಹಿರಿಯನ
ಹಿಂದೆ ಇರುವ ಭತ್ತದ
 ಸಸಿಗಳಲ್ಲಿ ಮತ್ತೊಂದು
ಸೇತುವೆಯ ಮಾತು
ನೆಲದನಿಯಾಗಿ ಕೇಳುತ್ತದೆ
ಮನಸಿನ ಮನಸಿಗೆ
ಮಾತೇ ಸೇತುವೆಯಾಗಿ
ಮನಸ್ಸು ದಾಟಿಸುತ್ತದೆ
ಮನದ ಖುಷಿಗೆ
ಬಣ್ಣ ತುಂಬಿ
ಮಾಯವಾಗುತ್ತದೆ……..



ನಾಗರಾಜ ಬಿ. ನಾಯ್ಕ

About The Author

Leave a Reply

You cannot copy content of this page

Scroll to Top