ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
“ನೆನಪಿನ ಸಾಲು”


ತಿರುಗಿ ಬಾರದ ಪುಟಗಳು,
ನೆನಪಿನ ಬಂಡಿಯಲಿ ಮರೆ ಕ್ಷಣಗಳು,
ಚಿನ್ನದ ರಥದಲ್ಲಿ ಓಡಿದ ಬಾಲ್ಯ,
ಇಂದಿನ ನೆನಪಲಿ ಅರಳಿದ ಕಾವ್ಯ.
ಕೆಸರಲಿ ಹೊರಳಾಡಿದ ದಿನಗಳು,
ಹಸಿರಲಿ ಓಡಿದ ಹೆಜ್ಜೆಗಳು,
ಅಮ್ಮನ ಮಡಿಲ ಸವಿ ನಿದ್ದೆಯ ಸುಖ,
ಇಂದು ಬರಿ ನೆನಪಿನ ಮುಖ.
ಗೆಳೆಯರ ಜೊತೆಗೂಡಿ ನಕ್ಕ ದಿನಗಳು,
ಕಾಗದದ ದೋಣಿ ತೇಲಿದ ದಿನಗಳು,
ಚಿಂತೆಯಿಲ್ಲದ ನಿರಾತಂಕದ ನಗೆ,
ಮರಳಿ ಬಾರದು ಸಂಭ್ರಮ ಜಗತ್ತಿನೆಡೆಗೆ.
ಕಾಲ ಚಕ್ರ ಉರುಳುತ ಸಾಗಿದೆ,
ವರ್ತಮಾನದ ಬದುಕು ಯಾಂತ್ರಿಕ,
ಹಳೆಯ ದಿನಗಳ ನೆನೆದ ಮನಕೆ,
ಮಧುರ ಮೌನ ಆವರಿಸಿದೆ ತನಗೆ.
ಹಿಂತಿರುಗಿ ನೋಡಿದೆ ನೆನಪಿನ ಸಾಲು,
ಕಳೆದು ಹೋದ ದಿನಗಳು ಜೀವನದ ಹಾಲು.
ಬಾಲ್ಯ ಯೌವನ ಮುಪ್ಪು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ




ನೆನಪಿನ ಸಾಲು… ಮರಳಿ ಬಾರದ ದಿನಗಳು….ತಿರುಗಿ ಬಾರದ ಪುಟಗಳು… ಅಚ್ಚಳಿಯದ ನೆನಪುಗಳು…ಎಂದೆಂದಿಗೂ ಅಮೂಲ್ಯ
“ನೆನಪಿನ ಸಾಲು” ಕವನದಲ್ಲಿ, ಬಾಲ್ಯ ಜೀವನದ ಚಿನ್ನದ ನೆನಪು, ಯೌವನದ ಕನಸುಗಳು, ಮುಪ್ಪಿನ ನೆನಪುಗಳು, ಮಧುರವಾಗಿ ಮೂಡಿಬಂದಿದೆ.