ಕಾವ್ಯ ಸಂಗಾತಿ
ಡಾ.ರೇಖಾಉದಯ್
ಗಜಲ್


ನಾನೆಂಬ ಅಹಂಕಾರ ನಿನ್ನನ್ನೇ ಸುಡುವುದು ಮರುಳೇ
ಅಂತಿಮದಲ್ಲಿ ನಿನ್ನನ್ನೇ ನಾಶ ಮಾಡುವುದು ಮರುಳೇ.
ಪ್ರೇಮ ಪ್ರೀತಿಯಲ್ಲಿ ಗೆಲ್ಲಬಹುದು ಜಗದ ಜೀವಿಗಳನ್ನ
ದ್ವೇಷ ಹಗೆಗಳು ಪಾತಾಳಕ್ಕೆ ದೂಡುವುದು ಮರುಳೇ
ಹಿರಿಯರು ಕಿರಿಯರೆಂಬ ಗೌರವ ನೀಡುವುದ ಕಲಿತುಕೋ
ನಾನೆಂದು ಮೆರೆದರೆ ಆತ್ಮವೇ ಕಾಡುವುದು ಮರುಳೇ
ಹಿತಚಿಂತಕರು ಹಿತಶತ್ರುಗಳ ಗುರುತಿಸುವುದ ತಿಳಿದುಕೋ
ದುರ್ಬುದ್ಧಿಯೊಳಿದ್ದರೆ ವಿಧಿ ಬೇರೆ ಆಡುವುದು ಮರಳೇ
ರೇಖೂ ಇರುವ ಬದುಕನು ಚಂದದಿ ಬದುಕಲು ಹೇಳಿಬಿಡು
ದುರುಳರ ಸಂಗದಿ ನಿನ್ನ ಬದುಕೇ ಕೆಡುವುದು ಮರುಳೇ
ಡಾ.ರೇಖಾಉದಯ್



