ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನನ್ನೆಲ್ಲಾ ಕನಸುಗಳಿಗೆ ರೆಕ್ಕೆ ಕಟ್ಟಿ,
ರಾಶಿ ರಾಶಿ ಪ್ರಯತ್ನಗಳು ಫಲಿಸಲೆಂದು ದೇವರಲ್ಲಿ ಹರಕೆ ಹೊತ್ತು,
ಉಪವಾಸ–ವ್ರತ ಮಾಡಿ ನನ್ನ ಬದುಕನ್ನು ಸಾರ್ಥಕತೆಯ ದಾರಿಯತ್ತ ದೂಡಿದಳು…
ಅವಳು ನನ್ನ ಅಮ್ಮ 

ಅವಳ ಪ್ರಾರ್ಥನೆಗಳಲ್ಲಿ ನನ್ನ ಭವಿಷ್ಯ ಇತ್ತು,
ಅವಳ ತ್ಯಾಗಗಳಲ್ಲಿ ನನ್ನ ಯಶಸ್ಸು ಇತ್ತು,
ಅವಳ ನಂಬಿಕೆಯಲ್ಲಿ ನನ್ನ ಜೀವನದ ಬೆಳಕು ಇತ್ತು…

ಸೋತಾಗ ಸೋಲಿಗೆ ಹೆದರಿ,
ಖಿನ್ನತೆಯತ್ತ ಮುಖ ಮಾಡಿ ನರಳಲು
ಬಾನೆತ್ತರ ಭರವಸೆ ತುಂಬಿ,
ತೂಗಾಡುವ ಮಂಚದಲ್ಲಿರಿಸಿ,
ತೊಡೆಯ ಮೇಲೆ ಮಲಗಿಸಿ,
ಮಮತೆಯ ಸ್ಪರ್ಶದಿಂದ ಹುರಿದುಂಬಿಸಿದಳು…
ಅಮ್ಮ. 

ಹೇಗೆ ತೀರಿಸಲಿ ಋಣವ,
ಮತ್ತೊಮ್ಮೆ ಮಗುವಾಗಿ ಜನ್ಮವೆತ್ತಲೇ…
ಅವಳಿಗೇ ತಾಯಿಯಾಗಿ ಮಡಿಲಾಗಲೇ,
ಅಕ್ಕನಾಗಿ ಅಪ್ಪುಗೆಯ ಕೊಡಲೇ,
ತಂಗಿಯಾಗಿ ತುಂಟಾಟವಾಡಲೇ,
ಯಾವ ಬಂಧವಾಗಿ ಬಂದರೂ ಸರಿ,
ಅವಳ ಪ್ರೀತಿಯ ನೆರಳಲ್ಲಿ ಮತ್ತೆ ಬದುಕಲೇ… 

ಸರಿ ಸಾಟಿ ಯಾರಿಹರು ಆ ಕರುಣೆಗೆ,
ದೇವರಿಗಿಂತ ಹೆಚ್ಚಾದ ಜೀವಕೆ…
ನೋವನ್ನೆಲ್ಲ ನಗುವಿನಲ್ಲಿ ಮರೆಮಾಚಿ,
ತನ್ನ ಕನಸುಗಳನ್ನೇ ತ್ಯಾಗಮಾಡಿ,
ನಮ್ಮ ಬದುಕಿಗೆ ಬೆಳಕಾದ ಮಹಾತಾಯಿಗೆ…
ಈ ಜನ್ಮ ಸಾಲದು ಕೃತಜ್ಞತೆ ಸಲ್ಲಿಸಲು… 


     

About The Author

1 thought on “ಅನಿತಾ ಕೃಷ್ಣಮೂರ್ತಿ ಕವಿತೆ “ನನ್ನ ಅಮ್ಮ””

Leave a Reply

You cannot copy content of this page

Scroll to Top