ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
“ಹೊತ್ತು ಮುಳುಗುವ ಮುನ್ನ”


ನೆರಳು ಬೆಳಕಿನಾಟ
ಸದ್ದಿಲ್ಲದೇ ನಡೆದಿದೆ
ಪ್ರಕೃತಿಯ ಸೊಬಗಲೂ
ಹಣಾ ಹಣಿ ಗದ್ದಲವಿಲ್ಲದೆ ಸಾಗಿದೆ.
ಬಗೆಯ ಆಕಾರ
ಅನಂತ ಶಕ್ತಿಯ ಹೊದಿಕೆ
ಬಾನಂಚಿನ ವರೆಗೂ
ರಮ್ಯ ಮನೋಹರ.
ಒಂದೊಮ್ಮೆ ಬಿಡುಗಡೆ
ಸಿದ್ಧವಾಗಿಯೂ ಇದೆ
ಆಶವಾದುವೂ ಜೊತೆ ಜೊತೆಗೆ
ಹಂಬಲದ ದಿನಮಾನಗಳೂ ಇವೆ.
ಹೊತ್ತು ಮುಳುಗುವ ಮುನ್ನ
ಆಯ್ದುಕೊ ಮುತ್ತು
ಬಿತ್ತರಿಸಿ ಬಿಡು ಹಿಡಿದಿಟ್ಟ ಶಕ್ತಿ
ಮತ್ತೇನಿದೆ ಮಮತೆ ಮಡಿಲು ಬಿಟ್ಟು
ಮೆತ್ತನೆ ಹಾಸಿಗೆ ಹೊದಿಯುವ ಮುನ್ನ
ಶೋಧಿಸಿ ಬಿಡು ರೋಧನೆಯ ಹತ್ತಿಕ್ಕಿ
ಬೋಧನೆಯ ಅರಿವಿನ ಹೊನಲಲಿ
ಚಿತ್ತ ಶುದ್ಧಿ ಮಾಡಿಕೋ.
ರೇಷ್ಮಾ ಕಂದಕೂರ



