ಶೂನ್ಯದಿಂದ
ಸೃಷ್ಟಿಯೆಡೆಗೆ ಸಾಗೊ ತಮ್ಮಾ ಅಂದರು!
ಅಪರೂಪದ ಗೆಳೆತನ
ಕೊನೆತನಕ ಜೊತೆ ಇರುವ ಭರವಸೆಯ ನೀನಿತ್ತೆ
ವಿಶ್ವಾಸ ಉಳಿಸಿಕೊಳ್ಳುವ ಆತ್ಮವಿಶ್ವಾಸ ನನ್ನಲ್ಲಿದೆ
ಮೊದಲ ಮಳೆಯ ಜಿನುಗು
ಸುರಿಯುತ್ತಿದ್ದ ಮಳೆಯೊಂದು ಯಾವುದೋ ಅಡ್ಡ ಗಾಳಿಯ ನೆವಕೆ ಹಾರಿಯೇ ಬಿಟ್ಟಿತು. ಅವಳ ಸಂಬಂಧಿಗಳು ಊರು ಖಾಲಿ ಮಾಡಿ ಆ ಊರ ನೆಂಟಸ್ತಿಕೆ ತಪ್ಪಿ ಹೋಯಿತು. ಅವ ಓದಲಿಕ್ಕೆ ಮತ್ತೆಲ್ಲಿಗೋ ಹೋದ.ದಾರಿಗಳು ಹೇಳದೆ ಕೇಳದೆ ದಾರಿ ಬದಲಿಸಿದವು.
ಗಜಲ್
ಅನುರಾಗದಿ ಕೊಳಲು ನುಡಿದಿರೆ ಮನವದು ಪರವಶ ನಯನಗಳಾಗಿವೆ ಅರೆನಿಮೀಲಿತ
ಅನುಭಾವದ ಸೊಗದಲಿ ಮೇರೆಯಿರದ ಪರಿಭಾವ ವೇಣುವು ಉಲಿಯಲು ಸಖಿ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—34 ಆತ್ಮಾನುಸಂಧಾನ ಹಾಸ್ಟೆಲ್ ಊಟದಲ್ಲಿ ಮೈತುಂಬಿಕೊಂಡೆ ‘ಶಾಲ್ಮಲಾ ಹಾಸ್ಟೆಲ್ನ ಊಟದ ವ್ಯವಸ್ಥೆ ತುಂಬ ಸೊಗಸಾಗಿತ್ತು. ದಿನವೂ ಒಂದೊಂದು ಬಗೆಯ ಕಾಳು-ಕಡಿಯ ಬಾಜಿ, ಸೊಪ್ಪಿನ ಪಲ್ಯ, ಹಸಿ ತರಕಾರಿಯ ಕೋಸಂಬರಿ, ದಿನಕ್ಕೊಂದು ವಿಧದ ಚಟ್ನಿ, ಕೆನೆ ಮೊಸರು, ರೊಟ್ಟಿ ಇಲ್ಲವೆ ಚಪಾತಿ, ಬಯಸಿದಷ್ಟೂ ಅನ್ನ…. ಇತ್ಯಾದಿಗಳಿಂದ ಊಟವು ಸಮೃದ್ಧವಾಗಿರುತ್ತಿತ್ತು. ರವಿವಾರದಂದು ವಿಶೇಷ ಸಿಹಿ ತಿನಿಸು ಪೂರೈಕೆಯಾಗುತ್ತಿತ್ತು. ಇತರ ವಿದ್ಯಾರ್ಥಿಗಳ ಮಾತು ಅಂತಿರಲಿ, ನನಗೂ ನನ್ನಂಥ ಹಲವಾರು ವಿದ್ಯಾರ್ಥಿಗಳಿಗೆ ಇಲ್ಲಿನ ಊಟದ […]
ಪದೇ ಪದೇ ಕರುಳ ಕತ್ತರಿಸಿ ಕಾಡುವಿರೇಕೆ
ಆರದೋ ಮೊಲೆಯುಂಡು ಯಾರನೋ ಸೇರಿದ ಜೀವ
ಯಾರ ಬಳಿ ಹೇಳಲಿ
ಮೂಕವಾಗಿಹೆನಯ್ಯ !
ಸಾಂಸ್ ಏ ಗಜಲ್
ಕೃತಿ ಹೆಸರು…..ಸಾಂಸ್ ಏ ಗಜಲ್ (ಕನ್ನಡ ಗಜಲ್ ಗಳು)
ಲೇಖಕರು…ಡಾ.ರೇಣುಕಾತಾಯಿ ಎಂ ಸಂತಬಾ ( ರೇಮಾಸಂ) ಮೊ.೯೮೪೫೨೪೧೧೦೮
ಪ್ರಥಮ ಮುದ್ರಣ ೨೦೨೦
,ಪ್ರಕಾಶನ…* ಸಂತಬಾ ಪ್ರಕಾಶನ ಹುಬ್ಬಳ್ಳಿ*
ವ್ಯಾಪಾರ
ಮುಖವನು ಮರೆಸುವ ಮುಖವಾಡ
ಮನವನೂ ಮರೆಸುವ ಮುಖವಾಡ
ತನ್ನದಲ್ಲದ್ದನ್ನು ಮೆರೆಸುವ ಮುಖವಾಡ
ಮೌನದಿ ಪದಗಳ ಜೋಡಿಸುತ್ತ
ಹೆಣೆದಿರುವೆ ಗೆಳೆಯ ನೀನು ಶ್ರಂಗಾರ ಗೀತೆ
ಇಲ್ಲಿರುವ ಮಾತೃರೂಪೀ ಸಂಸ್ಕೃತಿ, ಕುಟುಂಬ ರಚನೆ ಹೆಣ್ಣಿನ ಅನನ್ಯತೆಗೆ ದೊಡ್ಡ ಕೊಡುಗೆ ನೀಡಿದೆ. ಅವೆಲ್ಲವೂ ಈ ಪಾಡ್ದನಗಳಲ್ಲಿ ಹರಡಿಕೊಂಡಿದೆ. ಹೆಚ್ಚಿನ ಪಾಡ್ದನಗಳು ದುರಂತ ವಸ್ತುವನ್ನು ಹೊಂದಿರುತ್ತದೆ. ಎಲ್ಲವೂ ತುಳುವರಿಗೆ ಬಲು ಆಪ್ತ. ಇವೆಲ್ಲದರಿಂದ ” ಸಿರಿ” ಎಂಬ ಪದವೇ ನನ್ನೊಳಗೊಂದು ಆಕರ್ಷಣೆಯ ಮೂಲ ಬೀಜಮಂತ್ರವಾಗಿ ಅರಿವಿನ ಕ್ಷೇತ್ರ ವಿಸ್ತರಿಸುವ ಮುನ್ನವೇ ಬಿತ್ತನೆಯಾಗಿತ್ತು