ಗಜಲ್
ಸುಜಾತಾ ರವೀಶ್
ಯಮುನೆಯ ತೀರಕ್ಕೆ ರಾಧೆಯು ಕರೆದಳು ಮಾಧವನ ಕವಿತೆ ಬರೆಯಲು ಸಖಿ
ತುಮುಲವ ದೂರಕ್ಕೆ ತಳ್ಳುತ ದುಗುಡದ ಬೇಸರ ದುಃಖವ ಮರೆಯಲು ಸಖಿ
ಹೃದಯದ ನೋವಿನ ಚಿತ್ರಣ ಕೇಶವನ ಅರಿವಿಗೆ
ಬಾರದೆ ಇರದೀತೇನು ಪ್ರಣಯದ ಲೇಪವ ಹಚ್ಚುತ ನೋವನು ಶಮಿಸಿದ ವ್ಯಾಕುಲ ಸರಿಸಲು ಸಖಿ
ಬಣ್ಣನೆಗೆ ಬಾರದ ಮಳೆಯ ಬಿಲ್ಲಿನ ರಂಗಿನಲಿ
ಮನಸು ಮಿಂದಂತಿದೆಯೀಗ ಹುಣ್ಣಿಮೆ ಚಂದ್ರನು ಬಾನಿನಲ್ಲಿ ಬೆಳಗುತ ನಗುತಿಹ ಸರಸವ ಸವಿಯಲು ಸಖಿ
ಅನುರಾಗದಿ ಕೊಳಲು ನುಡಿದಿರೆ ಮನವದು ಪರವಶ ನಯನಗಳಾಗಿವೆ ಅರೆನಿಮೀಲಿತ
ಅನುಭಾವದ ಸೊಗದಲಿ ಮೇರೆಯಿರದ ಪರಿಭಾವ ವೇಣುವು ಉಲಿಯಲು ಸಖಿ
ಜಾಜಿಯ ಕಂಪದು ಬಿರಿಯುತ ಸೃಜಿಸಿದೆ ಸುಗಂಧದ ಸುಂದರ ಅದ್ಭುತ ಲೋಕ
ಸುಜಿಯ ಮನವಿದು ಸ್ವಪ್ನಲೋಕದೆ ತಲ್ಲೀನ ಇಹದ ಅರಿವು ತೊರೆಯಲು ಸಖಿ
**********************
ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು
ಚಂದ ಸುಜಾತಾ