ವಾರದ ಕವಿತೆ

ಗಜಲ್

ಪ್ರೊ. ರಾಜನಂದಾ ಘಾರ್ಗಿ

silhouette of man and woman

ನನ್ನ ನಿನ್ನ ನಡುವೆ ಮೌನ ಗೀತೆ
ಹೃದಯ ತುಂಬಿದ ಭಾವ ಗೀತೆ

ಭಾವನೆಗಳಿಗೆ ಹೊಸ ಅರ್ಥ ತುಂಬಿದೆ
ನಿನ್ನ ಕಣ್ಣೋಟ ಬರೆದ ಪ್ರೇಮ ಗೀತೆ

ಮನದ ಆಸೆಗಳು ಸಂಗೀತವಾಗಿ
ನಾವು ಹಾಡಿದ ಯುಗಳ ಗೀತೆ

ಮೌನದಿ ಪದಗಳ ಜೋಡಿಸುತ್ತ
ಹೆಣೆದಿರುವೆ ಗೆಳೆಯ ನೀನು ಶ್ರಂಗಾರ ಗೀತೆ

ಮೂಡಿಸುತಿಹೆ ಪ್ರೇಮದ ಅನುಭೂತಿ
ತಂತಿಯ ಮೀಟುತ ನುಡಿಸಿಹೆ ಹೃದಯ ಗೀತೆ.

ಬದಲಾಗುತಿದೆ ಗೆಳೆತನದ ವ್ಯಾಖ್ಯಾನ
ರಾಜಿ ಸ್ಪುರಿಸುತಿರೆ ಬಾಳಿನಲಿ ಆತ್ಮ ಗೀತೆ.


One thought on “

Leave a Reply

Back To Top