ಕವಿತೆ
ಪದೇ ಪದೇ ಕರುಳ
ಕತ್ತರಿಸಿ ಕಾಡುವಿರೇಕೆ
ವೈ ಜಿ ಅಶೋಕ್ ಕುಮಾರ್


ಕೆಳಮನೆಯಲಿ ಗೆದ್ದು ಬೀಗಿದ ಮಸೂದೆ ಮೇಲ್ಮನೆಯಲಿ
ಬಿದ್ದು ಹೋದಂತೆ
ಒಳಮನೆಯ ತೆರೆ ಮನವೇ
ಕೊಂಬುಂಟು, ಕಹಳೆಯುಂಟು
ಮುನ್ನೂರು ಕುರ್ಚಿಗಳುಂಟು
ಖಂಡ ಖಂಡವಾಗಿ ತುಂಡುರಿಸಿ ಮತಕ್ಕೆ ಹಾಕಿ ತೂಗುವಿರೇಕೆ
ಉಂಡ ಹಸಿವಿಗೆ
ಮಸೂದೆ ಬೇರೆ ಬೇಕೆ
ಬೆನ್ನ ಮೇಲಿನ ಗಾಯವ ಕುಕ್ಕಿ ಕುಕ್ಕಿ ತಿನ್ನುವ ಕಾಗೆಗಳಂತೆ,
ಸಾವಿರ ಕೆಚ್ಚಲ ಹಾಲು ಹರಿದಿರಲು ರಕ್ತವಾಗಿ ; ಸತ್ತ
ಆತ್ಮಕೆ ಶೃಂಗಾರವೇಕೆ
ಕೊಟ್ಟ ಮಾತು ,
ಇಟ್ಟ ಸಗಣಿ, ಸುಟ್ಟ ಬೂದಿ
ಪಟ್ಟದ ನೊಸಲೀಗ
ಖಾಲಿ ಖಾಲೀ
ಆರದೋ ಮೊಲೆಯುಂಡು ಯಾರನೋ ಸೇರಿದ ಜೀವ
ಯಾರ ಬಳಿ ಹೇಳಲಿ
ಮೂಕವಾಗಿಹೆನಯ್ಯ !
*********************