ಕಾವ್ಯಯಾನ

ಕಾವ್ಯಯಾನ

ಅವರು ಒಪ್ಪುವುದಿಲ್ಲ. ! ವಿಜಯಶ್ರೀ ಹಾಲಾಡಿ ಕಾಫಿಯಲ್ಲಿ ಕಹಿ ಇರಬೇಕುಬದುಕಿನ ಹಾಗೆ ಮುತ್ತುಗದ ಹೂ ರಸಕುಡಿವ ಮಳೆಹಕ್ಕಿರೆಕ್ಕೆ ಸುಟ್ಟುಕೊಳ್ಳುತ್ತದೆ ಬೂದಿಯಾದ ದಿನಗಳಆಲಾಪಿಸುವ ಇರುಳಹಕ್ಕಿನಿರಾಳ ಕಂಡುಕೊಳ್ಳುತ್ತದೆ ದಟ್ಟ ನೋವು ಒಸರುವಅಂಟಿನ ಮರ ಯಾರಸಾಂತ್ವನಕ್ಕೂ ಕಾಯುವುದಿಲ್ಲ ಬೋರಲು ಬಿದ್ದ ಆಕಾಶಬುವಿಯ ಕಣ್ಣೀರಿಗೇನೂಕರಗಿದ್ದು ಕಂಡಿಲ್ಲ ನದಿಯಲ್ಲಿ ತೇಲಿಬಂದಹಸಿಮರ -ನಾಗರಿಕತೆಯಹೆಣವೆಂದು ಅವರು ಒಪ್ಪುವುದಿಲ್ಲ.  *********

ಕಾವ್ಯಯಾನ

ಸೂತಕ ಶಾಂತಾ ಜೆ ಅಳದಂಗಡಿ ಹುಚ್ಚು ತುರಗ ಈ ಮನ ದಿಕ್ಕೆಟ್ಟು ಓಡುತಿದೆ ಕಾಣಲು ಹೂ ಬನ ಪ್ರೀತಿ ಎಂದರೆ ನೀರ್ಗುಳ್ಳೆ ಒಲವ ನುಡಿಯಲಿರುವುದೆಲ್ಲ ಸುಳ್ಳೆ ಹೂವ ಮಧುವ ಹೀರುವ ವರೆಗು ಮೋಹದ ಮಾತುಗಳ ಬೆರಗು ದಾಹ ತೀರಿದಮೇಲೆ ನದಿಯ ಹಂಗಿಲ್ಲ ವಶವಾದನಂತರ ಅವಳು ನಲ್ಲೆಯಲ್ಲ ಪ್ರೇಮ ಸಾಯುತ್ತೆ ನರಳಿ ನರಳಿ ಬಾರದೆಂದಿಗೂ ಅದು ಮರಳಿ ಮರುದಿನವೂ ರವಿ ಉದಯಿಸುತ್ತಾನೆ ಹೊಂಗಿರಣಗಳ ಭುವಿಗೆಲ್ಲ ಚೆಲ್ಲುತ್ತಾನೆ ಸತ್ತಪ್ರೀತಿಯ ಸೂತಕ ಆನಂದಿಸಲಾಗದು ಸುಂದರ ಬೆಳಕ ಮೈ ಮರೆತರೆ ಒಂದು ಕ್ಷಣ […]

ಕಾವ್ಯಯಾನ

ನೀನೀಗ ಇದ್ದಿದ್ದರೆ ಚೈತ್ರಾ ಶಿವಯೋಗಿಮಠ “ನೀನೀಗ ಇದ್ದಿದ್ದರೆ” ಆ ಕಲ್ಪನೆಯೇ ಚಂದ ಬಹುಶಃ ಹೋಗುತ್ತಿದ್ದೆವು ಗಿರಿ-ಕಣಿವೆಗಳ ಮೇಲೆ ಹತ್ತಿಳಿಯಲು!, ಹೂವಿಂದ ಹೂವಿಗೆ ಹಾರುವ ಬಣ್ಣದ ಚಿಟ್ಟೆಗಳ ಹಿಡಿಯಲು, ಓಡುವ ನದಿಯ ಬೆನ್ನುಹತ್ತಲು, ಹಿಮ ಪರ್ವತಗಳ ಮೇಲೇರಿ ಹಿಮದ ಬೊಂಬೆಯ ಮಾಡಿ ನಲಿಯಲು.. ನೀನೀಗ ಇದ್ದಿದ್ದರೆ ಬಹುಶಃ ನನ್ನೆಲ್ಲ ಕ್ಷಣಗಳು ಅಪ್ಪನೆಂಬ ಮಂತ್ರ ಪಠಣವೇ! ಹೊಸ ಪುಸ್ತಕಗಳೋದುವ ನನ್ನ ನೆಚ್ಚಿನ ಸಹಪಾಠಿಯಾಗುತ್ತಿದ್ದೆ ಬಂದ ಹೊಸ ಸಿನಿಮಾಗಳ ನನ್ನ ಖಾಸಗಿ ವಿಮರ್ಶಕನಾಗುತ್ತಿದ್ದೆ! ಎಲ್ಲ ಪ್ರಚಲಿತ ವಿಷಯಗಳ ಮೆಚ್ಚಿನ ವಿಶ್ಲೇಷಕನಾಗುತ್ತಿದ್ದೆ! ನೀನೀಗ […]

ಕಾವ್ಯಯಾನ

ಮಕ್ಕಳಪದ್ಯ ಅಪ್ಪನೇ ಪ್ರೀತಿ ನಾಗರೇಖಾ ಗಾಂವಕರ ಅಪ್ಪನದೇಕೆ ಕಂಚಿನಕಂಠ ನಿನ್ನಂತಿಲ್ಲಲ್ಲಾ ಕಣ್ಣುಗಳಂತೂ ಕೆಂಡದ ಉಂಡೆ ನೋಡಲು ಆಗೊಲ್ಲ ಅಮ್ಮ ಪುಕ್ಕಲು ನಾನಲ್ಲ. ಆದರೂಅಮ್ಮ ಅಪ್ಪನೇ ಪ್ರೀತಿ ಎದೆಯೊಳಗೊಂದು ಮೀಟುವ ತಂತಿ ಕಾರಣ ಹೇಳಮ್ಮ ಕೈಗಳ ಹಿಡಿದು ವಠಾರ ನಡೆದು ನಡೆಯಲು ಕಲಿಸಿದನು ದಾರಿಯ ಮಧ್ಯೆ ಸಿಕ್ಕವರಲ್ಲಿ’ ಮಗಳೆಂದು ಹೊಗಳಿದನು ಬೈಕಲಿ ಕೂರಿಸಿ, ಮರಗಿಡ ತೋರಿಸಿ, ಮನವನು ತಣಿಸುವನು ಅಪ್ಪನು ನಿನಗಿಂತ ಪ್ರಿಯನವನು. ಆಗೀಗೊಮ್ಮೆ ಉಪ್ಪಿನಮೂಟೆ ಮಾಡುತ ಮುದ್ದಿಸುವ ಮರುಕ್ಷಣ ನನ್ನ ಹಠವನು ಕಂಡು ಕೋಲನು ತೋರಿಸುವ ಅಮ್ಮಾ, […]

ಗಝಲ್

ಗಝಲ್ ಸ್ಮಿತಾ ರಾಘವೇಂದ್ರ ನಟನೆಯೋ ನಿಜವೋ ನಂಟನ್ನು ಹುಸಿಯಾಗಿಸಬೇಡ ಬಳ್ಳಿಯ ಬೇರು ಚಿವುಟಿ ಚಿಗುರೆಲೆ ಹುಡುಕಬೇಡ ತುಪ್ಪದಂಥ ಒಲವಲ್ಲಿ ಉಪ್ಪು ಬೆರೆಸುವುದು ಸುಲಭ ಒಪ್ಪು ತಪ್ಪುಗಳ ಬರಿದೆ ಕೆದಕೆದಕಿ ಕೆಡಿಸಬೇಡ ಹೊಟ್ಟೆಯೊಳಗಿನ ಕಿಚ್ಚು ಉರಿದು ಸುಟ್ಟಿದೆ ಸೆರಗನ್ನು ಸಿಹಿ ಕೊಡುವ ನೆಪದಿ ಸವಿಯ ಸೂರೆ ಮಾಡಬೇಡ ಹಸಿರೆಲೆಯಾಗೇ ಬಹುದಿನ ಇರಲಾಗದು ನಿಜ ಹಣ್ಣಾಗುವ ಮೊದಲೇ ಹಿಸಿದು ಉದುರಿಸಬೇಡ ಹುತ್ತವ ಬಡಿಬಡಿದು ಹಾವು ಸಾಯಿಸುವ ಭ್ರಮೆಬೇಡ ಯಾವ ಹುತ್ತದಲಿ ಯಾವ ಹಾವೋ ಕೈಹಾಕಬೇಡ ಎಷ್ಟು ಅರಿತರೇನು ಸೋಗಿನ ಸ್ನೇಹಗಳ […]

ಲಹರಿ

ಇಂದು ಬಾನಿಗೆಲ್ಲ ಹಬ್ಬ ಚಂದ್ರಪ್ರಭ ಬಿ. ಇಂದು ಬಾನಿಗೆಲ್ಲ ಹಬ್ಬ… ಕಳೆದ ದಶಕದ ಸಿನಿಮಾ ಹಾಡೊಂದರ ಈ ಸಾಲು ಮುಂದುವರಿದಂತೆ ಗಾಳಿ ಗಂಧ, ಭೂಮಿ, ಪುಷ್ಪ ಕುಲ, ಸುಮ್ಮನಿರದ ಮನಸು, ಓಡುತಿರುವ ವಯಸು, ಉಸಿರಿಗೆ ಉಕ್ಕುವ ಎದೆ,ಮರಳು..ಕಡಲು..ಅಪ್ಪುವಲೆ – ಎಲ್ಲಕ್ಕೂ ಇಂದು ಹಬ್ಬ ಎಂದು ಬಣ್ಣಿಸುತ್ತದೆ. ತನ್ನ fast beat (ದೃತ್ ಲಯ) ನಿಂದಾಗಿ ಇಡೀ ಗೀತೆಯೇ ಕಿವಿಗೆ ಹಬ್ಬವಾಗುವ ವಿಶಿಷ್ಟ ಹಾಡು ಇದು. ಒಂದರ್ಥಲ್ಲಿ ಹೀಗೆ ಮನಸ್ಸು ಖುಷಿಯಿಂದ ಕುಪ್ಪಳಿಸಿ ತನ್ನಷ್ಟಕ್ಕೆ ತಾನೇ ಸಾಲೊಂದನ್ನು ಗುನುಗತೊಡಗುವ […]

ಕಾವ್ಯಯಾನ

ಮಣ್ಣಾಗುವ ಮುನ್ನ ಮರವಾಗುವೆ ಪ್ಯಾರಿಸುತ ನನ್ನೆಲ್ಲ ಪ್ರೀತಿ ಮಣ್ಣಾಗುವ ಮುನ್ನ ನೀ ಬಂದು ಬೀಜವ ನಡು ಇಂದಲ್ಲ, ನಾಳೆ ಎಂದಾದರೊಮ್ಮೆ ಮೊಳೆಕೆ ಬಿಡುವದು ನೋಡು ಹಸಿರಾಗಿ ಚಿಗುರಲಿ,ಮರವಾಗಿ ಬೆಳೆಯಲಿ ನಾ ಆರೈಕೆ ಮಾಡುವೆ ಬಿಡು ಹಿಂತಿರುಗಿ ನೋಡದೆ, ಮರು ಏನು ಹೇಳದೆ ಹೊಸದಾರಿ ಹಿಡಿದುಬಿಡು ಹೀಗೊಮ್ಮೆ ಬೈದುಬಿಡು, ನೆನಪಲ್ಲೆ ಕೊಂದುಬಿಡು ದೇಹಕ್ಕೆ ಉಸಿರೆ ಆಸರೆಯಂತೆ ಉಸಿರಂತೆ ಇದ್ದವಳು ನೀ ಹೋದ ಮೇಲೆ ಈ ದೇಹವೀಗ ಶವದಂತೆ ನೋಡು ನೀ ಬಂದು ಸುಟ್ಟರು ಇಲ್ಲವೇ, ಮಣ್ಣಲ್ಲಿ ಹೂತರು, ಅಲ್ಲಿ […]

ಕಾವ್ಯಯಾನ

ಹರೆಯದ ಹಬ್ಬ ಗೌರಿ.ಚಂದ್ರಕೇಸರಿ. ಹಣ್ಣೆಲೆಗಳೆಲ್ಲ ಉದುರಿ ಹೊಸತೊಂದು ಚಿಗುರಿಗೆ ಹಾದಿ ಮಾಡಿಕೊಟ್ಟಿವೆ ಎಳೆಯ ಹಸಿರ ಹೊದ್ದು ತೂಗಿ ತೊನೆದಾಡುವ ಪ್ರಕೃತಿಗೆ ಮತ್ತೊಂದು ಹುಟ್ಟಿನ ಸಡಗರ, ಸಂಭ್ರಮ. ದುಂಬಿ, ಚಿಟ್ಟೆಗಳ ಝೇಂಕಾರ ಬಾನಾಡಿಗಳ ಚಿಲಿಪಿಲಿ ವಾಲಗ ಸಮಷ್ಠಿಗೆಲ್ಲ ಬಿಡುವಿಲ್ಲದ ಕಾಯಕ ಮೊದಲ ಬಾರಿ ಅರಳಿ ನಿಂತ ಕುವರಿಯಂತೆ ವಧು ಧರಿಸಿದ ನಾಚಿಕೆಯಂತೆ ಇಳೆಗೆಲ್ಲ ಹರೆಯದ ಹಬ್ಬ. ಸಿಂಗಾರಗೊಂಡ ಪ್ರಕೃತಿಗೆ ಭುವಿಯೆಲ್ಲ ಹಸಿರ ತಳಿರ ತೋರಣ ಅರಳಿ ನಿಂತ ಸುಮಗಳ ಅಕ್ಷತೆ ರಂಗೇರಿದ ಕೆನ್ನೆ ತುಂಬ ಸರ‍್ಯನೆರಚಿದ ಚೈತ್ರದೋಕುಳಿ.

ಜ್ಞಾನಪೀಠ ವಿಜೇತರು

ಮಾಸ್ತಿ ವೆಂಕಟೇಶ ಅಯ್ಯಂಗಾರ್ ‘ಕನ್ನಡದ ಆಸ್ತಿ’ ಮಾಸ್ತಿ ವೆಂಕಟೇಶ ಅಯ್ಯಂಗಾರ್..! ‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದರು ‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು..! ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ “ಪೆರಿಯಾತ್” ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು… ತಿರುಮಲ್ಲಮ್ಮ ದಂಪತಿಗಳಿಗೆ ೮-೬-೧೮೯೧ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಮೈಸೂರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಪ್ರಥಮ […]

ಪ್ರಸ್ತುತ

ಮೊಬೈಲ್ ಬಳಕೆ ಹರೀಶಬಾಬು ಬಿ. ಮೊಬೈಲ್ ಬಳಕೆಯಿಂದ ಮಾನವನಿಗೆ ಉಂಟಾಗುತ್ತಿರುವ ಪರಿಣಾಮ ಅಷ್ಟು ಇಷ್ಟಲ್ಲ. ಇಂದಿನ ಗಣಕಯಂತ್ರ ಯುಗದಲ್ಲಿ ಎಲ್ಲವೂ ಅಂತರ್ಜಾಲ ಆಧಾರಿತ ಗಣಕಯಂತ್ರದ ಕೆಲಸಳಾಗಿವೆ. ದಿನೇ ದಿನೇ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಾ ಹೋದ ಕಾರಣದಿಂದ ಮಾನವನ ಬರವಣಿಗೆ ಮತ್ತು ಮಾನವ ಮಾಡುವ ಕೆಲಸಗಳು ಕಮ್ಮಿ ಆಗಿವೆ. ಆದ ಕಾರಣದಿಂದ ಎಲ್ಲರೂ ಗಣಕ ಯಂತ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲೇ ಬೇಕಾದ ಸಂತತಿ ಈ ಗಣತಂತ್ರ ಯುಗದ ಜನರಿಗೆ ಎದುರಾಗಿದೆ. ಮೊದಲು ಪ್ರತಿಯೊಂದು ಕಛೇರಿಗಳಲ್ಲಿಯೂ ಹಿಂದೆ ಬರವಣಿಗೆ […]

Back To Top