ಹರೆಯದ ಹಬ್ಬ
ಗೌರಿ.ಚಂದ್ರಕೇಸರಿ.
ಹಣ್ಣೆಲೆಗಳೆಲ್ಲ ಉದುರಿ
ಹೊಸತೊಂದು ಚಿಗುರಿಗೆ
ಹಾದಿ ಮಾಡಿಕೊಟ್ಟಿವೆ
ಎಳೆಯ ಹಸಿರ ಹೊದ್ದು
ತೂಗಿ ತೊನೆದಾಡುವ
ಪ್ರಕೃತಿಗೆ ಮತ್ತೊಂದು ಹುಟ್ಟಿನ
ಸಡಗರ, ಸಂಭ್ರಮ.
ದುಂಬಿ, ಚಿಟ್ಟೆಗಳ ಝೇಂಕಾರ
ಬಾನಾಡಿಗಳ ಚಿಲಿಪಿಲಿ ವಾಲಗ
ಸಮಷ್ಠಿಗೆಲ್ಲ ಬಿಡುವಿಲ್ಲದ ಕಾಯಕ
ಮೊದಲ ಬಾರಿ ಅರಳಿ ನಿಂತ ಕುವರಿಯಂತೆ
ವಧು ಧರಿಸಿದ ನಾಚಿಕೆಯಂತೆ
ಇಳೆಗೆಲ್ಲ ಹರೆಯದ ಹಬ್ಬ.
ಸಿಂಗಾರಗೊಂಡ ಪ್ರಕೃತಿಗೆ
ಭುವಿಯೆಲ್ಲ ಹಸಿರ ತಳಿರ ತೋರಣ
ಅರಳಿ ನಿಂತ ಸುಮಗಳ ಅಕ್ಷತೆ
ರಂಗೇರಿದ ಕೆನ್ನೆ ತುಂಬ
ಸರ‍್ಯನೆರಚಿದ ಚೈತ್ರದೋಕುಳಿ.