ಪ್ರಸ್ತುತ

ಮೊಬೈಲ್ ಬಳಕೆ

Image result for photos of smartphones

ಹರೀಶಬಾಬು ಬಿ.

ಮೊಬೈಲ್ ಬಳಕೆಯಿಂದ ಮಾನವನಿಗೆ ಉಂಟಾಗುತ್ತಿರುವ ಪರಿಣಾಮ ಅಷ್ಟು ಇಷ್ಟಲ್ಲ.

ಇಂದಿನ ಗಣಕಯಂತ್ರ ಯುಗದಲ್ಲಿ ಎಲ್ಲವೂ ಅಂತರ್ಜಾಲ ಆಧಾರಿತ ಗಣಕಯಂತ್ರದ ಕೆಲಸಳಾಗಿವೆ. ದಿನೇ ದಿನೇ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಾ ಹೋದ ಕಾರಣದಿಂದ ಮಾನವನ ಬರವಣಿಗೆ ಮತ್ತು ಮಾನವ ಮಾಡುವ ಕೆಲಸಗಳು ಕಮ್ಮಿ ಆಗಿವೆ. ಆದ ಕಾರಣದಿಂದ ಎಲ್ಲರೂ ಗಣಕ ಯಂತ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲೇ ಬೇಕಾದ ಸಂತತಿ ಈ ಗಣತಂತ್ರ ಯುಗದ ಜನರಿಗೆ ಎದುರಾಗಿದೆ. ಮೊದಲು ಪ್ರತಿಯೊಂದು ಕಛೇರಿಗಳಲ್ಲಿಯೂ ಹಿಂದೆ ಬರವಣಿಗೆ ವ್ಯವಹಾರ ಹೊಂದಿತ್ತು ಆದರೆ ಇವತ್ತು ಆ ಸೌಲಭ್ಯ ಕಣ್ಣುಮರೆಯಾಗಿದೆ.ಇದರಿಂದ ಜನತೆಗೆ ಅನುಕೂಲ ಅನಾನುಕೂಲ ಎರಡು ಉಂಟಾಗಿದೆ. ಈ ಗಣತಂತ್ರ ಯುಗ ದಿನ ದಿನಕ್ಕೂ ರಂಗು ಹೇರುತ್ತಿದ್ದ ಕಾರಣದಿಂದ ಇಡೀ ಪ್ರಪಂಚವೇ ಗಣತಂತ್ರಮಯವಾಗಿದೆ . ಗಣಕಯಂತ್ರದಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಅರಿತ ಈ ಜನತೆ ಅದರ ಸೇವೆಗಳನ್ನು ಅಂಗೈಯಲ್ಲಿ ನೋಡುವಾಗೆ ಸ್ಮಾಟ್ ಪೋನ್ ಬಳಕೆ ಕಂಡು ಕೊಂಡರು. ಎಲ್ಲಾ ಸೌಲಭ್ಯಗಳು,ಸೇವೆಗಳನ್ನು ಮತ್ತು ವ್ಯವಹಾರವನ್ನು ಈ ಜಂಗಮಗಂಘೆಯಲ್ಲಿಯೇ ನಡೆಸಲು ಪ್ರಯತ್ನಸಿದರು ಎಲ್ಲಾ ಸೇವೆಗಳು ಸರಾಗವಾಗಿ ಮತ್ತು ಸುಲಭವಾಗಿ ಸೇವೆಗಳು ದೊರೆಯುವ ಕಾರಣಾತರದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಮೊಬೈಲ್ ಬಳಕೆ ಹೇರಳವಾಗಿ ಬೆಳೆಯಿತು. ಬಳಕೆಯನ್ನು ನಾನ ಉಪಯೋಗಕ್ಕೆ ಬಳಸುತ್ತಾ ಹೋದಂತೆ ಎಲ್ಲಾ ಗಣತಂತ್ರ ಯುಗದಲ್ಲಿ ಗಣಕಯಂತ್ರದ ಬಳಕೆ ಗಣನೀಯವಾಗಿ ಇಳಿಕೆಯಾಗುತ್ತಾ ಎಲ್ಲಾ ಸೇವೆಗಳು ಮೊಬೈಲ್ ನಲ್ಲಿ ದೊರೆಯುವಂತೆ ತಂತ್ರಜ್ಞಾನವನ್ನು ವಿಜ್ಞಾನಿಗಳು ಸೃಷ್ಟಿಸಿದರು . ಎಲ್ಲಾ ಸೇವೆಗಳು ಇದರಲ್ಲೇ ದೊರೆಯುವ ಕಾರಣದಿಂದ ಅಂಗೈಯಲ್ಲಿ ಇಡೀ ಪ್ರಪಂಚದ ಹಾಗು ಹೋಗುಗಳು ಮತ್ತು ಬ್ಯಾಕಿಂಗ್, ಪೋಸ್ಟ್ ,ಮಾಹಿತಿ ವ್ಯವಸ್ಥೆ ಮತ್ತು ದಿನನಿತ್ಯದ ಚಟುವಟಿಕೆಗಳು ಮತ್ತು ಇನ್ನೂ ಇತರೆ ಕಾಯ೯ಗಳ ಬಳಕೆಯಲ್ಲಿ ತುಂಬಾ ಅನುಕೂಲಕರವಾದ ಸೌಲಭ್ಯ ಒದಗಿಸುವ ತಂತ್ರಜ್ಞಾನ ಸಿಕ್ಕಿತು. ಯಾವುದೇ ಒಂದು ವಸ್ತುವಿನ ಬಳಕೆ ನಿಯಮಿತವಾಗಿ ಇದ್ದರೆ ಅದರಿಂದ ನಮಗೆ ಅನುಕೂಲವೂ ಉಂಟು ಮತ್ತೆ ನಮ್ಮ ಜೀವನಕ್ಕೆ ಉಳಿತೇ ಅದನ್ನು ವೈಪರೀತವಾಗಿ ಬಳಸಿದರೆ ಅದರ ಪರಿಣಾಮಕ್ಕೆ ನಾವೆ ಹೊಣೆಗಾರರು.

ಇತ್ತೀಚಿನ ದಿನಗಳಲ್ಲಿ ಇಂದು ಒಂದು ರೀತಿಯ ಮಾರಕವಾಗಿ ಬೆಳೆಯುತ್ತಾ ಬಂದು ಇದೆ ಈ ಸ್ಮಾಟ್೯ ಫೋನ್ ಬಳಕೆ. ದಿನೇ ದಿನೇ ತಂತ್ರಜ್ಞಾನ ಹೆಚ್ಚುತ್ತಾ ಹೋದಂತೆ ಮೊಬೈಲ್ ಬಳಕೆಯೂ ಕೂಡ ಹೆಚ್ಚಾಗುತ್ತ ಹೋದಂತೆ ಎಲ್ಲಾ ಅದರ ಪರಿಣಾಮ ಜನರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಾ ಬಂದು ಇದೆ. ಶಾಲಾ ಕಾಲೇಜಿನಿಂದ ಹಿಡಿದು ಒಬ್ಬ ಬಹುದೊಡ್ಡ ನೌಕರಿ ಉದ್ಯಮಿವರೆಗೂ ಈ ಸ್ಮಾಟ್ ಪೋನ್ ಬಳಕೆಯ ಪರಿಣಾಮ ತುಂಬಾ ಅಗಾದವಾಗಿದೆ. ಎಲ್ಲಾ ಸೇವೆಗಳು ಇದರಲ್ಲೇ ಸಿಗುತ್ತಿರುವುದರಿಂದ ಈ ಬಳಕೆ ವೈಪರೀತವಾಗಿದೆ. ನೆಟ್ ಬ್ಯಾಕಿಂಗ್ ಸೇವೆ ಮೊಬೈಲ್ ನಲ್ಲಿಯೇ ದೊರೆಯುತ್ತಿರುವ ಗೂಗಲ್ ಪೇ,ಪೋನ್ ಪೇಗಳಿಂದ ಎಷ್ಟೋ ಉದ್ಯಮಿಗಳು ನೌಕರರು ತಿಂಗಳು ಗಟ್ಟಲೇ ದುಡಿದು ಸಂಪಾದಿಸಿದ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡು ಇದ್ದಾರೆ .ತಂತ್ರಜ್ಞಾನ ಹೆಚ್ಚಾದ ಕಾರಣದಿಂದ ಎಲ್ಲೆಡೆಯೂ ಈ ಬ್ಯಾಕಿಂಗ್ ವ್ಯವಸ್ಥೆ ಬಳಕೆ ಹೆಚ್ಚು ಪ್ರಗತಿಯಲ್ಲಿ ಇದೆ. ಇದರಿಂದ ಹಣ ದೋಚೊ ಖದೀಮರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ನಾವು ದಿನನಿತ್ಯ ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರೆಡಿಯೋದಲ್ಲಿ ಕೇಳುತ್ತಾ ಇದ್ದೀವಿ ಗೂಗಲ್ ಪೇ ಮತ್ತು ಪೋನ್ ಪೇ ಗಳಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವ ನೆಪದಲ್ಲಿ ನಮ್ಮ ಬ್ಯಾಂಕ್ ಖಾತೆಯ ಹಣವನ್ನು ದೋಚಿದ್ದಾರೆ ಎಂದು ಇದೇ ಸಮಸ್ಯೆಯ ಬಗ್ಗೆ ಪೋಲಿಸ್ ಮೊರೆ ಹೊದ ಎಷ್ಟು ಜನರು ಇದ್ದಾರೆ.

ಮೊಬೈಲ್ ಬಳಕೆಯಿಂದಾ ಉಂಟಾಗುತ್ತಿರುವ ನಷ್ಟ ಈ ಸಮಾಜಕ್ಕೆ ಅಷ್ಟು ಇಷ್ಟಲ್ಲ ಅದರ ಉಪಯೋಗಿಂತಲೂ ಅದರ ಅನಾನುಕೂಲದ ಪರಿಣಾಮವೇ ಹೆಚ್ಚು ಭರಿಸುತ್ತಿದೆ ಈ ಸಮಾಜ. ಹುಟ್ಟುವ ಪ್ರತಿಯೊಂದು ಕೂಸು ಕೂಡ ಜಂಗಮಗಂಘೆಯಲ್ಲಿ ಕಲಿಯುತ್ತಾ ನಲಿಯುತ್ತಾ ಆಡುತ್ತಾ ಬೆಳೆಯುತ್ತಾ ಬಂದಿದೆ. ತಂದೆ ತಾಯಿಗಳು ಮಗುವಿನ ನಿಮಾ೯ಪಕರು ಅವರ ಭವಿಷ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಈ ಸ್ಮಾಟ್೯ ಪೋನ್ ಬಳಕೆ ಅವರಿಗೆ ತೋರಿಸಿ ಅವರ ಜೀವನಕ್ಕೆ ಬಹುದೊಡ್ಡ ಪಿಡುಕು ಉಂಟು ಮಾಡುತ್ತಿದ್ದಾರೆ. ಏನ್ ತಿಳಿಯದ ಮಗುವಿಗೆ ಇವರು ಈ ಜಂಗಮಗಂಘೆ ಕೊಟ್ಟು ಅವರ ಭವಿಷ್ಯದ ಹಾದಿಗೆ ಅಡಚಣೆಯನ್ನು ಉಂಟು ಮಾಡುತ್ತಾರೆ.ಹಾಗೆಯೇ ಅವರು ಎಷ್ಟೇ ಅಲ್ಲದೇ ಇನ್ನೂ ಬುದ್ದಿವಂತ ಹಾಗೂ ವಯಸ್ಕರು ಕೂಡ ಈ ಜಂಗಮಗಂಘೆ ಎಂಬಾ ಪೀಡೆಯಿಂದಾ ಹಾಳುಗುತ್ತಾದ್ದಾರೆ. ಈ ಮೊಬೈಲ್ ಎಂಬ ಪೀಡೆ ಕೆಲವು ಜೀವಗಳನ್ನೇ ಬಲಿ ತೆಗೆದುಕೊಳ್ಳುತ್ತಾ ಬಂದು ಇದೆ.

ಪ್ರೀತಿ ವಿಷಯದಲ್ಲಿ ಮೊಬೈಲ್ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕಾಣದೂರಿನ ಚಂದಮಾಮಗಳಿಗೆ ತನ್ನ ಊರಿನ ಚಂದಮಾಮನಾಗೆ ಕಾಣಿಸುವಂತೆ ಪರಿಚಯ ಮಾಡುತ್ತದೆ ಈ ಮೊಬೈಲ್. ಕಾಣದೂರಿನ ಚಂದಮಾಮಗಳಿಗೆ ಪ್ರೀತಿಯಲ್ಲಿ ಪೋನ್ ಮೆಸೆಜ್ಗಳು ಬೀಗರು ಪಾತ್ರದಲ್ಲಿ ಈ ಮೊಬೈಲ್ ಹೊಂದಿದೆ. ಎಲ್ಲೋ ಹುಟ್ಟಿ ಬೆಳೆದ ಈ ಪ್ರೀತಿಗೆ ಮೊಬೈಲ್ ಸೂತ್ರದಾರಿಯಾಗಿ ಕೆಲಸ ಮಾಡುತ್ತದೆ. ಪ್ರೀತಿ ಎಂಬಾ ಡ್ರಾಮದಲ್ಲಿ ಸಂಗೀತ ನಿರ್ದೇಶಕರಾಗಿ ಈ ಮೊಬೈಲ್ ಪಾತ್ರವಹಿಸುತ್ತದೆ. ಸಿನೆಮಾ,ಮೋಜು, ಮಸ್ತಿ ,ಪಾಟಿ೯,ಬರ್ತಡೇ, ದೇವಾಲಯ, ಇನ್ನೂ ಮುಂತಾದವುಗಳಿಗೆ ಕರೆಯ್ಯೋಲೆ ಕಳಿಸುವ ಆಹ್ವಾನ ಪತ್ರಿಕೆಯ ಪಾತ್ರವನ್ನು ಈ ಮೊಬೈಲ್ ನಿವ೯ಹಿಸುತ್ತದೆ.


ಪ್ರಿಯತಮೆ ಮತ್ತು ಪ್ರಿಯಕರನ ನಡುವೆ ಒಂದು ರೀತಿಯ ಮಧ್ಯವರ್ತಿಯಾಗಿ ಬಹು ಮುಖ್ಯವಾಗಿ ಕಾಯ೯ನಿವ೯ಹಿಸುತ್ತದೆ. ಭಯಕರವಾದ ಪ್ರೀತಿ ರಹಸ್ಯಗಳಲ್ಲಿ ಸಲ್ಲದ ಕಾಯ೯ಗಳು ಅಗತ್ಯಕ್ಕೆ ಸಮಯಕ್ಕೆ ತಕ್ಕಂತೆ ನಡೆಯದೇ ಹೋದಾಗ ಕೊನೆಗೆ ಜವರಾಯನ ಪಾತ್ರವಾಗಿಯು ಕೂಡ ಈ ಮೊಬೈಲ್ ನಿವ೯ಹಿಸುತ್ತದೆ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ ಹೋದ ಪ್ರಾಣಗಳೆಷ್ಟೋ. ಟ್ರಾಫಿಕ್ನಲ್ಲಿ ಮೊಬೈಲ್ ಬಳಕೆ ಮಾಡುತ್ತಾ ಚಾಲನೆ ಮಾಡುವ ಸಮಯದಲ್ಲಿ ಅರಿವು ಇಲ್ಲದೇ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಸವಾರರು ಎಷ್ಟು? ಅವಘಾತದಿಂದ ನರಳುತ್ತಿರುವವರು ಎಷ್ಟು?
ದಿನೇ ದಿನೇ ಇದರಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗುತ್ತಾ ಹೋಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಯನ್ನು ಮತ್ತು ಪ್ರಯಾಣದ ಬ್ಯಾಸರವನ್ನು ನೀಗಲು ಇಯರ್ರ್ಪೋನ್ ಗಳಿಂದ ಸಂಗೀತವನ್ನು ಆಲಿಸುತ್ತಾ ಅಥವಾ ಬೇರೊಬ್ಬರ ಬಳೀ ಪೋನ್ ನಲ್ಲಿ ಮಾತನಾಡುತ್ತ ಪ್ರಯಾಣ ಮಾಡಬೇಕಾದರೆ ಹಿಂದೆ ಬರುವಂತಹ ವಾಹನಗಳ ಶಬ್ಧ ಸರಿಯಾಗಿ ಚಾಲಕನಿಗೆ ಕೇಳಿಸದ ಕಾರಣದಿಂದ ನಾವು ಓವರ್ಟೇಕ್ ಮಾಡಲು ಅಥವಾ ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬದಲಾಗುವಾಗ ಹಿಂದಿನ ವಾಹನಗಳ ಶಬ್ಬ ನಮಗೆ ಕೇಳಿಸಿಕೊಳ್ಳದೇ ಸರಕ್ಕನೆ ನಮ್ಮ ವಾಹನವನ್ನು ಒಂದು ಭಾಗದಿಂದ ಇನ್ನೋಂದು ಭಾಗಕ್ಕೆ ತಿರುಗಿಸುತ್ತೇವೆ ಆಗ ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ಹತೋಟಿಗೆ ಬರದೆ ನಮ್ಮ ಮೇಲೆ ಹರಿದು ಬಿಡುತ್ತವೆ ಆಗ ನಾವು ಸಾವನ್ನಪ್ಪಬೇಕಾಗುತ್ತದೆ. ಮತ್ತು ಪಾದಚಾರಿಗಳು ಮೊಬೈಲ್ ಗೇಮ್,ಮೆಸೆಜ್,ವಿಡಿಯೋ ನೋಡುವ ಪರಿಯಲ್ಲಿಯೇ ರಸ್ತೆಗಳನ್ನು ದಾಟುತ್ತಾರೆ ಅವರಿಗೆ ಮುಂದೆ ಹಿಂದೆ ಬರುವ ವಾಹನಗಳ ಬಗ್ಗೆ ಅರಿವೆ ಇರುವುದಿಲ್ಲ. ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ನಿಯಂತ್ರಣಕ್ಕೆ ಬಾರದೇ ಪಾದಚಾರಿಗಳ ಮೇಲೆ ಹರಿದು ಬಿಡುತ್ತವೆ. ಬದುಕ ಸಾವುಗಳ ನಡುವೆ ಹೋರಾಟ ಮಾಡುತ್ತಾ ಜೀವನ ಕಳೆಯಬೇಕು ಆಗುತ್ತದೆ ಆದ್ದರಿಂದ ಇವು ಈ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸೂಕ್ತವಾದ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಈ ಮೊಬೈಲ್ ಬಳಕೆ ಮಾಡಿಕೊಂಡು ಆರಾಮಾಗಿ ಜೀವನ ನಡೆಸುವುದು ಮಾನವ ಜೀವನಕ್ಕೆ ಒಳಿತು.

ಇನ್ನೂ ಕೆಲವರು ಮೊಬೈಲ್ ನಲ್ಲಿ ಸಿಗುವ ನಾನ ಬಗೆಯ ಅನಪೇಕ್ಷಿತ ಮಾಹಿತಿಯನ್ನು ತಿಳಿದುಕೊಂಡು ಅವರ ಮನಸ್ಸಿನ ಮೇಲೆ ಮಾನಸಿಕ ಒತ್ತಡವನ್ನು ತಂದುಕೊಳ್ಳುತ್ತಾರೆ. ಮತ್ತೆ ಮೊಬೈಲ್ ನಲ್ಲಿ ಬರುವ ಆಶೀಲಕರವಾರ ವಿಡಿಯೋ ಮತ್ತು ಪೋಟೋ ನಾನ ಬಗೆಯ ಮನರಂಜನೆ ಕಾಯ೯ಗಳನ್ನು ನೋಡಿ ಅವರ ಮನದಲ್ಲಿ ಕಾಮುಕತೆಯ ಹೆಚ್ಚಾಗುವ ಸಂತತಿಗಳು ಕೂಡ ಹೆಚ್ಚಾವ ಸಾಧ್ಯತೆಗಳೂ ಕೂಡ ಇವೆ. ಮನದಲ್ಲಿ ಕಾಮುಕ ಮಾನೋಭಾವ ಹೆಚ್ಚಾಗಿ ಸಮಾಜದಲ್ಲಿ ನಾನ ಅಹಿತಕರ ಚಟುವಟಿಕೆಗಳಿಗೆ ಎಡೆಮಾಡಿಕೊಡುತ್ತಿದೆ ಈ ಮೊಬೈಲ್ ನಲ್ಲಿ ದೊರೆಯುವ ಕೆಲವು ಸನ್ನಿವೇಶಗಳು. ಮೊಬೈಲ್ ಬಳಕೆ ಹೆಚ್ಚಾಗಿ ಬಳಸುತ್ತಿರುವುದರಿಂದ ಅವರ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತ. ಮಾನವರಲ್ಲಿನ ಏಕಾಗ್ರತೆ ಮಟ್ಟ, ನೆನಪಿನ ಶಕ್ತಿ,ದೃಷ್ಟಿ ದೋಷ ಮತ್ತು ಬುದ್ದಿ ಶಕ್ತಿ ಎಲ್ಲವನ್ನೂ ಕಳೆದುಕೊಳ್ಳತ್ತಾ ಇದ್ದಾರೆ. ಇನ್ನೂ ಕೆಲವರು ವೈಪರೀತ್ಯ ಸ್ಟಾರ್ಟ್ ಪೋನ್ ಬಳಕೆಯಿಂದ ಬುದ್ದಿ ಮಾದ್ಯರು ಹಾಗಿರುವ ಕೆಲವು ಸನ್ನಿವೇಶಗಳನ್ನು ನಾವು ಈ ಸಮಾಜದಲ್ಲಿ ನೋಡುತ್ತಿದ್ದೇವೆ.ಒಟ್ಟಾರೆ ನಾವು ಮೊಬೈಲ್ ಅನ್ನು ಒಳ್ಳೆಯತನವಾಗಿ ಬಳಸಿಕೊಂಡರೇ ನಮ್ಮ ವೃತ್ತಿಪರ ಜೀವನಕ್ಕೂ ಮತ್ತು ಸಾಮಾಜಿಕ ಜೀವನಕ್ಕೂ ಅನುಕೂಲವಿದೆ .ಕೆಟ್ಟದಕ್ಕೆ ಬಳಸಿಕೊಂಡರೇ ಖಂಡಿತವಾಗಿಯೂ ಕೆಟ್ಟಪರಿಣಾಮಗಳು ಬೀರುವ ಸಾಧ್ಯತೆಗಳು ಹೆಚ್ಚಿರುತ್ತವೆ .ಎಷ್ಟು ಕೆಟ್ಟ ಪರಿಣಾಮಗಳು ಇವೆಯೋ ಎಷ್ಟೋ ಒಳ್ಳೆ ಅನುಕೂಲಗಳು ಸಹಾ ಇವೆ.
ಬಳಕೆಯ ಆಯ್ಕೆ ಬಳಕೆಗಾರ ಕೈಯಲ್ಲಿ ಇರುತ್ತದೆ ಒಳ್ಳೆಯದಕ್ಕೆ ಬಳಸಿ ಜ್ಞಾನ ಸಂದಾದನೆಗೆ ಅನುಕೂಲ ಕಲ್ಪಿಸಿಕೊಳ್ಳಿ ನಿಮ್ಮ ಅಮೂಲ್ಯವಾದ ಜೀವನದಲ್ಲಿ.

ಮೊಬೈಲ್ ಬಳಕೆ ಮಿತವಿರಲಿ ಜೀವನಕ್ಕೆ ಒಳಿತಾಗಿರಲಿ “

********

Leave a Reply

Back To Top