ಕಾವ್ಯಯಾನ

ಸೂತಕ

white and green flower painting

ಶಾಂತಾ ಜೆ ಅಳದಂಗಡಿ

ಹುಚ್ಚು ತುರಗ ಈ ಮನ
ದಿಕ್ಕೆಟ್ಟು ಓಡುತಿದೆ ಕಾಣಲು ಹೂ ಬನ
ಪ್ರೀತಿ ಎಂದರೆ ನೀರ್ಗುಳ್ಳೆ
ಒಲವ ನುಡಿಯಲಿರುವುದೆಲ್ಲ ಸುಳ್ಳೆ

ಹೂವ ಮಧುವ ಹೀರುವ ವರೆಗು
ಮೋಹದ ಮಾತುಗಳ ಬೆರಗು
ದಾಹ ತೀರಿದಮೇಲೆ ನದಿಯ ಹಂಗಿಲ್ಲ
ವಶವಾದನಂತರ ಅವಳು ನಲ್ಲೆಯಲ್ಲ

ಪ್ರೇಮ ಸಾಯುತ್ತೆ ನರಳಿ ನರಳಿ
ಬಾರದೆಂದಿಗೂ ಅದು ಮರಳಿ
ಮರುದಿನವೂ ರವಿ ಉದಯಿಸುತ್ತಾನೆ
ಹೊಂಗಿರಣಗಳ ಭುವಿಗೆಲ್ಲ ಚೆಲ್ಲುತ್ತಾನೆ

ಸತ್ತಪ್ರೀತಿಯ ಸೂತಕ
ಆನಂದಿಸಲಾಗದು ಸುಂದರ ಬೆಳಕ
ಮೈ ಮರೆತರೆ ಒಂದು ಕ್ಷಣ
ಬದುಕಾದೀತು ಜೀವಂತ ಹೆಣ

*********

Leave a Reply