ಕಾವ್ಯಯಾನ

ಮಣ್ಣಾಗುವ ಮುನ್ನ ಮರವಾಗುವೆ

sun light passing through green leafed tree

ಪ್ಯಾರಿಸುತ

ನನ್ನೆಲ್ಲ ಪ್ರೀತಿ ಮಣ್ಣಾಗುವ ಮುನ್ನ
ನೀ ಬಂದು ಬೀಜವ ನಡು
ಇಂದಲ್ಲ, ನಾಳೆ ಎಂದಾದರೊಮ್ಮೆ
ಮೊಳೆಕೆ ಬಿಡುವದು ನೋಡು
ಹಸಿರಾಗಿ ಚಿಗುರಲಿ,ಮರವಾಗಿ ಬೆಳೆಯಲಿ
ನಾ ಆರೈಕೆ ಮಾಡುವೆ ಬಿಡು
ಹಿಂತಿರುಗಿ ನೋಡದೆ, ಮರು ಏನು ಹೇಳದೆ
ಹೊಸದಾರಿ ಹಿಡಿದುಬಿಡು
ಹೀಗೊಮ್ಮೆ ಬೈದುಬಿಡು, ನೆನಪಲ್ಲೆ ಕೊಂದುಬಿಡು

ದೇಹಕ್ಕೆ ಉಸಿರೆ ಆಸರೆಯಂತೆ
ಉಸಿರಂತೆ ಇದ್ದವಳು ನೀ ಹೋದ ಮೇಲೆ
ಈ ದೇಹವೀಗ ಶವದಂತೆ ನೋಡು
ನೀ ಬಂದು ಸುಟ್ಟರು ಇಲ್ಲವೇ,
ಮಣ್ಣಲ್ಲಿ ಹೂತರು,
ಅಲ್ಲಿ ಒಂದು ಬೀಜವ ನಡು
ಮೊಳಕೆ ಬಿಡುವದು,
ಮರವಾಗಿ ನಿಲ್ಲುವದು ನೋಡು…!!

ತಾರೆಗಳೆಲ್ಲ ಮರುಗುವದು ನೋಡಲಾರೆ
ಆಕಾಶ ಕೈಬೀಸಿ ಕರೆದರೂ ಹೋಗಲಾರೆ
ಕಳೆಗುಂದ ಚಂದ್ರನ ಮುಖವನು ನೋಡಲಾರೆ
ನೀ ನನ್ನ ಕ್ಷೇಮಿಸಿಬಿಡು,
ಮರವಾಗಿ ಉಳಿಯಲು ಅವಕಾಶ ನೀಡಿಬಿಡು
ನನ್ನ ಶವದ ಜೊತೆ ಬೀಜವ ಎಸಿದುಬಿಡು
ಮರವಾಗಿ ನಿಲ್ಲುವದು ನೋಡು….!!

ನೆರಳರಿಸಿ ಬರುವ ,
ಪ್ರೇಮಿಗಳಿಗೆ ತೊಟ್ಟಿಲು ಆಗುವೆ
ಕಥೆಗಳನ್ನು ಕೇಳುವೆ
ಹಾಡನ್ನು ಹೇಳುವೆ
ಅವರಾದರು ಮನಬಿಚ್ಚಿ ಪ್ರೀತಿಸಲಿ,
ಅಲ್ಲಿಯಾದರು ಪ್ರೀತಿಯು ಉಳಿಯಲಿ
ನೀ ಬಂದು ಬೀಜವ ಎಸೆದು ಬಿಡು
ಮರವಾಗಿಯೇ ಉಳಿಯುವೆ ನೋಡು….!!

******

ತಾರೆಗಳೆಲ್ಲ ಮರುಗುವದು ನೋಡಲಾರೆ
ಆಕಾಶ ಕೈಬೀಸಿ ಕರೆದರೂ ಹೋಗಲಾರೆ


ಕಳೆಗುಂದ ಚಂದ್ರನ ಮುಖವನು ನೋಡಲಾರೆ


ನೀ ನನ್ನ ಕ್ಷೇಮಿಸಿಬಿಡು,
ಮರವಾಗಿ ಉಳಿಯಲು ಅವಕಾಶ ನೀಡಿಬಿಡು
ನನ್ನ ಶವದ ಜೊತೆ ಬೀಜವ ಎಸಿದುಬಿಡು
ಮರವಾಗಿ ನಿಲ್ಲುವದು ನೋಡು….!!

ನೆರಳರಿಸಿ ಬರುವ ,
ಪ್ರೇಮಿಗಳಿಗೆ ತೊಟ್ಟಿಲು ಆಗುವೆ
ಕಥೆಗಳನ್ನು ಕೇಳುವೆ
ಹಾಡನ್ನು ಹೇಳುವೆ
ಅವರಾದರು ಮನಬಿಚ್ಚಿ ಪ್ರೀತಿಸಲಿ,
ಅಲ್ಲಿಯಾದರು ಪ್ರೀತಿಯು ಉಳಿಯಲಿ
ನೀ ಬಂದು ಬೀಜವ ಎಸೆದು ಬಿಡು
ಮರವಾಗಿಯೇ ಉಳಿಯುವೆ ನೋಡು….!!

One thought on “ಕಾವ್ಯಯಾನ

Leave a Reply

Back To Top