ತವರಿನ ಬೆಟ್ಟ

ತವರಿನ ಬೆಟ್ಟ

ಕಥೆ ತವರಿನ ಬೆಟ್ಟ ಶಾಂತಿ ವಾಸು ನಿಮ್ಮವ್ವ ಯೋಳ್ಕೊಟ್ಟಾಳೆನೋ? ಯಾವನ್ತವ ಉಕ್ತೈತೆ ಅಂತ ಮಾಡೀ? ಅವ್ನು ಯಾವನೋ ಮನೆ ಕಟ್ಟುದ್ರೆ ನಿನ್ನನ್ಡ್ಯಾಕೇ ಉರ್ಕಂತೈತೆ ರಂಡೆ?  ಪಿರ್ಯಾದಿ ಯಾಕೆ ಕೊಟ್ಟೆ ಅಂದ್ರೆ ನನ್ನಿಷ್ಟ ಅಂತೀಯ”? ಎನ್ನುತ್ತಾ ಹೆಂಡತಿ ಟಂಕಿಯ ಬೆನ್ನಿನ ಮೇಲೆ ಒಂದೇ ಸಮ ನಾಲ್ಕೈದು ಸಲ ಕುಟ್ಟಿ ಹೊಸ್ತಿಲು ದಾಟಿ ಹೊರಬಂದ ಅಳ್ಳಯ್ಯನಿಗೆ ಎಡಗಡೆಯ ಜಗುಲಿಯ ಮೇಲೆ ಪಟ್ಟಾಪಟ್ಟಿ ಚಡ್ಡಿ, ಮಾಸಿದ ಬನಿಯನ್ನು ತೊಟ್ಟು ಪಕ್ಕದಲ್ಲೇ ಚೌಕದ ಮನೆಗಳ ತೂತು ಬಿದ್ದ ಕಂಬಳಿ ಅದರ ಮೇಲೊಂದು ಕೋಲಿಟ್ಟು, […]

ಮಾಯಾಮೃಗ

ಕವಿತೆ ಮಾಯಾಮೃಗ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸುಡು ಬಿಸಿಲಲ್ಲಿ ಅಲೆದಾಡಿದಧೂಳು ಮೈಯ ಗಾಳಿಗೆ ಜ್ವರವೇರಿಇಳಿದಿದೆ ಹರಿವ ನೀರಿನಲೆಗೆ ಗಾಳಿ ಮೈಕೊಡವಿದಲ್ಲಿಉದುರಿದ ಬಕುಳ ಹೂವಿಗೆ ವಿರಹ ಬೆಂಕಿಹಾ! ಹಾ! ಎನುತ ತುಂಬಿಯ ಚುಂಬನದ ನೆನಪಲ್ಲಿ ಮೈನೆನೆದುಅಲೆಗಳಿಗೆ ಮೈಯೊಡ್ಡಿ ತೇಲಿ ಹೋಗಿದೆ. ಮರಗಿಡ ಬಳ್ಳಿಗಳ ಮೈತುಂಬಮದನಶರ ನಾಟಿ ನೇಸರಗೆ ಬಸಿರಾಗಿಮೊಗ್ಗುಗಳ ಹೆತ್ತು ತೊಟ್ಟುಗಳ ತೊಟ್ಟಿಲಲಿ ತೂಗಿಕೆಂಪು ಚಿಗುರು ಬೆರಳುಗಳಹಸಿಮೈ ಬಾಣಂತಿಕೇಶಗಳ ಬಿಚ್ಚಿ ಮಳೆನೀರ ಕಾದಿದೆ ಚಿತ್ರಗಳು ತಮ್ಮನ್ನು ತಾವೆಬರೆದುಕೊಂಡಂತೆಹಕ್ಕಿಗಳು ರೆಕ್ಕೆ ಬಿಡಿಸಿ ಚಿಮ್ಮಿಬಾಂದಳವ ಬಿಳಿ ಹಾಳೆ ಮಾಡಿವೆಅವನು ಬಿಡಿಸಿದ ಚಿತ್ರದಂಥಪ್ರಕೃತಿಗೆ ಜೀವ […]

ಜೋಗದ ಸಿರಿ ಬೆಳಕಿನಲ್ಲಿ

ಪುನರ್ವಸು’ ನಿಸ್ಸಂಶಯವಾಗಿ ನಾನು ಓದಿದ ಶ್ರೇಷ್ಠ ಕೃತಿಗಳಲ್ಲಿ ಒಂದು. ಶರಾವತಿ ವಿದ್ಯುತ್ ಯೋಜನೆ – ಜೋಗ್ ಪ್ರಾಜೆಕ್ಟ್ ಕುರಿತಾದ ಈ ಕಾದಂಬರಿ ನಮಗೆ ತಿಳಿದಿರದ ಬಹಳಷ್ಟು ವಿಷಯಗಳನ್ನು ಮನದಟ್ಟು ಮಾಡಿಸುತ್ತದೆ.

‘ ರೂಮಿ ನಿನ್ನ ಸೆರಗಿನಲ್ಲಿ…. ‘

ಕಾರಣ
ನಮಗೆ ದುರುದ್ದೇಶವೇ ಇರಲಿಲ್ಲ
…… ಮೂರ್ಖ ಮನುಷ್ಯರಿಗೆ ಪ್ರೀತಿ ಅರ್ಥವಾಗುವುದಿಲ್ಲ;

ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..

ತಾಯೇ,
ಎದೆಗೆ ತಟ್ಟಿದ ನೋವ
ತುದಿ ಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು

ಪ್ರಾರ್ಥಿಸುತ್ತಲೇ ಇದ್ದೇನೆ

ಕವಿತೆ ಪ್ರಾರ್ಥಿಸುತ್ತಲೇ ಇದ್ದೇನೆ ವಿಜಯಶ್ರೀ ಹಾಲಾಡಿ ಭುಜದ ಮೇಲೊಂದು ನವಿರುರೆಕ್ಕೆ ಮೂಡಿದ್ದರೆ ಹಾರಿಬರುತ್ತಿದ್ದೆ ಬೆಟ್ಟಗಳ ದಾಟಿ….ಗುಟುಕು ತಿನಿಸಿ ಕೊಕ್ಕಿನಮೊನೆಯಿಂದ ಗರಿಗರಿಗಳನೇವರಿಸಿ ಹಿತಗೊಳಿಸಿಹಗಲ ಹಾಡು ಕತ್ತಲ ಪಾಡಿಗೆಕಿವಿಯಾನಿಸಿ ಎದೆಯಾನಿಸಿನಿರಾಳಗೊಳ್ಳುತಿದ್ದೆ ಕತ್ತಿಗೆಕತ್ತೂರಿ, ಹದ್ದಿನ ಕಣ್ಣು ತಪ್ಪಿಸಿ ಮನಸಿನ ರೆಕ್ಕೆಗಳೋಪಟಪಟನೆ ಬಡಿಬಡಿದುದೂರ ದೂರ ತೇಲಿಹೋಗಲುಹವಣಿಸುತ್ತವೆ- ಕ್ರಮಿಸುತ್ತವೆಅರೆದಾರಿ, ಬಿರುಬೇಸಗೆಯವಸಂತದ ಹೂ ನೆರಳಿನಲಿಗಪ್ಪನೆ ಮರಳುತ್ತವೆಕಸಿವಿಸಿಯ ತಂಗಾಳಿಯಲಿ ಅಲ್ಲಿ ನಿನ್ನೂರಿನಲೂ ಕೋಗಿಲೆಕೂಗಿ ಕೂಗಿ ದಣಿದಿರಬಹುದುಸಂಜೆಯ ಏಕಾಂತ ನಡಿಗೆಯಲಿಹೂಗಳು ಬಾಡಿ ಉದುರಿರಬಹುದುಅರಳಲಾರದ ಮರಳಲಾರದಹುಸಿಮೊಗ್ಗುಗಳ ಚಡಪಡಿಕೆನಿನ್ನನೂ ತಾಕುತ್ತಿರಬಹುದು… ಈ ಇರುಳು ಧುತ್ತನೆರೆಕ್ಕೆಗಳು ಹುಟ್ಟಿ ಬಿಡಬಾರದೇಕೆನಿನಗೊಂದು ನನಗೊಂದುಪ್ರಾರ್ಥಿಸುತ್ತಲೇ ಇದ್ದೇನೆಎಂದಿನಿಂದಲೂಕಡಲಕಣ್ಣ ಬುವಿಯ […]

Back To Top