ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು […]

ಮಹಿಳೆ ಎಷ್ಟು ಸುರಕ್ಷಿತಳು?

ಹೆಣ್ಣು ಎಂಬ ಕಾರಣಕ್ಕೆ ಆಕೆ ಮನೆಯಿಂದ ಹೊರಗೆ ಹೋಗುವುದನ್ನು ಮತ್ತು ದೂರದ ಊರುಗಳಿಗೆ ಪಯಣಿಸುವುದನ್ನು ನಿರ್ಬಂಧಿಸಲಾಗುತ್ತದೆ. ಸಂಪ್ರದಾಯವಾದಿಗಳು ಶಾಲೆಗೆ ಹೋಗದಂತೆ ತಡೆಯುತ್ತಿದ್ದಾರೆ. ದಾಖಲಾದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುತ್ತಾರೆ.

ಮೊನ್ನೆ ಇಡ್ಲಿ ದಿನ ಅಂತೆ!

ಎಲ್ಲಾರಿಗೂ ಒಂದೊಂದು ದಿನ ಬರುತ್ತೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂದ ಹಾಗೆ ಮೊನ್ನೆ ಇಡ್ಲಿ ದಿನ ಇತ್ತಂತೆ.

ಗಜಲ್

ನಿನ್ನ ಕಿರಿಗೆಜ್ಜೆ ಪಾದಗಳ ಸಪ್ಪಳವ‌ನ್ನ‌ ಕಿವಿಗಳಷ್ಟೇ ಕೇಳು ವಂತಿರು ಗೆಳತಿ
ಒಲವು ಪಲಕುಗಳ ಮಾತುಗಳ ಬೇರೆಯಾರ ಎದೆಗೂ ಕೇಳಿಸದಿರು ಗೆಳತಿ

ಸ್ವಾತಂತ್ರ್ಯದ ಪೂರ್ವಕಾಲದಲ್ಲಿಯೇ ಆರಂಭಗೊಂಡ ‘ಜೈಹಿಂದ್ ಎಜ್ಯುಕೇಶನ್ ಸೊಸೈಟಿ’ ಎಂಬ ಶಿಕ್ಷಣ ಸಂಸ್ಥೆಯು ೧೮೯೬ ರಲ್ಲಿ ಸ್ಥಾಪಿಸಿದ ‘ಎಡ್ವರ್ಡ್ ಹೈಸ್ಕೂಲು’ ಗುಣಮಟ್ಟದ ಶಿಕ್ಷಣಕ್ಕೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿತ್ತು

ರಂಗ ರಂಗೋಲಿ
ಹೊರಗಡೆ ಕಪ್ಪು ಇರುಳು. ತೆಂಗಿನಪಾತಿ ಕಪ್ಪಾಗಿ ಅದರ ಹಿಂಬದಿ ಚಿತ್ತಾರಗೊಂಡು ಅರಳಿದ ಚಂದಿರನನ್ನು ಆ ಮರದ ಕಿಟಕಿಯ ಸರಳುಗಳ ನಡುವಿನಿಂದ ನೋಡುತ್ತಲೇ ಇದ್ದೆ. ಮಲಗಿದ ಭಂಗಿ ಸಡಿಲಿಸಿ ಅದೇ ಹಳೆಯ ದೊಡ್ಡ ಮಂಚದ ಮೇಲೆ ಕೂತು ಕಣ್ಣಬೊಗಸೆಗೆ ದಕ್ಕುವಷ್ಟು ದೂರ ದೃಷ್ಟಿ ನೆಟ್ಟರೆ, ಎದೆಗಿಳಿಯುತ್ತಿದ್ದ ಚಂದ್ರಿಕೆಯ ಒಡಲ ರಾಗ ತುಂಡಾಗಿ ಬಿಡುವ ಅಂಜಿಕೆ

ಯಾರ ಜೀವನವೆಲ್ಲೋ…

ಕಥೆ ಯಾರ ಜೀವನವೆಲ್ಲೋ… ಟಿ.ಎಸ್‍.ಶ್ರವಣಕುಮಾರಿ ವನಜಾಕ್ಷಿ ಮತ್ತು ಕೃಷ್ಣಮೂರ್ತಿ ಮಗ ಪ್ರಸಾದಿಯೊಂದಿಗೆ ದೇವಪುರಿಗೆ ಹೋಗಲು ಬೆಳಗ್ಗೆ ಆರುಗಂಟೆಯ ಬಸ್ಸಿಗೆ ಬೆಂಗಳೂರಿಂದ ಹೊರಟಿದ್ದರು. ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಯಾವುದಾದರೂ ಬೇರೆ ಪ್ರೈವೇಟ್‌ ಬಸ್ಸಿನಲ್ಲೋ, ಇಲ್ಲವೇ ಮಿನಿಬಸ್ಸಿನಲ್ಲೋ ಅಲ್ಲಿಗೆ ತಲುಪಬೇಕಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಶಿವಮೊಗ್ಗ ತಲುಪಿದರೆ, ತಕ್ಷಣವೇ ಅಲ್ಲಿಗೆ ಹೋಗಲು ವಾಹನ ಸಿಕ್ಕರೆ, ಒಂದರ್ಧ ಗಂಟೆಯ ಪಯಣವಷ್ಟೇ. ಈಗೊಂದು ವಾರದಿಂದ, ಈ ನಿರ್ಣಯ ತೆಗೆದುಕೊಂಡಾಗಿನಿಂದಲೂ ವನಜಾಕ್ಷಿಯ ಮನಸ್ಸಿಗೆ ನೆಮ್ಮದಿಯಿಲ್ಲ. ಕೃಷ್ಣಮೂರ್ತಿಗಳಿಗೆ ತಾನೇ ಏನು, ವಿಧಿಯಿಲ್ಲ, ಕಠಿಣವಾದರೂ ನಿರ್ಧಾರವನ್ನು ತೆಗೆದುಕೊಳ್ಳಲೇ […]

*ಗೋರಿಯೊಳಗಿನ ಉಸಿರು”

ಪುಸ್ತತಕ ಸಂಗಾತಿ *ಗೋರಿಯೊಳಗಿನ ಉಸಿರು” ಗೋಕಾವಿ ನಾಡಿನ ಪ್ರಾಥಮಿಕ ಶಾಲೆಯೊಂದರ‌ ಮುಖ್ಯೋಪಾದ್ಯಾಯರಾಗಿರುವ  ಶ್ರೀ ಈಶ್ವರ ಮಮದಾಪೂರ ಅವರು ಈಗಾಗಲೇ‌ ಕನ್ಮಡ‌ ಕಾವ್ಯ ಕ್ಷೇತ್ರದ ಪರಿಚಿತ ಹೆಸರು. ಮಮದಾಪೂರರ ಚುಟುಕುಗಳು,ಮಮದಾಪೂರ  ಹನಿಗವಿತೆಗಳು , ಕಾವ್ಯಯಾನ (ಕವನ ಸಂಕಲನ) ಮೊದಲಾದ ಸಂಕಲನಗಳನ್ನು ಹೊರ ತಂದಿದ್ದಾರೆ. ಈಚೆಗೆ ಕಾವ್ಯ ರಚನೆಗೆ ಕಾವ್ಯರಚಕರಿಗೆ ಪ್ರಧಾನ ವೇದಿಕೆಯಾಗಿರುವದು ವ್ಯಾಟ್ಸಪ್ ಎಂಬ ವಿನೂತನ ಮಾದ್ಯಮ.ಕನ್ನಡ ಕಾವ್ಯಕೂಟ ಎಂಬ ವ್ಯಾಟ್ಸಪ್ ಬಳಗದ  ಮೂಲಕವೇ ನೂರಾರು ಜನ‌ ಸಶಕ್ತ ಕವಿಗಳನ್ನು ಒಂದುಗೂಡಿಸಿದ ವಿಶೇಷತೆ ಈಶ್ವರ ಅವರದು.ಅವರು ಬರೆದಿರುವ ಚುಟುಕುಗಳ […]

ಕವಿತೆ ಹುಟ್ಟುವಾಗ

ಕವಿತೆ ಕವಿತೆ ಹುಟ್ಟುವಾಗ ಅಬ್ಳಿ,ಹೆಗಡೆ ಸೂರ್ಯ,ಸಾಯುತ್ತಿದ್ದ.ಕಾಯುವಹಾಗಿಲ್ಲ,ತಿರುಗಿ ಹುಟ್ಟುವವರೆಗೆ.ಕತ್ತಲು ಕಳೆಯುವವರೆಗೆ.ಪ್ರಸವವೇದನೆ ತಾಯಿಗೆ–ಭಯ,ಆತಂಕ,ಸಂತಸಒಟ್ಟೊಟ್ಟಿಗೆ,ಹೊಟ್ಟೆಯೊಳಗೆಕೈ,ಕಾಲಾಡಿಸುವ ಪುಟ್ಟ-ಕವಿತೆ,ದೈತ್ಯ ಪ್ರಸವವಾದರೆ‌ ಅಳಿವು,ಉಳಿವಿನ ಪ್ರಶ್ನೆ.ತಂದೆಯಾರೊ ಗೊತ್ತಿಲ್ಲ.ವ್ಯಭಿಚಾರಿಣಿ ಪಟ್ಟ ಗಟ್ಟಿಆಗುವ ಆತಂಕ,ಒಳಗೊಳಗೆ,ಅಸಾಧ್ಯ-ನೋವಿನಲ್ಲೂ ತಾಯ್ತನ-ದ ಖುಷಿ,ಅಪ್ಯಾಯಮಾನ.ಸುಖ ಪ್ರಸವ ಕತ್ತಲಲ್ಲಿ,ಕಣ್ತೆರೆಯಬೇಕು-ಮುದ್ದು ಕವಿತೆ,ಹುಟ್ಟುವಹೊಸ ಬೆಳಕಲ್ಲಿ.ತನ್ನ,ಪುಟ್ಟ,ಪಿಳಿ,ಪಿಳಿಕಣ್ಣುಗಳಿಂದ ನೋಡಬೇಕು,ನಿಚ್ಚಳ ಬೆಳಕಲ್ಲಿ,ಹೊಚ್ಚ ಹೊಸ ಜಗತ್ತನ್ನು.ಮುಗಿಲೆತ್ತರಕ್ಕೆ ಎದ್ದುನಿಲ್ಲಬೇಕು ನೀಳಕಾಯಳಾಗಿ.ತಾಯ್ತನದ ಸಾರ್ಥಕತೆಇರುವದೇ ಇಲ್ಲಿ.ಭಯ,ಆತಂಕ,ನೋವು,ಸಂತಸ ಎಲ್ಲದರಸಾರ್ಥಕತೆಯೂ ಇಲ್ಲೆ.ಕತ್ತಲಲ್ಲಿ ಹುಟ್ಟಿದಕವಿತೆಯಲ್ಲಿ. **************************

Back To Top