ಗಝಲ್
ಗಝಲ್ ವತ್ಸಲಾ ಶ್ರೀಶ ಹೃದಯ ಶ್ರೀಮಂತನಲ್ಲ ಪ್ರೀತಿಯ ಮರಳಿಸದ ಸಾಲಗಾರನಾಗಿದ್ದೆ ನೀನುಕಾರಣಗಳ ಓರಣದಿ ಜೋಡಿಸುತ್ತಲೇ ದಾರಿ ಬದಲಿಸಿದ್ದೆ ನೀನು ತಾರೆಗಳನೇ ತಂದಿರಿಸಿದೆಯೆಂಬ ಭ್ರಮೆಯ ಬಾನಲಿ ವಿಹರಿಸುತಲಿದ್ದೆಕಲ್ಲು ಮುಳ್ಳಿನ ಬಯಲಲಿ ನಿಂತ ಸತ್ಯವನು ಕೊನೆಗೂ ತೋರಿಸಿದ್ದೆ ನೀನು ಕಲ್ಪನೆಯ ಕಣ್ಣಲ್ಲಿನ ಸುಂದರ ಚಿತ್ರಗಳು ಬದುಕ ರಂಗೋಲಿಯಾಗಲಿಲ್ಲರಂಗು ರಂಗಿನ ಕನಸುಗಳಿಗೆ ಕಪ್ಪುರಂಗನು ಎರಚಿ ಕೆಡಿಸಿದ್ದೆ ನೀನು ಪ್ರೇಮದ ಪರಿಚಯವಿರದ ಹೃದಯ ಮಧುರ ಭಾವಕ್ಕೆ ಸಿಲುಕಿ ಮಗುವಂತಾಗಿತ್ತಂದುಮುಗ್ಧ ಮನಕೆ ಪ್ರೀತಿಯನು ಬಣ್ಣದಾಟಿಕೆ ಮಾಡಿ ಮರುಳುಗೊಳಿಸಿದ್ದೆ ನೀನು ಮೋಸವ ಅಸಹಾಯಕತೆಯೆಂಬ ನೆಪದಿ ಶೃಂಗರಿಸಿ […]
ಕನಸುಗಳು ಖಾಸಗಿ
ಪುಸ್ತಕ ಪರಿಚಯ ಕನಸುಗಳು ಖಾಸಗಿ ಕತ್ತಲದಾರಿಯ ಸಂದಿಗೊಂದಿಗಳಲ್ಲಿ ಕರೆದೊಯ್ಯುವ ‘ಕನಸುಗಳು ಖಾಸಗಿ’ ಆಧುನಿಕ ಜಗತ್ತಿನ ಕರಾಳ ಮುಖಗಳನ್ನು ‘ಕನಸುಗಳು ಖಾಸಗಿ’ ಎಂಬ ತಮ್ಮ ಒಂಬತ್ತು ಕಥೆಗಳ ಸಂಕಲನದ ಮೂಲಕ ನರೇಂದ್ರ ಪೈಯವರು ಕಾಣಿಸಿಕೊಟ್ಟಿದ್ದಾರೆ.. ಇಲ್ಲಿರುವುದು ಕನಸುಗಳು ಅನ್ನುವುದಕ್ಕಿಂತ ಕಥೆಗಳನ್ನು ಓದುತ್ತಿರುವಾಗ ಕಣ್ಣ ಮುಂದೆ ರುದ್ರ ನರ್ತನ ಮಾಡುವ ದುಸ್ವಪ್ನಗಳು ಅನ್ನುವುದು ಹೆಚ್ಚು ಸೂಕ್ತ . ವೇಗದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳು ತ್ತಿರುವ ಇಂದಿನ ಜಗತ್ತಿನಲ್ಲಿ ಸಂಬಂಧಗಳು ಛಿದ್ರಗೊಂಡಿವೆ, ಸ್ವಾರ್ಥ ಮೇರೆ ಮೀರಿದೆ, ಹಿಂಸೆ ಹದ್ದು ಮೀರಿದೆ, […]
ಕಾದಂಬರಿ ಕುರಿತು ಚೋಮನದುಡಿ. ಡಾ.ಶಿವರಾಮ ಕಾರಂತ ಭಾರತೀಯ ಸಾರಸ್ವತ ಲೋಕದಲ್ಲಿ ದಲಿತರು , ಅದರಲ್ಲಿಯೂ ಅಸ್ಪೃಶ್ಯರು ಎದುರಿಸುತಿದ್ದ ಸಾಮಾಜಿಕ ಅನ್ಯಾಯಗಳ ವಿರುದ್ಧ ಶಾಂತವಾಗಿಯೇ ಪ್ರಥಮ ಬಾರಿಗೆ ದನಿಯೆತ್ತಿದ ಸಾಮಾಜಿಕ ಕಾದಂಬರಿ ಹಾಗೂ ಮೊದಲ ದಲಿತ ಕಾದಂಬರಿ ಎಂದು ಗುರುತಿಸಲ್ಪಡುವ ಶಿವರಾಮ ಕಾರಂತರ “ಚೋಮನ ದುಡಿ” ನನ್ನ ನೆಚ್ಚಿನ ಕಾದಂಬರಿ. ಸ್ವಾತಂತ್ರ್ಯದ ತರುವಾಯ ಪ್ರಜಾಪ್ರಭುತ್ತದ ಕೋಟೆಯಲ್ಲಿ ಹಲವಾರು ಸಂವೇದನಶೀಲ ಬರಹಗಾರರು ದಲಿತ ಲೋಕದ ಒಳಹರಿವು ಕುರಿತು ಅನನ್ಯವು, ಅನುಪಮವೂ ಆದ ಕೃತಿಗಳು ಬಂದಿವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ, ಆಂಗ್ಲರ […]
ಸಾವೇ ನೀನು ಸಾಯಿ
ಅನುವಾದಿತ ಕವಿತೆ ಸಾವೇ ನೀನು ಸಾಯಿ ಇಂಗ್ಲೀಷ್ ಮೂಲ: ಜಾನ್ ಡನ್ ಕನ್ನಡಕ್ಕೆ: ಗಣೇಶ್ ವಿ. ಕೆಲರು ನಿನ್ನನಜೇಯ ಅತಿಪರಾಕ್ರಮಿ ಎಂದು ಪೆÇಗಳಬಹುದುಅದಕಾಗಿ ಬೀಗದಿರು ಆ ಗುಣಗಳನೇನೂ ನಾ ಕಾಣೆ ನಿನ್ನಲಿಸಾವಿನಲಿಲ್ಲದಾ ಅಸಾಮಾನ್ಯ ಶಕ್ತಿಗಳೇನೂ ನಿನ್ನೊಳಗಿನಿತಿಲ್ಲಬಗ್ಗುವವರನೆಲ್ಲರನೂ ಬಡಿದುರುಳಿಸಿರುವೆನೆಂದು ಭಾವಿಸಿರುವಿಅವರಾರೂ ಮಡಿದಿಲ್ಲ ಅಂತೆ ನನ್ನನೂ ನೀ ಸಾಯಿಸಲಸಾಧ್ಯವು ನಿನ್ನ ತುಳಿತಗಳಿಗೊಳಗಾಗಿ ಮಡಿದ ಬಡಪಾಯಿಗಳೆಷ್ಟೋಬಡವ ಬಲ್ಲಿದರ, ರಾಜ ಮಹರಾಜರ ದೀನ ದಲಿತರೆಲ್ಲರಕಾಯಿಲೆಯಲಿ ನರಳಿಸುತ, ಮುದಿತನದಲಿ ಬಳಲಾಡಿಸುತಶಾಶ್ವತದಿ ಮಲಗಿಸಿ ಹೇಳ ಹೆಸರಿಲ್ಲದಂತೆಲೆ ಮಾಡಿರುವೆ ಅದೆಷ್ಟೇ ಪ್ರಳಯಾಂತಕದಿ ನಿನ್ನ ಹೊಡೆತದಿ ಮಲಗಿದ್ದರೂಸುದೀರ್ಗ ನಿದ್ದೆಯಿಂದೆಚ್ಚೆತ್ತು […]
ತಕ್ಕಡಿ ಸರಿದೂಗಿಸಿ
ಕವಿತೆ ತಕ್ಕಡಿ ಸರಿದೂಗಿಸಿ ನೂತನ ದೋಶೆಟ್ಟಿ ಬೀದಿಯಲ್ಲಿ ಅವಳ ಹೆಣ್ತನಕಳೆದು ಹೋದಾಗಹುಡುಕಲು ಹಗಲು ರಾತ್ರಿಯೆನ್ನದೆಬೀದಿಗಿಳಿದರು ಎಲ್ಲ ತಕ್ಕಡಿ ಹಿಡಿದು ನಾನೂ ಹೊರಟೆನನ್ನ ಕಾಲ ಧೂಳು ನೀನುಎಂದ ಅವನ ಮಾತನ್ನು ತೂಗಿಕೊಂಡು ಬೈಗುಳ, ಹೊಡೆತ, ಗಾಯ-ಬರೆಗಳನ್ನುತಂದು ಪೇರಿಸಿದರು ದಾರಿಗುಂಟತಕ್ಕಡಿ ಜಗ್ಗುತ್ತ ನೆಲಕ್ಕೆ ಹೊಸೆಯುತಿತ್ತುಅಲ್ಲಿ ತಕ್ಕಡಿ, ನಾನು ಇಬ್ಬರೆ ನಿನ್ನ ಕೂಗಿಗೆಯಾರೂ ಬೀದಿಗಿಳಿಯಲಿಲ್ಲವಲ್ಲ !ಮನೆಯ ಗೋಡೆ – ಕಿಟಕಿಗಳಿಗೆಮೈದುಂಬಿತು ಆವೇಶ ಮುಚ್ಚಿದ ಕದಗಳುಏರ್ ಕಂಡೀಷನ್ ರೂಮುಗಳುಸೌಂಡ್ ಪ್ರೂಫ್ ಕಛೇರಿಗಳುಶಬ್ದವನ್ನು ದಾಟಗೊಡಲಿಲ್ಲಅರಿಯದ ಮೌಢ್ಯತೆ ಏನೆಲ್ಲ ಅವಕ್ಕೆ ಕೈಯ ತಕ್ಕಡಿ ನೆಲ ಹೊಸೆಯುತ್ತಲೇ […]
ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..!
ಹಿರಿಯ ಕಲಾವಿದ ದತ್ತಣ್ಣನವರ ಅಣ್ಣ ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..! ಹಿರಿಯ ಕಲಾವಿದ ದತ್ತಣ್ಣ ಅವರ ಅಣ್ಣ 86 ವರ್ಷದ ಹೆಚ್.ಜಿ.ಸೋಮಶೇಖರ ರಾವ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೋಮಣ್ಣ ಇಂದು ಕೊನೆಯುಸಿರೆಳೆದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಣ್ಣನವರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದವರು. ಇವರು ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕ ಕರ್ತುಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದ್ದವರು. ಇವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981ರಲ್ಲಿ. ಅದು ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ ಮೂಲಕ. […]
ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಕಾವ್ಯ ಎಸ್. ಕಾಡಿದ , ಅರಿವು ವಿಸ್ತಿರಿಸಿದ, ಬದುಕಿನ ಚೆಲುವು ತಿಳಿಸಿದ ಕುವೆಂಪು ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಕಾದಂಬರಿ ಎಂದರೆ ; ಕುವೆಂಪುರವರ “ಮಲೆಗಳಲ್ಲಿ ಮದುಮಗಳು ” ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವರ್ಗ, ಸ್ಥಳಗಳು, ಜಾತಿ, ಪಂಗಡಗಳ ವಿವರಣೆಗಳ ಸುತ್ತ ಹೆಣೆದುಕೊಳ್ಳುತ್ತಾ ಅಂದಿನ ಮೇಲುಜಾತಿ, ಕೀಳುಜಾತಿಯ ವಿಡಂಬನೆ, ಕೂಲಿ ಆಳುಗಳನ್ನು ನಡೆಸುಕೊಳ್ಳುತ್ತಿ ದ್ದ ಹೀನಾಯ ಸ್ಥಿತಿ, ಬ್ರಾಹ್ಮಣ ವರ್ಗದವರೇ ಶ್ರೇಷ್ಠರೆಂದು, ಉಳಿದ ವರ್ಗದವರನ್ನು ಹೀನಾಯವಾಗಿ […]
ಅಂಕಣ ಬರಹ ಕವಿತೆ ಅನಂತ ಮೌನಗಳ ಶಬ್ದ ಸಾಗರ ರಂಜಾನ್ ಹೆಬಸೂರು.ಹುಬ್ಬಳ್ಳಿ ಕವಿತೆಗಳನ್ನು ಯಾಕೆ ಬರೆಯುವಿರಿ? ಕವಿತೆ ಅಥವಾ ಕಾವ್ಯ ನಮ್ಮೊಳಗಿನ ಒತ್ತಡಗಳನ್ನು ಕಳೆದುಕೊಳ್ಳುವ ಒಂದು ಮಾಧ್ಯಮ ನನ್ನೊಳಗೆ ಒಡಮೂಡುವ ಸೂಕ್ಷ್ಮ ಗ್ರಹಿಕೆಯ ಸಂವೇದನಗಳು , ಒತ್ತಡಗಳು ಸಂಕಟಗಳನ್ನು , ವರ್ತಮಾನದ ತಲ್ಲಣಗಳಿಗೆ ಅನುಸಂಧಾನವಾಗಿಸುವುದು ಮುಖಾಮುಖಿಯಾಗುವುದಕ್ಕೆ ಕಾವ್ಯ ಬರೆಯುತ್ತವೆ ಒಳಗಿನ ಕತ್ತಲೆಗೆ ಬೆಳಕು ಸುರಿಯಲಿಕ್ಕೆ,ಮನುಷ್ಯ ಬದುಕಿನ ಶೋಧಕ್ಕೆ,ಕಾಡುವ ಘಟನೆಗಳಿಗೆ ಚಿತ್ರಗಳಿಗೆ, ನೋವಿಗೆ,ಸಂಕಟಕ್ಕೆ,ತಲ್ಲಣಕ್ಕೆ,ಮಿಡಿಯುವ ಕರುಳಿಗೆ,ಅವಮಾನ ನೋವು,ಹತಾಶೆ,ಕ್ರೋಧ,ಅವ್ಯಕ್ತ ಭಾವಗಳ ಅಕ್ಷರಗಳಿಗೆ ಕಾವ್ಯ ಮಾಧ್ಯಮ ವಾಗುತ್ತದೆ . ಕಾವ್ಯ ಕಾರ್ಯ ಕಾರಣವಿಲ್ಲದೆ […]
ಪಾಕ ಕ್ರಾಂತಿ
ಕಾದಂಬರಿ ಕುರಿತು ಪಾಕ ಕ್ರಾಂತಿ ಪೂರ್ಣಚಂದ್ರ ತೇಜಸ್ವಿ ದಿವಂಗತ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೀಳ್ಗತೆ *ಪಾಕ್ ಕ್ರಾಂತಿ* ಓದಲು ಸುರುವು ಮಾಡುವದಕ್ಕೂ ಮೊದಲು ನನಗೆ ಅನ್ನಿಸಿದ್ದು ಕ್ರಾಂತಿಯ ಬಗೆಗೆ ಬರೆದಿರುವ ಲೇಖನವಿರಬಹುದು, ಬಹುಶಃ ಪಾಕಿಸ್ತಾನದ ಯಾವುದೋ ಕ್ರಾಂತಿಯದು ಎಂದು. ಆದರೆ ಒಂದೆರಡು ವಾಕ್ಯ ಓದಿದಾಗ ಇದು ಪಾಕ್ ಕ್ರಾಂತಿಯಲ್ಲ ಪಾಕ ಕ್ರಾಂತಿ ಅಂದರೆ ಪಾಕಶಾಸ್ತ್ರದ, ಅಡುಗೆಯಲ್ಲಿ ಮಾಡಿದ ಕ್ರಾಂತಿಯ ಬರಹ ಅಂತ. ನಾಲ್ಕೇ ಜನ ಕಥೆಯಲ್ಲಿ ಬರುತ್ತಾರೆ, ಅದರಲ್ಲಿ ಹೆಂಡತಿ ತವರಿಗೆ ಹೋದಾಗ ಅಡುಗೆಯಲ್ಲಿ ಕ್ರಾಂತಿ ಮಾಡಲು […]
ಗಝಲ್
ಗಝಲ್ ಪ್ರೇಮಾ ಹೂಗಾರ ಬೀದರ ನೀ ಇಲ್ಲದೆಯು ನಾ ಬದುಕಬಲ್ಲೆ ಈ ಗಜಲ್ ನ ಧ್ಯಾನದಲಿಸಣ್ಣಗೆ ಮೌನದಿ ಕುದಿಯುವ ಎದೆಯ ದನಿಯ ರಾಗದಲಿ ಕುಸಿದು ಬೀಳಿಸುವ ಆ ಮಾತು,ನೋಟ್,ಸ್ಪರ್ಷ ಮರೆತಿಲ್ಲಗುಟುಕುವ ಚೇತನವೇ ಆ ಸೂರ್ಯನ ಸಾವು ಈ ಜೀವದಲಿ ಒಂಟಿತನದ ಹೆಜ್ಜೆಯೊಳಗೆ ಬಿಕ್ಕಳಿಕೆ ಮಲಗುತ್ತವೆ ಎನ್ನಬೇಡಎಂದೂ ಬತ್ತದ ನಿನ್ನ ಪ್ರೀತಿಯ ಜೋಳಿಗೆ ಇದೆ ನನ್ನ ಮೌನದಲಿ ಉರಿಯುತ್ತಿರುವ ದೀಪ ಆರುವ ಸತ್ಯ ಎಂದೋ ಅರಿತವಳು ನಾಕಲ್ಪನೆಗೂ ಮೀರಿ ಕತ್ತಲೆ ಜೊತೆ ನೀಡಿತು ನೀನಿಲ್ಲದ ಈ ಭವದಲಿ ನನ್ನೊಳಗಿನ […]