ಅನುವಾದಿತ ಕವಿತೆ
ಸಾವೇ ನೀನು ಸಾಯಿ
ಇಂಗ್ಲೀಷ್ ಮೂಲ: ಜಾನ್ ಡನ್
ಕನ್ನಡಕ್ಕೆ: ಗಣೇಶ್ ವಿ.
ಕೆಲರು ನಿನ್ನನಜೇಯ ಅತಿಪರಾಕ್ರಮಿ ಎಂದು ಪೆÇಗಳಬಹುದು
ಅದಕಾಗಿ ಬೀಗದಿರು ಆ ಗುಣಗಳನೇನೂ ನಾ ಕಾಣೆ ನಿನ್ನಲಿ
ಸಾವಿನಲಿಲ್ಲದಾ ಅಸಾಮಾನ್ಯ ಶಕ್ತಿಗಳೇನೂ ನಿನ್ನೊಳಗಿನಿತಿಲ್ಲ
ಬಗ್ಗುವವರನೆಲ್ಲರನೂ ಬಡಿದುರುಳಿಸಿರುವೆನೆಂದು ಭಾವಿಸಿರುವಿ
ಅವರಾರೂ ಮಡಿದಿಲ್ಲ ಅಂತೆ ನನ್ನನೂ ನೀ ಸಾಯಿಸಲಸಾಧ್ಯವು
ನಿನ್ನ ತುಳಿತಗಳಿಗೊಳಗಾಗಿ ಮಡಿದ ಬಡಪಾಯಿಗಳೆಷ್ಟೋ
ಬಡವ ಬಲ್ಲಿದರ, ರಾಜ ಮಹರಾಜರ ದೀನ ದಲಿತರೆಲ್ಲರ
ಕಾಯಿಲೆಯಲಿ ನರಳಿಸುತ, ಮುದಿತನದಲಿ ಬಳಲಾಡಿಸುತ
ಶಾಶ್ವತದಿ ಮಲಗಿಸಿ ಹೇಳ ಹೆಸರಿಲ್ಲದಂತೆಲೆ ಮಾಡಿರುವೆ
ಅದೆಷ್ಟೇ ಪ್ರಳಯಾಂತಕದಿ ನಿನ್ನ ಹೊಡೆತದಿ ಮಲಗಿದ್ದರೂ
ಸುದೀರ್ಗ ನಿದ್ದೆಯಿಂದೆಚ್ಚೆತ್ತು ಅಮರರಾಗುವವರೆಲ್ಲ ಜಗದಲಿ
ಎಚ್ಚೆತ್ತವರೆಲ್ಲ ಸಾವಿಲ್ಲದವರಾಗಿ ಶಾಶ್ವತದಿ ನೆಲೆಸುವರು
ಸಾವಿಲ್ಲದೆಂದೆಣಿಪ ಸಾವೇ, ನೀನೇ ಸಾಯುವೆ ಆ ಸಾವಿನಲಿ!
*************************************