ಗಝಲ್

ಗಝಲ್

ವತ್ಸಲಾ ಶ್ರೀಶ

silhouette of 2 person sitting on boat during sunset

ಹೃದಯ ಶ್ರೀಮಂತನಲ್ಲ ಪ್ರೀತಿಯ ಮರಳಿಸದ ಸಾಲಗಾರನಾಗಿದ್ದೆ ನೀನು
ಕಾರಣಗಳ ಓರಣದಿ ಜೋಡಿಸುತ್ತಲೇ ದಾರಿ ಬದಲಿಸಿದ್ದೆ ನೀನು

ತಾರೆಗಳನೇ ತಂದಿರಿಸಿದೆಯೆಂಬ ಭ್ರಮೆಯ ಬಾನಲಿ ವಿಹರಿಸುತಲಿದ್ದೆ
ಕಲ್ಲು ಮುಳ್ಳಿನ ಬಯಲಲಿ ನಿಂತ ಸತ್ಯವನು ಕೊನೆಗೂ ತೋರಿಸಿದ್ದೆ ನೀನು

ಕಲ್ಪನೆಯ ಕಣ್ಣಲ್ಲಿನ ಸುಂದರ ಚಿತ್ರಗಳು ಬದುಕ ರಂಗೋಲಿಯಾಗಲಿಲ್ಲ
ರಂಗು ರಂಗಿನ ಕನಸುಗಳಿಗೆ ಕಪ್ಪುರಂಗನು ಎರಚಿ ಕೆಡಿಸಿದ್ದೆ ನೀನು

ಪ್ರೇಮದ ಪರಿಚಯವಿರದ ಹೃದಯ ಮಧುರ ಭಾವಕ್ಕೆ ಸಿಲುಕಿ ಮಗುವಂತಾಗಿತ್ತಂದು
ಮುಗ್ಧ ಮನಕೆ ಪ್ರೀತಿಯನು ಬಣ್ಣದಾಟಿಕೆ ಮಾಡಿ ಮರುಳುಗೊಳಿಸಿದ್ದೆ ನೀನು

ಮೋಸವ ಅಸಹಾಯಕತೆಯೆಂಬ ನೆಪದಿ ಶೃಂಗರಿಸಿ ತಪಸ್ಯಾ ಳ ತೊರೆದಿದ್ದೆ
ಅಮರ ಪ್ರೇಮಕತೆಗಳೂ ಮುಲಾಮಿನೊಳಗಿನ ಹಸಿ ಗಾಯಗಳೆಂಬ ಸತ್ಯ ತಿಳಿಸಿದ್ದೆ ನೀನು

*****************************

2 thoughts on “ಗಝಲ್

Leave a Reply

Back To Top