ಗಝಲ್

ಗಝಲ್

ಪ್ರೇಮಾ ಹೂಗಾರ ಬೀದರ

Swan, Pair, Love, Pairing, Emotions

ನೀ ಇಲ್ಲದೆಯು ನಾ ಬದುಕಬಲ್ಲೆ ಈ ಗಜಲ್ ನ ಧ್ಯಾನದಲಿ
ಸಣ್ಣಗೆ ಮೌನದಿ ಕುದಿಯುವ ಎದೆಯ ದನಿಯ ರಾಗದಲಿ

ಕುಸಿದು ಬೀಳಿಸುವ ಆ ಮಾತು,ನೋಟ್,ಸ್ಪರ್ಷ ಮರೆತಿಲ್ಲ
ಗುಟುಕುವ ಚೇತನವೇ ಆ ಸೂರ್ಯನ ಸಾವು ಈ ಜೀವದಲಿ

ಒಂಟಿತನದ ಹೆಜ್ಜೆಯೊಳಗೆ ಬಿಕ್ಕಳಿಕೆ ಮಲಗುತ್ತವೆ ಎನ್ನಬೇಡ
ಎಂದೂ ಬತ್ತದ ನಿನ್ನ ಪ್ರೀತಿಯ ಜೋಳಿಗೆ ಇದೆ ನನ್ನ ಮೌನದಲಿ

ಉರಿಯುತ್ತಿರುವ ದೀಪ ಆರುವ ಸತ್ಯ ಎಂದೋ ಅರಿತವಳು ನಾ
ಕಲ್ಪನೆಗೂ ಮೀರಿ ಕತ್ತಲೆ ಜೊತೆ ನೀಡಿತು ನೀನಿಲ್ಲದ ಈ ಭವದಲಿ

ನನ್ನೊಳಗಿನ ಹೆಜ್ಜೆಗಳಿಗೆ ಹೊಸ ನಾದದ ಅರಿವು ಮೂಡುತ್ತಿದೆ
ಸಮಾಧಿಯಾದ ನೆನಪುಗಳೆಲ್ಲ ದನಿ ಮುರಿದಿವೆ ಹೊಸ ಮೋಹದಲಿ

ಗಜಲ್ ಎಂದರೆ ನನ್ನ ಧ್ಯಾನ್,ಮೌನ ‘ಪ್ರೇಮ’ದ ಸಂಕೇತ
ಬಿಟ್ಟೆನೆಂದರೂ ಬಿಡದು ಈ ಬಂಧ ಗಜಲ್ ನಾದದಲಿ

***************************************

Leave a Reply

Back To Top