ಓ ಮನವೇ ಮೌನವ ಮುರಿದು
ಪ್ರೀತಿಯು ಬಯಸಿದೆ ಇಂದು
ಪ್ರೀತಿ ನಡುವೆ ಬಾರದಿರಲಿ ಬಿರುಕು
ಇಲ್ಲಿ ಕವಿ ಪ್ರೀತಿಯನ್ನು ಒಂದು ನದಿಗೆ ಹೋಲಿಸಿದ್ದಾರೆ . ಹೌದು ನದಿ ಎಂದರೆ ಜೀವಸೆಲೆ ಚೈತನ್ಯಧಾಯಿನಿ ಸಂಜೀವಿನಿ . ಆದರೆ ನೆರೆಯುಕ್ಕಿ ಪ್ರವಾಹ ಬಂದು ಪ್ರಕೃತಿ ಕಾಳಿಯಾಗಿ
ವಿಜೃಂಭಿಸಿದಾಗ ಅದೇ ನದಿ ಜೀವ ಜೀವನಗಳನ್ನು ಆಪೋಶನ ತೆಗೆದುಕೊಳ್ಳುವುದು ಅಷ್ಟೇ ಸಹಜ . ಹಾಗಾಗಿ ಕವಿ ಇಲ್ಲಿ ಪ್ರೀತಿಯ ಇನ್ನೊಂದು ಮುಖವನ್ನೂ ಬಿಂಬಿಸಿದ್ದಾರೆ ಎಷ್ಟಾದರೂ ಪ್ರೀತಿ ಹಾಗೂ ನೋವು ಒಂದೇ ನಾಣ್ಯದ ಎರಡು ಮುಖಗಳಲ್ಲವೇ?
ಪ್ರೀತಿ ಹರಿಯುತಿರಲಿ ಹೊಳೆಯಂತೆ!
ಪ್ರೀತಿಯಿಂದಲೇ ಜೀವನ
ಪ್ರೀತಿಯಿಲ್ಲದೇ ಬದುಕಿದ್ದೂ ಸತ್ತಂತೆ!!
ಮನುಜ ಮನುಜರೆಡೆಗಿನ ಪ್ರೀತಿ
ನಿನ್ನ ಬಿಟ್ಟು ಈ
ಜೀವಕೆ ಜೀವದುಸಿರು ಕಲ್ಪಿಸಿಕೊಳ್ಳುವುದು ಅಸಾಧ್ಯವೇ ಸರಿ. ನಿನ್ನ ಕಂಡರೆ ಸಾಕು ಈ ತನು ಮನ ತನ್ನಿಂದ ತಾನೆ ಅರಳುವುವು ಕಣೋ.
ಪ್ರೀತಿಯು ಅಂಕುರ ವಾಗಲು
ಮನವದು ಪಿಸು ಮಾತಾಡಿತು||
ಮೆಲ್ಲನೆ ಸವಿ ಮಾತೊಂದು
ಅಧರದಿ ಅದರುತ ಜಾರಿತು||
ಕೂಡಿಟ್ಟ ಮಾತು
ಕಣ್ಗಳೆ ಹೇಳುವಾಗ
ನನ್ನತ್ತ ನೀ ದಿಟ್ಟಿಸಿ
ಒಂದಾಗಬೇಕಿತ್ತು.
ನೀ ಹೆಜ್ಜೆಇಟ್ಟಲ್ಲೆಲ್ಲಾ ನಾ
ಹೂವಾಗಿದ್ದರೆ ಸಾಕು
ಕಡಲ ಅಲೆಯಂತೆ
ಅಪ್ಪಳಿಸಿ ಅಂತರಂಗದಲಿ
ಸುಖದ ಬುಗ್ಗೆಯ ಉಕ್ಕಿಸುವ ಪ್ರೀತಿ
ಇಟ್ಟಿಗೆಯ ಬಟ್ಟಿಯಲಿ ಬೇಯಬೇಕೆ?
ಪ್ರೀತಿ ಹುಟ್ಟಿದ ಮ್ಯಾಲ
ಜಾತಿಯೆಂಬ ಹೊಲಸು
ಬೆನ್ನಟ್ಟಿದೆ ಗೆಳತಿ
ತೀರ ಮುಟ್ಟಿ ಮತ್ತೆ ಹಿಂತಿರುಗುವ
ಕಡಲ ಹನಿಗೆ
ಎಂದೂ ತಳಮಳವಿಲ್ಲ!