ನನ್ನ ಇಷ್ಟದ ಕವಿತೆ
ಪೂಜಾ ನಾಯಕ್ ಬೆಳಗು ಜಾವ ರಚನೆ :ದ. ರಾ. ಬೇಂದ್ರೆ ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಜುಮ್ಮೆಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೋ ಬೆಳಕು-ಬೇಟೆಗಾರ. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು […]
ಮಕ್ಕಳ ಕವಿತೆ
ಧೂರ್ತ ಆಮೆ ನೀ.ಶ್ರೀಶೈಲ ಹುಲ್ಲೂರು ಹಂಸವೆರಡು ಕೊಳದ ಬಳಿನೀರನರಸಿ ಬಂದವುನೀರು ಕುಡಿದು ತಣಿದ ಮೇಲೆಆಮೆ ನೋಡಿ ನಿಂದವು ಹರಟೆ ಮಲ್ಲ ಆಮೆ ತಾನೆಕೊಳದ ರಾಜನೆಂದಿತುಅದನು ಇದನು ಏನೊ ಹೇಳಿಅವುಗಳ ತಲೆ ತಿಂದಿತು ಸರಿ,ನಾವು ಬರುವೆವಿನ್ನುಮತ್ತೆ ಸಿಗುವೆವೆಂದವುಬಿಡದ ಆಮೆ ನಡೆಯ ನೋಡಿಮನದಿ ತಾವೆ ನೊಂದವು ನನಗೆ ಕೊಳದ ಸಂಗ ಸಾಕುನದಿಯಲೀಜಬೇಕುಹಾಡಿ ಜಿಗಿದು ಕುಣಿದು ತಣಿದುಜಲದಿ ತೇಲಬೇಕು ದಮ್ಮಯ್ಯ ಎನುವೆ ನಾನುಮಾಡಿ ನೀವ್ ಉಪಾಯವಏನೆ ಬಂದರೂ ಸರಿಯೆಗೆಲುವೆ ನಾ ಅಪಾಯವ ಹಂಸವೆರಡು ಬಡಿಗೆ ತಂದುಆಚೆ ಈಚೆ ಹಿಡಿದವುನಡುವೆ ಆಮೆ ಬಡಿಗೆ […]
ನಾನು ಈಜು ಕಲಿತ ಪ್ರಸಂಗ:
ಪ್ರಬಂದ ನಾನು ಈಜು ಕಲಿತ ಪ್ರಸಂಗ: ಲಕ್ಷ್ಮಿನಾರಾಯಣ್ ಭಟ್ ಪಿ. ಚಿಕ್ಕಂದಿನಲ್ಲಿ ನನಗೆ ಈಜು ಕಲಿಯುವ ಉಮೇದು. ಅದಕ್ಕೆ ಮನೆಯಲ್ಲಿ ಯಥಾಪ್ರಕಾರ ಅಡ್ಡಿ – ‘ಮಾಣಿಗೆ ಏನಾದ್ರೂ ಹೆಚ್ಚು-ಕಮ್ಮಿ’ (ನೇರ ಮಾತಲ್ಲಿ ‘ಗೊಟಕ್!’) ಆದರೆ ಎಂಬ ಭಯ! ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಮನೆ ಪಕ್ಕದ ಸುಬ್ರಾಯ ದೇವಸ್ಥಾನದ ಚಿಕ್ಕ, ಅಷ್ಟೇನೂ ಆಳವಿಲ್ಲದಿದ್ದ ಕೆರೆಯಲ್ಲಿ ಈಜು ಕಲಿಯುವಾಗ ಓರಗೆಯ ಹುಡುಗನೊಬ್ಬ ಮುಳುಗಿ ಪ್ರಾಣಬಿಟ್ಟಿದ್ದ. ಅವನು ಮುಳುಗುವುದನ್ನು ನೋಡಿ ಉಳಿದ ಚಿಳ್ಳೆಪಿಳ್ಳೆಗಳೆಲ್ಲಾ ಹೆದರಿ ಪದ್ರಾಡ್! ( ತುಳು […]
ಕಾವ್ಯಯಾನ
ಅವರು-ಇವರು ಕೆ.ಎ. ಎಂ. ಅನ್ಸಾರಿ ಮುಸ್ಸಂಜೆಯ ಹೊತ್ತುಮನೆಯತ್ತಹೆಜ್ಜೆಯಿಡಲುಮಡದಿಯಬಾಡಿದ ಮುಖ ದರ್ಶನ… ಗೊತ್ತಾ ಇವರು ಇನ್ನಿಲ್ಲವಾದರಂತೆ…ನಾನುಇನ್ನಾ ಲಿಲ್ಲಾಹ್.. ಎನ್ನುವಾಗಮೊಗದಲ್ಲಿ ನಗುವ ಕಂಡ ಅವಳು…ನಗಬಾರದೆಂದಳು… ಒಂದೆರಡು ವರುಷಗಳ ಹಿಂದೆಇವರು ಅವರನ್ನುಕೊಂದಿ ದ್ದರು..ಸಾವಿಗೆ ಸಂಭ್ರಮಿಸಬಾರದು.. ದಫನ ವಾಗಿರಬಹುದೇ..ನಾ ಕೇಳಿದ ಪ್ರಶ್ನೆ..ಹೌದು. ಈಗ ಮುಗಿದಿರಬಹುದೆನುವಉತ್ತರ.. ಇವರು-ಅವರುಇಬ್ಬರೂ ಊರಿನವರು ..ಅದೇನೋ ಜಗಳ ತಾರಕಕ್ಕೇರಿದಾಗಇರಿತದಿಂದ ಅವರುಪರಲೋಕ ತಲುಪಿದ್ದರು..ಇಂದು ಇವರ ಸರದಿ.. ಮೆಲ್ಲನೆ ಮಸೀದಿಯತ್ತ ಹೆಜ್ಜೆ ಹಾಕಿದೆ..ಪಕ್ಕದಲೇ ಖಬರಸ್ಥಾನ.ಗುಂಪು ಕಟ್ಟಿ ನಡೆದ ಇವರುಒಬ್ಬಂಟಿ ಮಲಗಿದ್ದರು..ಹೊತ್ತೊಯ್ದವರು ಮಣ್ಣು ಮಾಡಿಮರಳಿದ್ದರು.. ಬಡ-ಸಿರಿವಂತ ರೆಲ್ಲರೂಮಲಗುವ ತಾಣವಿದು..ಇವರೀಗ ಒಬ್ಬಂಟಿ..ಸುಮ್ಮನೇ ಪಕ್ಕದಲಿ ಯಾರು ಮಲಗಿರುವುದೆಂದುಕುತೂಹಲದಿ […]
ಕಾವ್ಯಯಾನ
ಬರೆಯದಿರಲಾರೆ…. ನಾಗರಾಜ ಹರಪನಹಳ್ಳಿ ಅಕ್ಷರಗಳು ಆತ್ಮಹತ್ಯೆ ಮಾಡಿಕೊಂಡಿವೆಕೆಲವರಿಗೆ ಮಾರಾಟವಾಗಿವೆ ಹಸಿ ಮಾಂಸಲ ದಂಧೆಗೆಗೊತ್ತಾ ನಿನಗೆ?ಕೆಲವೆಡೆ ಫತ್ವಾ ಇದೆ ಬೆಳಕಿಗೆ ಇನ್ನೇನಾಗಬಹುದು??ಪನ್ಸಾರೆ, ಕಲಬುರ್ಗಿ, ಗೌರಿ ಕೊಂದ ನಾಡಿನಲ್ಲಿ??ಬರೆವ ಕೈಗಳ,ನಿಜದ ಮಾತಿಗೆ ಬೀಗ ಜಡಿದ ಮೇಲೆ ??ಕೊಲೆಯಾಗಿದೆ ಅಭಿವ್ಯಕ್ತಿ! ಗೊತ್ತಾ ನಿನಗೆ ??ಅಮಾಸ, ಠೊಣ್ಣಿಯರ ಹಸಿವು ಹಿಂಗಿಲ್ಲಸಾಕವ್ವ ಬದುಕಿನ ಜಂಜಾಟ ನಿಂತಿಲ್ಲ; ಹರಕು ಸೀರೆ ,ಮುರಿದ ಮನೆ ಕಟ್ಟಲಾಗಿಲ್ಲಐತ ಪೀಂಚಲು ಬದುಕ ಕಟ್ಟಲು ಅಲೆದಾಡುತ್ತಿದ್ದಾರೆಚೋಮುನ ಭೂಮಿ ಹೊಂದುವ ಕನಸು ಕನಸಾಗಿಯೇ ಇದೆ…ನಾಡದೊರೆಯ ಕಣ್ಣು ಬದಲಾಗಿಲ್ಲ ಹೀಗಿರುವಾಗ…ನನಗೆ ನಾಚಿಕೆಯಾಗುತ್ತದೆಮಳೆ ನದಿ ಕಾಡು […]
ಕಥಾಯಾನ
‘ಬಾಳ ಬಣ್ಣ’ ವಸುಂಧರಾ ಕದಲೂರು ಕುಸುಮಳಿಗೆ ವಿವಾಹದ ಏಳು ವರ್ಷದ ಅನಂತರ ಹುಟ್ಟಿದವನೇ ‘ಅಮರಕಿಶೋರ’. ಕುಸುಮಾಳದ್ದು ಮೂವತ್ತರ ಹರಯದಲ್ಲಾದ ವಿವಾಹ. ತಡವಾದ ವಿವಾಹ ಜೊತೆಗೆ ತಡವಾಗಿಯೇ ಮಗು ಹುಟ್ಟಿದ್ದು. ಈ ಕಾರಣಕ್ಕೋ ಏನೋ ಮಗುವನ್ನು ಐದು ವರ್ಷ ಆಗೋವರೆಗೂ ನೆಲಕ್ಕೆ ಬಿಟ್ಟರೆಎಲ್ಲಿ ನವೆದು ಹೋಗುವುದೋ ಎಂದುಕೊಂಡು ಕೆಳಕ್ಕೆ ಬಿಡದೇ ಕಂಕುಳಲ್ಲಿಟ್ಟುಕೊಂಡು ಸಾಕಿದಳು. ಕಣ್ಣನ್ನು ರೆಪ್ಪೆಗಳು ಹೇಗೆ ಮುಚ್ಚಟೆಯಿಂದ ರಕ್ಷಿಸುತ್ತವೆಯೋ ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಳು. ಮಗುವಿಗೆ ಹಸಿವಾಗಿ ಅದು […]
ಕಾವ್ಯಯಾನ
ದೇಹ ಹಣ್ಣು ಆಗುತ್ತಿದೆ
ಗಿಣಿ ಕಚ್ಚಿದ ಹಣ್ಣು
ಆಳ ಗಾಯ!
ಕಬ್ಬಿಗರ ಅಬ್ಬಿ -8 ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ ಈ ನೆಲ, ಈ ಜಲ ಈ ಆಕಾಶಈ ಜೀವ ಈ ಭಾವ ಅನಂತಾವಕಾಶಈ ಕಲ್ಲು ಪರಮಾಣು ಒಳದೇವರ ಕಣ್ಣುಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮಈ ವಾತ ನಿರ್ವಾತ ಆತ್ಮನೇ ಆತ್ಮೀಯಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ ಕಾವ್ಯದೊಳಗೆ ಜೀವರಸವಿದೆ.ರಸದ ಸೆಲೆಯಿದೆ.ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ […]
ಮಕ್ಕಳ ಕವಿತೆ
ಇರುವೆ-ಆನೆ ಗಣಪ ಮತ್ತು ಪುಟ್ಟಿ ವಿಜಯಶ್ರೀ ಹಾಲಾಡಿ ಗಣಪನ ತಿಂಡಿ ಇರುವೆ ತಿಂದರೆತಪ್ಪು ಏನಮ್ಮಆನೆಮರಿಯೇ ಗಣಪ ಎಂದುಅಜ್ಜಿ ಅಂದಿಲ್ವ? ಆನೆಗೆ ಇರುವೆ ಗೆಳೆಯನು ತಾನೇನಾನೇ ನೋಡಿಲ್ವಕಾಡಿನ ಬಿಲದಲಿ ಹುಲ್ಲಿನ ಬೀಜಕೂಡಿ ಹಾಕಿಲ್ವ? ಹುಲ್ಲು ಮೊಳೆತು ಮಳೆಯ ಬೆರೆತುಆನೆಯು ತಿಂದಿಲ್ವಆನೆಗು ಇರುವೆಗು ಭೇದವೆ ಇಲ್ಲಬೆಲ್ಲ ಕದ್ದಿಲ್ವ? ಪುಟ್ಟಿಯ ಮಾತು ಸಿಡಿಯೋ ಅರಳುತಲೆಯು ಕೆಟ್ಟಿಲ್ವ!!ಅಮ್ಮ ಅಪ್ಪ ಅಜ್ಜಿ ಅಜ್ಜಬಿದ್ದು ನಕ್ಕಿಲ್ವ? ******************************
ಬೆಳಕಿನ ರೋಚಕತೆ ನೀಡುವ ಬೆಳದಿಂಗಳು. ಪುಸ್ತಕ- ಬೆಳದಿಂಗಳು ಕವಿ- ಗುರು ಹಿರೇಮಠ ವಿಶ್ವೃಷಿ ಪ್ರಕಾಶನ ಬೆಲೆ-೧೨೦/- ಗುರು ಹಿರೇಮಠ ತುಮಕೂರು ಟು ಹೊಸ್ಪೇಟ್ ಎಂದೇ ನನಗೆ ಪರಿಚಯವಾದವರು. ಮೃದು ಮಾತಿನ ಅಷ್ಟೇ ನಾಚಿಕೆ ಸ್ವಭಾವದ ಹುಡುಗ. ಯಾವಾಗ ಎದುರಿಗೆ ಸಿಕ್ಕರೂ ಒಂದು ನಗೆಯ ಹೊರತಾಗಿ ಬೇರೆ ಮಾತು ಆಡಲು ಬರುವುದೇ ಇಲ್ಲವೇನೋ ಎಂಬಷ್ಟು ಮೌನಿ. ಅವರ ಚುಟುಕುಗಳ ಸಂಕಲನ ಬೆಳದಿಂಗಳು ಓದಿದಾಗ ಅವರ ಮೌನಕ್ಕೊಂದು ಅರ್ಥ ದೊರಕಿತು ನನಗೆ. ಹೇಳಬೇಕಾದುದ್ದನ್ನೆಲ್ಲ ಚುಟುಕಾಗಿ ಮೂರು ನಾಲ್ಕು ಸಾಲುಗಳಲ್ಲಿ ಹೇಳಿ […]