2020 ಎಂಬ ‘ಮಾಯಾವಿ ವರ್ಷ’
ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು 2020 ಎಂಬ ‘ಮಾಯಾವಿ ವರ್ಷ’ ಚಂದ್ರ ಪ್ರಭಾ.ಬಿ. . 2020 ಎಂಬ ‘ಮಾಯಾವಿ ವರ್ಷ’ ಕುದುರೆಯಂತೆ ಕೆನೆಯುತ್ತ ಆಗಮಿಸಿ ವ್ಯಾಘ್ರನಾಗಿ ಮನುಕುಲವನ್ನು ನುಂಗಿ ಆಪೋಶನ ತೆಗೆದುಕೊಂಡುದು ಇಷ್ಟರಲ್ಲೇ ಇತಿಹಾಸದ ಪುಟ ಸೇರಲಿದೆ. ಆಗಮನಕ್ಕೂ ಮುನ್ನ ಆ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ಬಗೆ ವಿಸ್ಮಯಕಾರಿ ನಿರೀಕ್ಷೆ ಇದ್ದುದು ನಿಜ. T20 ಎಂಬ ಚುಟುಕು ಕ್ರಿಕೆಟ್ ಮೂಡಿಸಿದ ಸಂಚಲನ ಅದಕ್ಕೆ ಕಾರಣ. T20 ಮನೆ ಮನ ಮೈದಾನ ಪ್ರವೇಶಿಸಿದ ಹೊಸತರಲ್ಲಿ ಇಷ್ಟು ಕಡಿಮೆ ಓವರ್ […]
ಹೊಸ ಭರವಸೆಯೊಂದಿಗೆ..
ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಹೊಸ ಭರವಸೆಯೊಂದಿಗೆ.. ಜ್ಯೋತಿ ಡಿ.ಬೊಮ್ಮ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ನಿಟ್ಟುಸಿರಿನೊಂದಿಗೆ ವಿಷಾದದ ವಿಷಣ್ಣ ನಗೆಯೊಂದು ಮೂಡುತ್ತದೆ ಕಂಡು ಕಾಣದಂತೆ. 2020 ನೆಯ ವರ್ಷವನ್ನು ಕೂಡ ಒಂದು ಹೊಸ ಭರವಸೆಯಿಂದಲೆ ಬರಮಾಡಿಕೊಂಡಿದ್ದೆವು.ಹಿಂದೊಂದು ಕಾಣದ ಸಾಂಕ್ರಾಮಿಕ ಪಿಡುಗಿನ ಭಯಾನಕ ರೂಪ ಇಡೀ ಮನಕುಲವನ್ನೆ ತಲ್ಲಣಿಸಿಬಿಟ್ಟಿತು. ಎಂಥ ಅನಿಶ್ಚಿತತೆಯ ವಾತಾವರಣ ,ಇಡೀ ಜಗತ್ತೇ ಸ್ಥಬ್ದವಾದಂತಹ ಅಸಹಾಯಕ ಸ್ಥಿತಿ.ರೋಗದ ಭಯ ಎಷ್ಟು ವ್ಯಾಪಿಸಿಬಿಟ್ಟಿತೆಂದರೆ ವೈದ್ಯಕೀಯ ಕ್ಷೇತ್ರವು ಕಂಪಿಸಿತು. ಯಾರಿಗೆ ಯಾವಾಗ ರೋಗ […]
ಕೆಂಪು ತೋರಣ ಕಟ್ಟುತ್ತೇವೆ
ಕೆಂಪು ತೋರಣ ಕಟ್ಟುತ್ತೇವೆ ಅಲ್ಲಾಗಿರಿರಾಜ್ ಕನಕಗಿರಿ ಈಗ ನಾವುಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ.ರಾಜಧಾನಿಯ ಸಾಹುಕಾರರ ಮನೆಯ,ಕುಂಡಲಿಯಲ್ಲಿ ಕೆಂಪು ಗುಲಾಬಿ ಬಾಡಿಹೋಗಿವೆಯಂತೆ.ಹೂ ಗಿಡದ ಬೇರಿಗೆ ರಕ್ತ ಕುಡಿಸಲು ಹೊರಟಿದ್ದೇವೆ. ಈಗ ನಾವುಊರು ಕೇರಿ ಧಿಕ್ಕರಿಸಿ ಬಂದಿದ್ದೇವೆ.ನಮ್ಮ ಅನ್ನ ಕಸಿದು ಧಣಿಗಳಾದವರ,ಮನೆಯ ತಲ ಬಾಗಿಲು ತೋರಣ ಒಣಗಿ ಹೋಗಿವೆಯಂತೆ.ನಮ್ಮ ತೊಡೆ ಚರ್ಮ ಸುಲಿದುಕೆಂಪು ತೋರಣ ಕಟ್ಟಲು ಹೊರಟಿದ್ದೇವೆ. ಈಗ ನಾವುಜೀವದ ಹಂಗು ತೊರೆದು ಬಂದಿದ್ದೇವೆ.‘ಮರಣವೇ ಮಹಾನವಮಿಯೆಂದು’ದಿಲ್ಲಿ ಗಡಿ ಮುಚ್ಚಿಕೊಂಡವರ ಮನೆ ಮುಂದೆನಮ್ಮ ಹೋರಾಟದ ಹಾಡು ಬರೆಯಲು,ಕಳ್ಳು ಬಳ್ಳಿ ಕಟ್ಟಿಕೊಂಡು ಹೊರಟಿದ್ದೇವೆ. […]
ಶವ ಬಾರದಿರಲಿ ಮನೆ ತನಕ
ಕವಿತೆ ಶವ ಬಾರದಿರಲಿ ಮನೆ ತನಕ ಎ. ಎಸ್. ಮಕಾನದಾರ ನಿನ್ನ ಮನೆಯ ಅಂಗಳ ತನಕವೂನನ್ನ ಶವದ ಡೋಲಿ ಬಾರದಿರಲಿ ಹೂವಿನ ಚದ್ದರಿನ ತುಂಬಾ ಗುಲಾಬಿ ಅಂಟಿಸಿತರಾವರಿ ಜರದ ರೀಲು ಸುತ್ತಿ ಮೇಲಷ್ಟು ಇತ್ತರ್ ಸುರಿಯದಿರಲಿ ಆತ್ಮ ಸಾಕ್ಷಿ ನ್ಯಾಯಾಲಯಕೆಶರಣಾಗಿದ್ದೇನೆ. ಶಿಕ್ಷೆಗೆ ಗುರಿಯಾಗಿದ್ದೇನೆ ಅವಳಿಗೆ ಪ್ರೀತಿಸಿದ್ದು ನನ್ನ ತಪ್ಪಾದರೆನನ್ನನ್ನೂ ಪ್ರೀತಿಸಿದ ಅವಳ ತುರುಬು ತುಂಬಾ ಹೂ ಆರಡಿ ಜಾಗೆ ಮೂರು ಹಿಡಿ ಮಣ್ಣಿಗಾಗಿಕಾಲುಗೆರೆ ಸವೆದಿವೆ ಮೊಣಕಾಲು ಚಿಪ್ಪು ಒಡೆದಿದೆವಚನ ಭ್ರಷ್ಟನಲ್ಲ. ದೇಶ ಭ್ರಷ್ಟನೂ ಅಲ್ಲದಅವಳ ನಲ್ಲನಿಗೆ ಪುಟ […]
ಹಾಯ್ಕುಗಳು
ಹಾಯ್ಕುಗಳು ಭಾರತಿ ರವೀಂದ್ರ ಹೃದಯ ಕಣ್ಣೀರು ಕೊನೆ:ಹೃದಯವು ನಿಂತಿತುದುಃಖದ ಭಾರ. ಮನಸ್ಸು ಮನಸೇ ಜೋಕೆಕದ್ದಾರು ಆತ್ಮವನುಪ್ರೀತಿ ಹೆಸರು. ಅಮ್ಮ ತೊಗಲು ಬೊಂಬೆ :ಜೀವ ಕೊಟ್ಟ ದೇವತೆಅಮ್ಮನು ತಾನೇ. ಲಜ್ಜೆ ಸಂಜೆ ಕಡಲುಬಾನು ಭೂಮಿ ಮಿಲನಲಜ್ಜೆಯ ಕೆಂಪು. ಮೌನ ಮಾತು ಮೌನಕ್ಕೆಸೋತು ಶರಣಾಯಿತುಕಣ್ಣ ಭಾಷೆಲಿ. ಶಿಲೆ ಶಿಲೆಗೂ ಪ್ರೀತಿಸುರಿಯೋ ಸೋನೆಯಲಿಕರಗೋ ಮನ ಜಾತ್ರೆ ಮಾಯೆಯ ಜಾತ್ರೆಯಾರು ಯಾವ ಪಾಲಿಗೆಸಿಕ್ಕಿದ್ದೇ ಸಿರಿ. ಬಾಳು ಬಾಳ ಹಾದಿಲಿಮುಳ್ಳು ಕೂಡಾ ಹೂವಂತೆತೃಪ್ತಿ ಮನಕೆ. ಹೂವು ಮುಳ್ಳಿನ ಭಾಸಹೂಗಳು ಚುಚ್ಚಿದಾಗಪ್ರೀತಿಯೇ ಹೀಗೆ. ಕವಿ ಕವಿ […]
ಕಾಡುವ ಕನಸುಗಳು
ಕವಿತೆ ಕಾಡುವ ಕನಸುಗಳು ರಶ್ಮಿ ಹೆಗಡೆ ಒಮ್ಮೊಮ್ಮೆ ಕಾಡುವ ರಂಗುರಂಗಾದ ಕನಸುಗಳುಬಣ್ಣದಲ್ಲಿ ಮಿಂದ ಮುಸ್ಸಂಜೆಯ ರವಿಯಂತೆಕಣ್ಣಿಗೆ ಇನ್ನೇನು ಚಂದ ಎನ್ನುವಷ್ಟರಲ್ಲಿಮುಳುಗಿ ಮಂಗಮಾಯವಾಗುವುದೇಕೆ? ಯಾರಿಂದಲೋ ಬಾಡಿಗೆ ತಂದ ಭಾವನೆಗಳಲ್ಲಅವೆಲ್ಲವೂ ನನ್ನ ನೆನಪಿನ ಗರ್ಭದಲ್ಲಿಯೇ ಅಡಗಿಬೆಚ್ಚಗೆ ಕುಳಿತು ಸಮಯ ಮೀರಿದ ಮೇಲೆಎದೆಯ ಗೂಡಿನಿಂದ ಹೊರಬಂದವುಗಳೇ! ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಬೇಕಾದಆ ನೆನಪಿನ ಪಕ್ಷಿಗಳು ಇಂದು ಮತ್ತೆಮನದ ಪಂಜರದಲ್ಲೇ ಬಂಧಿಯಾಗಿವೆಅದಕ್ಕೆ ಸ್ವಾತಂತ್ರ್ಯ ಸಿಗಬೇಕಾದ್ದು ನನ್ನಿಂದಲೇ! ಶಿಥಿಲಗೊಂಡ ಭಾವಸೇತುವೆಯಲ್ಲಿಇಂದು ಹರೆಯವೂ ಇಲ್ಲ,ಹುಮ್ಮಸ್ಸೂ ಇಲ್ಲಎಂದೋ ಆಗಾಗ ನೆನಪ ಮಳೆ ಸುರಿದಾಗಎದೆಯಡಿಗೆ ನೀರು ಉಕ್ಕಿ ಹರಿವುದನು […]
ಈ ಸಂಜೆ ಗಾಯಗೊಂಡಿದೆ
ವಾರದ ಕವಿತೆ ಈ ಸಂಜೆ ಗಾಯಗೊಂಡಿದೆ ನಾಗರಾಜ ಹರಪನಹಳ್ಳಿ ಈ ಸಂಜೆ ದುಃಖಗೊಂಡಿದೆಆಕಾಶದ ಕೆನ್ನೆ ಮೇಲಿನ ಕಣ್ಣೀರು ಸಾಗರವಾಗಿದೆ ಸಂಜೆ ದುಃಖದ ಜೊತೆ ಗಾಯಗೊಂಡಿದೆಅಲೆಯ ದುಃಖದ ಕೆನ್ನೀರು ದಂಡೆಗೆ ಸಿಡಿದಿವೆ ಕಣ್ಣೀರನುಂಡ ದಂಡೆ ಹಸಿಯಾಗಿದೆನಿನ್ನ ಭಾವಚಿತ್ರ ಕಡಲಹಾಯಿ ದೋಣಿಯಲ್ಲಿ ಮೂಡಿ ಬಂದಿದೆ ಈ ಸಂಜೆ ಯಾಕೋ ಏನೋ ಕಳೆದು ಕೊಂಡಿದೆ , ಮೌನ ಸಾಗರದ ನಡುವಿನ ದ್ವೀಪ ತಬ್ಬಿದೆ ಕಡಲು ಪಶ್ಚಿಮಕ್ಕೆ ದೀಪ ಮಿಣಕುತ್ತಿದೆಅವು ನಿನ್ನ ಕಣ್ಣುಗಳೇ ಆಗಿವೆ ಸಂಜೆಯ ದುಃಖ ಅಳಿದುಅದರೊಡಲಿಗೆ ಆದ ಗಾಯ ಮಾಯುವ […]
ಮಾಜಿ ಪ್ರದಾನಿಯವರ ಅನುವಾದಿತ ಕಥೆ
ಅನುವಾದಿತ ಕಥೆ ಗೊಲ್ಲರ ರಾಮವ್ವ (ಭಾಗ- ಎರಡು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ ಭಾಗ – ೨ “ಅದೆಲ್ಲ ಬಿಡವ್ವಾ ! ಅದೊಂದು ಕಥೆ. ಸ್ವಲ್ಪ ಹೊತ್ತು ನನ್ನನ್ನ ಇಲ್ಲಿ ಅಡಗಿಸಿಡು. ಮತ್ತೆ ನಾನು ಹೊರಟುಹೋಗ್ತೀನಿ” ಅಂತ ಅತಿ ಕಷ್ಟದಲ್ಲಿ ನುಡಿದನಾತ. “ಆ! ಹೋಗ್ತಾನಂತೆ ಹೋಗ್ತಾನೆ.. ! ಒಂದೇ ಸಲ ಸ್ವರ್ಗಕ್ಕೆ ಹೋಗ್ತೀಯಾ …! ಒಳ್ಳೆ ಬುದ್ಧಿವಂತನೇ ನೀನು… ಹೋಗು..! ಹು ! ಹೋಗ್ತಾನಂತೆ ಎಲ್ಲಿಗೋ !” ಹೊಸಬ […]
ಆಕಾಶಕ್ಕೆ ಹಲವು ಬಣ್ಣಗಳು
ಪುಸ್ತಕ ಸಂಗಾತಿ ಆಕಾಶಕ್ಕೆ ಹಲವು ಬಣ್ಣಗಳು ಗಜಲ್ ಪ್ರೇಮಿಗಳ ಭಾವಬಾಂದಳದಿ ಮಾಸದ ಬಣ್ಣಗಳ ಮೂಡಿಸಿದ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಶಹಾಪುರದ ಹಿರಿಯ ಲೇಖಕರಾದ ಶ್ರೀ. ಸಿದ್ಧರಾಮ ಹೊನ್ಕಲ್ ಅವರು ಮೈಸೂರಿಗರಿಗೆ ಪರಿಚಿತರೇನೂ ಅಲ್ಲ. ಮೈಸೂರಿನಲ್ಲೇ ಹುಟ್ಟಿ, ಬೆಳೆದು ಕಳೆದ ಹದಿನೇಳು ವರ್ಷಗಳಿಂದ ಸಂಘಟನೆ ಹಾಗೂ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊನ್ಕಲ್ ಅವರ ಪರಿಚಯವಾದುದು ಗಜಲ್ ಗಳಿಗೆಂದೇ ಮೀಸಲಾದ ಗುಂಪೊಂದರಲ್ಲಿ. ಕಳೆದ ಒಂದೂವರೆ ವರ್ಷಗಳಿಂದ ಗಜಲ್ ಗುರುಗಳಾದ ಡಾ. ಗೋವಿಂದ ಹೆಗ್ಡೆಯವರ […]
ಹೊಸ ಬಾಳಿಗೆ
ಕವಿತೆ ಹೊಸ ಬಾಳಿಗೆ ಶ್ವೇತಾ ಎಂ.ಯು.ಮಂಡ್ಯ ಹಳತು ಕಳೆದುಹೊಸ ವರ್ಷ ಮರಳಿಎಲ್ಲಿಂದಲೋ ಬಂದುಮತ್ತೆಲಿಗೋ ಸಾಗೋಈ ಬದುಕ ಹಾದಿಯಲಿಹೊಸ ಭರವಸೆಯ ಚಿಗುರಿಸಲಿ ರಾಗಯೋಗ ಪ್ರೇಮಸೌಂದರ್ಯಮೇಳೈಸಿ ಭೂರಮೆಯ ಸಿಂಗಾರಗೊಳಿಸಿರೆಂಬೆಕೊಂಬೆಗಳು ತೂಗಿ ಬಾಗಿನರುಗಂಪು ತಣ್ಣನೆಯ ಗಾಳಿ ಸೂಸಿಆನಂದವನೆ ಹಂಚಿವೆ ಈ ಹರುಷವು ಹೀಗೆ ಉಳಿಯಲಿಖಂಡ ಖಂಡಗಳ ದಾಟಿಅರೆಗೋಡೆ ಮಹಾಗೋಡೆಅರೆತಡಿಕೆ ಮಹಾಮನೆಗಳೊಳಗಿನರೋಗಗ್ರಸ್ತ ಮನಸುಗಳಲಿಸೊರಗದ ಸಂಜೀವಿನಿಯಾಗಲಿ ಮೈಮುದುಡಿ ಚಳಿಯೊಳಗೆಬಿಟ್ಟುಬಿಡದೆ ಕಾಡುವ ಶಾಪಗ್ರಸ್ತ ದಾರಿದ್ರಕ್ಕೆ ಬಲಿಯಾದ ಜೀವಗಳಿಗೆಬೇಡುವ ಕೈಗಳಿಗೆ ನೀಡುವಶಕ್ತಿಯ ನೀ ಇಂದಾದರುಹೊತ್ತು ತಾ ಹೊಸ ವರುಷವೇ ಬದುಕನ್ನೇ ಹಿಂಡಿದ ಕಾಣದ ಮುಖವುಕಾಣದೆ ಹೋಗಲಿ ಹಾಗೆಯೇಈ […]