ವಾರದ ಕವಿತೆ
ಈ ಸಂಜೆ ಗಾಯಗೊಂಡಿದೆ
ನಾಗರಾಜ ಹರಪನಹಳ್ಳಿ
ಈ ಸಂಜೆ ದುಃಖಗೊಂಡಿದೆ
ಆಕಾಶದ ಕೆನ್ನೆ ಮೇಲಿನ ಕಣ್ಣೀರು ಸಾಗರವಾಗಿದೆ
ಸಂಜೆ ದುಃಖದ ಜೊತೆ ಗಾಯಗೊಂಡಿದೆ
ಅಲೆಯ ದುಃಖದ ಕೆನ್ನೀರು ದಂಡೆಗೆ ಸಿಡಿದಿವೆ
ಕಣ್ಣೀರನುಂಡ ದಂಡೆ ಹಸಿಯಾಗಿದೆ
ನಿನ್ನ ಭಾವಚಿತ್ರ ಕಡಲಹಾಯಿ ದೋಣಿಯಲ್ಲಿ ಮೂಡಿ ಬಂದಿದೆ
ಈ ಸಂಜೆ ಯಾಕೋ ಏನೋ ಕಳೆದು ಕೊಂಡಿದೆ , ಮೌನ ಸಾಗರದ ನಡುವಿನ ದ್ವೀಪ ತಬ್ಬಿದೆ
ಕಡಲು ಪಶ್ಚಿಮಕ್ಕೆ ದೀಪ ಮಿಣಕುತ್ತಿದೆ
ಅವು ನಿನ್ನ ಕಣ್ಣುಗಳೇ ಆಗಿವೆ
ಸಂಜೆಯ ದುಃಖ ಅಳಿದು
ಅದರೊಡಲಿಗೆ ಆದ ಗಾಯ ಮಾಯುವ ಕ್ಷಣಕೆ ದಂಡೆ ಕಾದಿದೆ
ಮತ್ತೆ ಅದೇ ದಂಡೆಯಲ್ಲಿ ಯುಗಳ ಹೆಜ್ಜೆ ಗಜ್ಜೆ ಸದ್ದಿಗೆ
ಕಡಲು ಕಾದು ಕುಳಿತಿದೆ
ಬರುವ ಹಗಲು ನಗುವ ಹೊತ್ತು ಮರಳಲು ಮನವು ಕಾದಿದೆ
(ಗುಲ್ಜಾರ್ ಕವಿತೆಯ ಒಂದು ಸಾಲಿನಿಂದ ಪ್ರೇರಿತ ಕವಿತೆ)
********************************
ನಾಗರಾಜ್ ಹರಪನಹಳ್ಳಿ
ಚಂದದ ಆಪ್ತ ಕವಿತೆ….ತುಂಬಾ ಇಷ್ಟ ಆಯ್ತು