ಹೊಸ ಭರವಸೆಯೊಂದಿಗೆ..

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು

ಹೊಸ ಭರವಸೆಯೊಂದಿಗೆ..

   ಜ್ಯೋತಿ  ಡಿ.ಬೊಮ್ಮ.

covid lockdown: Two govt panels want Covid lockdown lifted - The Economic  Times

ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ನಿಟ್ಟುಸಿರಿನೊಂದಿಗೆ ವಿಷಾದದ ವಿಷಣ್ಣ ನಗೆಯೊಂದು ಮೂಡುತ್ತದೆ ಕಂಡು ಕಾಣದಂತೆ. 2020 ನೆಯ ವರ್ಷವನ್ನು ಕೂಡ ಒಂದು ಹೊಸ ಭರವಸೆಯಿಂದಲೆ ಬರಮಾಡಿಕೊಂಡಿದ್ದೆವು.ಹಿಂದೊಂದು ಕಾಣದ ಸಾಂಕ್ರಾಮಿಕ ಪಿಡುಗಿನ ಭಯಾನಕ ರೂಪ ಇಡೀ ಮನಕುಲವನ್ನೆ ತಲ್ಲಣಿಸಿಬಿಟ್ಟಿತು. ಎಂಥ ಅನಿಶ್ಚಿತತೆಯ ವಾತಾವರಣ ,ಇಡೀ ಜಗತ್ತೇ ಸ್ಥಬ್ದವಾದಂತಹ ಅಸಹಾಯಕ ಸ್ಥಿತಿ.ರೋಗದ ಭಯ ಎಷ್ಟು ವ್ಯಾಪಿಸಿಬಿಟ್ಟಿತೆಂದರೆ ವೈದ್ಯಕೀಯ ಕ್ಷೇತ್ರವು ಕಂಪಿಸಿತು. ಯಾರಿಗೆ ಯಾವಾಗ ರೋಗ ತನ್ನ ಆಪೋಷನಕ್ಕೆ ತೆಗೆದುಕೊಳ್ಳುವದೊ ಎಂಬ ಭಯದಲ್ಲೆ ದಿನಕಳೆದಿದ್ದಾಯಿತು.ಒಬ್ಬರನ್ನೊಬ್ಬರು ಸದಾ ಅನುಮಾನದಿಂದ ನೋಡುತ್ತ ಸಂಬಂಧಗಳನ್ನೆಲ್ಲ ದೂರಗೊಳಿಸಿ ಒಂದು ಸೀಮಿತ ವಲಯದಲ್ಲೆ ಪರಸ್ಪರರಿಂದ ದೂರವಾಗಿ ಬದುಕಿದ ಆ ಕ್ಷಣಗಳು ಈಗ ನೆನಪಿಸಿಕೊಂಡಾಗ ಮತ್ತೆ ವಿಷಾದ ಕಾಡುತ್ತದೆ.ಕರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಅಷ್ಟೊಂದು ವೈಭವಿಕರಿಸಿ ಭಯಗೊಳಿಸುವ ಅಗತ್ಯವಿತ್ತೆ ..ಎಂಬ ಪ್ರಶ್ನೆಗೆ ಈಗ ಉತ್ತರ ಬೇಕಾಗಿಲ್ಲದಿರಬಹುದು.ಎಕೆಂದರೆ ಈಗ ನಿಧಾನಕ್ಕೆ ನೇಪಥ್ಯಕ್ಕೆ ಸರಿಯುತ್ತಿರುವ ಅದನ್ನು ಮತ್ತೆ ನೆನಪಿಸಿಕೊಳ್ಳದಿರುವದೆ ಸೂಕ್ತ.  ಆದರೆ ಆ ಸಂದರ್ಬದಲ್ಲಿ ಜನರಿಗೆ ಕಾಡಿದ ಒಂಟಿತನ ,ಖಿನ್ನತೆ , ನೆನೆಸಿ ಕೊಂಡರೆ ಮನ ಕಂಪಿಸದೆ ಇರದು.

ಮೊದಮೊದಲು ಲಾಕ್ ಡೌನ್ ಅನ್ನು ಸಂಭ್ರಮಿಸಿದವರೆ ಎಲ್ಲರು. ಮನೆಯ ದಿಗ್ಬಂಧನ ಮುಂದುವರೆದಂತೆ ಅದರ ಪ್ರತಿಕೂಲ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೂ ತೊರತೊಡಗಿತು..ಕಾರ್ಮಿಕರು ಇನ್ನಿಲ್ಲದಂತೆ ತೊಂದರೆಗೊಳಗಾದರು.ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು ಈಗಲೂ ಪರದಾಡುತಿದ್ದಾರೆ. ಕರೋನಾ ಮಾರಿಯೂ ಪ್ರತಿಯೊಬ್ಬರ ಶಿಸ್ತು ಬದ್ಧ ಜೀವನ ಕ್ರಮವನ್ನೆ ಕಸಿದುಕೊಂಡು ಬಿಟ್ಟಿತು.

ಒಂದೊಂದು ಕಷ್ಟವು ಒಂದೊಂದು ಪಾಠ ಕಲಿಸಿಯೆ ಹೋಗುತ್ತದೆ.ಕರೋನಾ ಕಾಲಘಟ್ಟದ ಸಂದರ್ಭ ವೂ  ನಮಗೆ ಅನೇಕ ಪಾಠ ಕಲಿಸದೆ ಇರಲಿಲ್ಲ.ಮೊಟ್ಟ ಮೊದಲು ಮಾನವನ ಅತೀ ವೇಗದ ಬದುಕಿಗೊಂದು ಬ್ರೇಕ್ ಹಾಕಿತು.ಧಾವಂತ ಬದುಕಿನಲ್ಲಿ ಯಾಂತ್ರಿಕವಾಗಿದ್ದ ಸಂಭಂದಗಳು ಮತ್ತೆ ಬೆಸೆದವು ,ಬಾಂಧವ್ಯದ ಸೆಲೆ ವೃದ್ಧಿಸಿತು. ಮನೆಯಲ್ಲಿ ತಯ್ಯಾರಿಸಿ ಸೇವಿಸುವ ಆಹಾರದ ಮಹಾತ್ಮೆಯ ಅರಿವಾಯಿತು.ಪ್ರಕೃತಿ ಮತ್ತೆ ನಳನಳಿಸಿತು ಮಾಲಿನ್ಯವಿಲ್ಲದೆ.ಹಣ ಒಂದೇ ಪ್ರತಿಯೊಂದಕ್ಕೂ ಪರಿಹಾರವಲ್ಲ ಎನ್ನುವದು ಈ ಕರೋನಾ ಕಲಿಸಿಕೊಟ್ಟಿತು.

2020 ರ  ಕಾಲಘಟ್ಟದಲ್ಲಿ ಕರೋನಾ ಸೋಂಕಿಗೆ ಒಳಗಾದ ಕುಟುಂಬಗಳಲ್ಲಿ ನಮ್ಮದು ಒಂದು.ಆ ಸಂದರ್ಭದಲ್ಲಿ ನಾನು ಅನುಭವಿಸಿದ ತವಕ ತಲ್ಲಣಗಳು ಅಪಾರ.ರೋಗ ಲಕ್ಷಣಗಳು ಅಷ್ಟಾಗಿ ಭಾದಿಸದಿದ್ದರೂ ಅದರ ಸುತ್ತಲಿನ ಸರ್ಕಾರದ ಕಟ್ಟಳೆಗಳು ನಿಜವಾಗಿಯು ನಲುಗಿಸಿದ್ದವು. ಮುಂದೆಯೂ ಅದರೊಂದಿಗೆ ಬದುಕುವ ಅನಿವಾರ್ಯತೆ ಪ್ರತಿಯೊಬ್ಬರಿಗೂ. ಅಂತರ ಮತ್ತು ಮುಖಗವಸು ಕಡ್ಡಾಯವೆ.

ಒಂದೂ ರೀತಿಯಲ್ಲಿ ಕರೋನಾ ಪಿಡುಗು ನಮ್ಮನ್ನು ಕಾಡಿದಷ್ಟು ಬದುಕುವ ಛಲ ಮತ್ತು ಆತ್ಮವಿಶ್ವಾಸ ಹೆಚ್ಚಿಸಿತು.ಮುಂದೆಯೂ ಅದರೊಂದಿಗೆ ಬದುಕಬೇಕು ,ಬದುಕೋಣ ,ಮತ್ತೊಂದು ಹೊಸವರ್ಷವನ್ನು ಸ್ವಾಗತಿಸುತ್ತ..ಹೊಸ ಭರವಸೆಯೊಂದಿಗೆ.. ಹೊಸ ಬೆಳಕಿನೊಂದಿಗೆ.

**************************************

  

One thought on “ಹೊಸ ಭರವಸೆಯೊಂದಿಗೆ..

  1. ತುಂಬಾ ಚೆನ್ನಾಗಿ ಬರೆದಿದ್ದೀರಿ ಸಹೋದರಿ ಜ್ಯೋತಿ.

Leave a Reply

Back To Top