ಹಾಯ್ಕುಗಳು
ಭಾರತಿ ರವೀಂದ್ರ
ಹೃದಯ
ಕಣ್ಣೀರು ಕೊನೆ:
ಹೃದಯವು ನಿಂತಿತು
ದುಃಖದ ಭಾರ.
ಮನಸ್ಸು
ಮನಸೇ ಜೋಕೆ
ಕದ್ದಾರು ಆತ್ಮವನು
ಪ್ರೀತಿ ಹೆಸರು.
ಅಮ್ಮ
ತೊಗಲು ಬೊಂಬೆ :
ಜೀವ ಕೊಟ್ಟ ದೇವತೆ
ಅಮ್ಮನು ತಾನೇ.
ಲಜ್ಜೆ
ಸಂಜೆ ಕಡಲು
ಬಾನು ಭೂಮಿ ಮಿಲನ
ಲಜ್ಜೆಯ ಕೆಂಪು.
ಮೌನ
ಮಾತು ಮೌನಕ್ಕೆ
ಸೋತು ಶರಣಾಯಿತು
ಕಣ್ಣ ಭಾಷೆಲಿ.
ಶಿಲೆ
ಶಿಲೆಗೂ ಪ್ರೀತಿ
ಸುರಿಯೋ ಸೋನೆಯಲಿ
ಕರಗೋ ಮನ
ಜಾತ್ರೆ
ಮಾಯೆಯ ಜಾತ್ರೆ
ಯಾರು ಯಾವ ಪಾಲಿಗೆ
ಸಿಕ್ಕಿದ್ದೇ ಸಿರಿ.
ಬಾಳು
ಬಾಳ ಹಾದಿಲಿ
ಮುಳ್ಳು ಕೂಡಾ ಹೂವಂತೆ
ತೃಪ್ತಿ ಮನಕೆ.
ಹೂವು
ಮುಳ್ಳಿನ ಭಾಸ
ಹೂಗಳು ಚುಚ್ಚಿದಾಗ
ಪ್ರೀತಿಯೇ ಹೀಗೆ.
ಕವಿ
ಕವಿ ಕನಸು
ಕಂಡದೆಲ್ಲ ಕವಿತೆ
ಮೊಗ್ಗು ಅರಳಿ.
********************************
ಚೆನ್ನಾಗಿವೆ.
ಚೆನ್ನಾಗಿವೆ