ಪ್ರಕೃತಿಯ ವಿಕೋಪಗಳು ಮತ್ತು ಪರಿಸರ ಸಂರಕ್ಷಣೆ
ಲೇಖನ ಪ್ರಕೃತಿಯ ವಿಕೋಪಗಳು ಮತ್ತು ಪರಿಸರ ಸಂರಕ್ಷಣೆ ಶ್ರೀನಿವಾಸ. ಎನ್.ದೇಸಾಯಿ ಪ್ರಕೃತಿಯ ವಿಕೋಪಗಳು ಮತ್ತು ಪರಿಸರ ಸಂರಕ್ಷಣೆಯ ಮುನ್ನೆಚ್ಚರಿಕೆಯ ಕ್ರಮಗಳು.. ನಾವು ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆಯೋ ಹಾಗೇಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡಾ ಕ್ರಮಬದ್ಧವಾಗಿ, ಕಾಳಜಿಯಿಂದ, ಜವಾಬ್ದಾರಿಯುತವಾಗಿ ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾಕೆಂದರೆ ಇತ್ತೀಚೆಗೆ ಆಗುತ್ತಿರುವ ಪ್ರಕೃತಿಯ ವಿಕೋಪಗಳಿಂದ ನಾವು ಅಕ್ಷರಶಃ ತತ್ತರಸಿ ಹೋಗಲು ಮುಖ್ಯ ಕಾರಣ ನಾವು ಮಾಡಿರುವ ಮತ್ತು ಮಾಡುತ್ತಿರುವ ಪರಿಸರ ನಾಶಕ್ಕೆ ಇಡೀ ಭೂಮಂಡಲದ ಚಿತ್ರಣವೇ ಬದಲಾಗುತ್ತಿದೆ. ನಾವಿಲ್ಲಿ […]
ದುಃಖ
ಕವಿತೆ ದುಃಖ ಚಂದ್ರಿಕಾ ನಾಗರಾಜ್ ಹಿರಿಯಡಕ ಅಯ್ಯೋಒಡೆದು ಬಿಡುಹೆಪ್ಪು ಗಟ್ಟಿರುವ ದುಃಖವ ಎಷ್ಟುಹೊತ್ತು ಹೊರಲಿಉಬ್ಬಿರುವ ಗಂಟಲ ಎಷ್ಟೆಂದು ಸಮಾಧಾನಿಸಲಿಅಡರಿರುವ ಕತ್ತಲಬೆಳಕೆಂದು ಕಂಗಳಿಗೆಷ್ಟು ನಂಬಿಸಲಿಹರಿದು, ಒಡೆದುಕಡಲಾಗಿಸುಹರಿಯಲಿಕಪ್ಪು ನೆತ್ತರುಹಾಳು ನೆತ್ತರುಬಸಿದಿಟ್ಟ ಒಲವಸುಡು ಸುಡುವಆಟದಲಿಕೈ ಸುಟ್ಟಿದ್ದಲ್ಲಕರಟಿ ಹೋಗಿದೆಬದುಕುಒಂದಷ್ಟು ಬವಣೆಗಳ ರಾಶಿಇನ್ನೊಂದಷ್ಟು ಖುಷಿಸತ್ತು ಸತ್ತು ನರಳುತಿದೆಎದೆ ಎತ್ತರಕ್ಕೆ ಬೆಳೆದು ನಿಂತಿದೆಇಲ್ಲ ಭಾವಗಳೆತ್ತರವ ಮೀರುತಿದೆಅಪನಂಬಿಕೆಯೆಂಬೋ ಅರ್ಥಹೀನತೆಗೆ‘ನೀನು’ ಎಂಬನಾಮಕರಣ ಮಾಡಿಸಿಹಿ ಹಂಚುವುದಿಲ್ಲಅಯ್ಯೋಒಡೆದು ಬಿಡುಹಂಚಿ ಹೋಗಲಿಕಹಿಯ ಒಗರೆಲ್ಲಾಆತ್ಮೋದ್ಧಾರದ ಸಣ್ಣ ಬೆಳಕೊಂದುಹಾಯಲಿಕದವಿಕ್ಕದಎದೆಯಂಗಳದ ತುಂಬೆಲ್ಲಾ ************************
ಸಂದಣಿ
ವಿಶೇಷ ಕಥೆ ಸಂದಣಿ ಅಶ್ವಥ್ ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ […]
ಅಂಕಣ ಬರಹ ಪದೇ ಪದೇ ಕಾಡೋದು ಮನುಷ್ಯನ ವೈರುಧ್ಯಗಳು, ಸಂಬಂಧಗಳು. ಸಾಮಾಜಿಕ ತಲ್ಲಣ ತವಕಗಳು” ಮಮತಾ ಅರಸೀಕೆರೆ ಪರಿಚಯ :ಮಮತಾ ಅರಸಿಕೆರೆ ಕವಯಿತ್ರಿ. ವೃತ್ತಿಯಿಂದ ಶಿಕ್ಷಕಿ. ಚಿಕ್ಕಮಗಳೂರಿನ ಬೆಳವಾಡಿ ಅಪ್ಪನ ಊರು. ತುಮಕೂರು ಅವರ ತಾಯಿಯ ತವರು. ಶಿಕ್ಷಣ ಪಡೆದದ್ದೆಲ್ಲವೂ ಜಾವಗಲ್ ನಲ್ಲಿ. ಶಿಕ್ಷಕ ವೃತ್ತಿಯಲ್ಲಿದ್ದು, ಎಂ.ಎ.ಬಿಎಡ್ ಪಡೆದವರು. ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಈಗ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಕೃತಿಗಳು ಪ್ರಕಟವಾಗಿವೆ. ಕಾವ್ಯ, ಅನುವಾದ ಹಾಗೂ ಮಕ್ಕಳ ೩ ನಾಟಕಗಳು ಎಂಬ ಕೃತಿಗಳನ್ನು ಹೊರ ತಂದಿರುವ ಇವರ […]
ಅಂಕಣ ಬರಹ ದುಗುಡದ ನೆನಪು (ಕಲಬುರ್ಗಿಯವರು ಕೊಲೆಯಾದಾಗ ಬರೆದ ಬರೆಹ) ಕರ್ನಾಟಕ ವಿಶ್ವವಿದ್ಯಾಲಯದ ಶ್ರೇಷ್ಠ ಅಧ್ಯಾಪಕರಲ್ಲಿ ಎಂ.ಎಂ.ಕಲಬುರ್ಗಿಯವರೂ ಒಬ್ಬರೆಂದು ಅವರ ಶಿಷ್ಯರ ಮೂಲಕ ಕೇಳುತ್ತಿದ್ದೆವು. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತಿರುವುದೂ ತಿಳಿದಿತ್ತು. ಆದರೆ ಅವರ ವೈಯಕ್ತಿಕ ಒಡನಾಟವಿರಲಿಲ್ಲ. ನನಗೆ ಈ ಒಡನಾಟವು ಮೊದಲ ಸಲ ಒದಗಿದ್ದು ನನ್ನ ಪಿಎಚ್.ಡಿ., ಪ್ರಬಂಧದ ಮೌಲ್ಯಮಾಪಕರಾಗಿ ಅವರು ಮೌಖಿಕ ಪರೀಕ್ಷೆಗೆ ಬಂದಾಗ. 1987ರಲ್ಲಿ. ಪ್ರಬಂಧದಲ್ಲಿ ವಚನಸಾಹಿತ್ಯದ ಮೇಲೆ ನಾನು ಮಾಡಿದ್ದ `ಸೋಲು’ ಎಂಬ ಟೀಕೆಯ ವಿಷಯದಲ್ಲಿ […]
ಅಂಕಣ ಬರಹ ನರವಾನರ ನರವಾನರಮರಾಠಿ ಮೂಲ : ಶರಣಕುಮಾರ ಲಿಂಬಾಳೆಕನ್ನಡಕ್ಕೆ : ಪ್ರಮೀಳಾ ಮಾಧವಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ. ೧೬೫ಪುಟಗಳು : ೧೯೨ ಭಾರತದಾದ್ಯಂತ ಅಂಬೇಡ್ಕರ್ ದಲಿತರ ಪರವಾಗಿ ಮಾಡಿದ ಚಳುವಳಿಯ ಕುರಿತಾದ ಕಾದಂಬರಿ ಇದು. ಮನುಸ್ಮೃತಿಯಲ್ಲಿ ಶೂದ್ರರು ಮತ್ತು ದಲಿತರ ಕುರಿತಾಗಿರುವ ಉಲ್ಲೇಖಗಳಿಂದ ದಲಿತರ ಬದುಕು ನರಕವಾಗಿ ಬಿಟ್ಟು ಅವರಿಗಾದ ಅನ್ಯಾಯಗಳ ವಿರುದ್ಧ ಕೆರಳಿ ಕೆಂಡವಾದ ಅಂಬೇಡ್ಕರ್ ವರ್ಣವ್ಯವಸ್ಥೆಯಿಂದಾಗಿ ಹಿಂದೂ ಸಮಾಜದಲ್ಲಿ ಮೇಲು ಜಾತಿಯವರು ನಿಮ್ನ ಜಾತಿಯವರನ್ನು ಶೋಷಿಸಿದ್ದರ […]
ಮಣ್ಣಿನ ಕಣ್ಣು ವರ್ತಮಾನದ ರಾಜಕೀಯ,ಸಾಮಾಜಿಕ, ಆಗುಹೋಗುಗಳ ಬಗೆಗಿನ ಬರಹಗಳು ರೈತರ ಆತ್ಮಹತ್ಯೆ: ತಡೆಯಬಲ್ಲಂತಹ ಒಂದಷ್ಟು ಯೋಜನೆಗಳ ಬಗ್ಗೆ! ರೈತನ ಆತ್ಮಹತ್ಯೆ ಎನ್ನುವುದು ಈಗೀಗ ಮಾಮೂಲಿಯಾದ ಸುದ್ದಿಯಾಗಿಬಿಟ್ಟಿದೆ ಪ್ರತಿ ವರ್ಷವೂ ಒಂದೋ ಬರಗಾಲ ಎದುರಾಗುತ್ತದೆ, ಇಲ್ಲ ಅತಿವೃಷ್ಠಿಯ ಭೂತ ಬಂದೆರಗುತ್ತದೆ. ಬೆಳೆನಷ್ಟವಾಗಿ ಬೀದಿಗೆ ಬೀಳುವ ರೈತ ವಿಧಿಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.. ವಿರೋಧಪಕ್ಷಗಳು ಆಡಳಿತ ಪಕ್ಷದವರ ವೈಫಲ್ಯದ ಬಗ್ಗೆ ಹೇಳಿಕೆ ನೀಡಿ, ತೀರಾ ಮನಸ್ಸು ಬಂದರೆ ಸದರಿ ರೈತನ ಮನೆಗೆ ಟಿ.ವಿ.ಕ್ಯಾಮೆರಾದೊಂದಿಗೆ ಬೇಟಿ ನೀಡಿ ಒಂದಿಪ್ಪತ್ತು ಸಾವಿರದ […]
ಎರಡು ಪತ್ರಗಳು
ಎರಡು ಪತ್ರಗಳು ಪತ್ರ ಒಂದು [6:27 pm, 18/10/2020] NAGRAJ HARAPANALLY: ಸಂಗಾತಿಯ ನೆನೆಯುತ್ತಾ…. ಹಿರಿಯ ಸಂಗಾತಿ ಮಧುಸೂದನ್ ಸರ್ ಗೆ ನಮಸ್ಕಾರಗಳು.. ಸಂಗಾತಿ ಕನ್ನಡ ವೆಬ್ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ನಾನು ಸಂಗಾತಿಯ ಭಾಗವಾದುದು ಈ ವರ್ಷದ ಮಾರ್ಚನಲ್ಲಿ. ಮಧುಸೂದನ್ ಸರ್ ನನ್ನ fb ಗೆಳೆಯರು.ಹಿರಿಯರು .ಆದರೆ ಕನ್ನಡ ವೆಬ್ ಮಾಡಿದ್ದು ಗೊತ್ತಿರಲಿಲ್ಲ. ನನ್ನ ಪತ್ರಿಕೆ ಕೆಲಸ ,ಪತ್ರಕರ್ತ ವೃತ್ತಿ ಕಾರಣವಾಗಿ .ಗೆಳೆಯ ಮೋಹನ್ ಗೌಡನ ಬರಹ ಸಂಗಾತಿಯಲ್ಲಿ ಪ್ರಕಟವಾಗಿತ್ತು. ಕುತೂಹಲದಿಂದ […]
ನಿಮ್ಮೊಂದಿಗೆ
ಸಂಪಾದಕೀಯ ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು. ಸಂಗಾತಿಯ ಸಾಧನೆಯೇನು? ಕೇಳಿದವರಿಗೆ ನನ್ನ ಉತ್ತರ: ಒಂದು ವಿನಮ್ರ ಮುಗುಳ್ನಗುವಷ್ಟೆ! ಹೆಚ್ಚೇನು ಹೇಳಲಿ? ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ. ** ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು: ಮುನ್ನೂರ ಅರವತ್ತೈದು ದಿನಗಳು, ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು, ಮೂರು ಸಾವಿರಕ್ಕೂ ಹೆಚ್ಚಿನ ಬರಹಗಳು ಹದಿನೈದಕ್ಕೂ ಹೆಚ್ಚು ಅಂಕಣಗಳು ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ ಮಾಲತಿ ಯವರವರೆಗು ಹರಡಿದ ವಿಶಾಲ […]
ಹಸಿವು
ಕವಿತೆ ಹಸಿವು ಗಂಗಾಧರ ಬಿ ಎಲ್ ನಿಟ್ಟೂರ್ ಹಸಿದು ಬಸವಳಿದವರಿಗೆ ಪ್ರಾಣ ಹೋಗುವ ಸಂಕಟ ಉಳ್ಳವರಿಗೆ ಬರೀ ಚೆಲ್ಲಾಟ ಅನ್ನ ಚೆಲ್ಲುವ ಮಂದಿಗೆ ಅರ್ಥವಾದೀತೆ ಹಸಿದ ಕರುಳಿನ ಆಕ್ರಂದನ ಎದೆಯೊಳಗೆ ನಡುಕ ಕರುಳು ಹಿಂಡುವ ಕಥನ ಜಗದಿ ಹಸಿವಿನ ಮರಣ ಮೃದಂಗ ಪ್ರಕೃತಿಗೆ ಕಣ್ಣಿಲ್ಲ ಕರುಣೆಯೂ ಇಲ್ಲ ಗಂಜಿಗೂ ಗತಿ ಇಲ್ಲದೆ ಸಾಯುವ ಕಂದಮ್ಮಗಳ ಸಂಖ್ಯೆ ನಿತ್ಯ 20 ಸಾವಿರಕೂ ಅಧಿಕ ಹಿಡಿ ಅನ್ನ ಬೊಗಸೆ ನೀರಿಗೂ ತತ್ವಾರ ಅಪೌಷ್ಟಿಕತೆ – ಸಾಂಕ್ರಾಮಿಕಗಳ ಪ್ರಹಾರ ಎಂಥಾ ವಿಚಿತ್ರ […]