ಎಂಥಾ ಮಳೆ
ಕವಿತೆ ವಸುಂಧರಾ ಕದಲೂರು ಅಬ್ಬಾ..ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂತಟಕ್ಕನೆ ನಿಂತರೂತೊಟಕ್ ತೊಟಕ್ ಎಂದುತೊಟ್ಟಿಕ್ಕುತಾಮಲೆ ಕಾಡು ಮನೆ ಮಾಡುಮರದ ನೆತ್ತಿ ಗಿಡದ ಬೇರುಎಲ್ಲಾ ನೆನೆಸಿತು ಅಬ್ಬಾ…ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂನದಿ ತೊರೆ ಕೆರೆ ಝರಿಹಳ್ಳ ಕೊರಲು ಕೊಳ್ಳತುಂಬಿಸಿ ಚೆಲ್ಲಿ ತುಳುಕಿಸಿಹರಿದು ಹರಿದು ಹಾರಿತುಅಬ್ಬಾ… ಎಂಥಾ ಮಳೆಅಂಚಲಿ ಕೊರೆದು ಕೊಚ್ಚಿಆಳಕೆ ಸುರಿದು ಚಚ್ಚಿಒಂದೇ ಸಮನೆ ಹೊಡೆದುಹಾಸಿ ಬೀಸಿ ಬೆಚ್ಚಿ ಬೀಳಿಸಿತು.ಅಬ್ಬಾ…ಎಂಥಾ ಮಳೆಅಳತೆ ಮೀರಿ ಸುರಿದುಎಲ್ಲೆ ತೂರಿ ಹರಿದುದಿಕ್ಕು ತಪ್ಪಿಸಿ ಲೆಕ್ಕ ಒಪ್ಪಿಸಿದಿಢೀರನೆ ಧಡಾರನೆಮಿಂಚು ಗುಡುಗುಸಿಡಿಲು ನಡುಗುಬಡಿದೆಬ್ಬಿಸಿ ಮಗ್ಗಲು ಮುರಿಸಿಒಳ್ಳೆ ಪಾಠ […]
ಕಸಾಪಗೆ ಮಹಿಳಾ ಅಧ್ಯಕ್ಷರು
ಕನ್ನಡ ಸಾರಸ್ವತ ಲೋಕಕ್ಕೆ ವಿದ್ಯಾ ದೇವಿ ಸರಸ್ವತಿಯ ಪಾತ್ರ ಬಹುಮುಖ್ಯವಾದುದು.ಧನ ಕನಕಗಳಿಗೆ ಲಕ್ಷ್ಮಿ ಅಧಿದೇವತೆಯಾದಂತೆ ಎಲ್ಲ ದೇವತಾ ಕಾರ್ಯಗಳು ಸಮಾನತೆಯಲಿ ಬೇಧ ಭಾವವಿಲ್ಲದೆ ನಡೆಯುವುದು. ಪೂಜೆಗಷ್ಟೇ ಸಿಮೀತ. ಅದು ದೇವರ ರೂಪದಲ್ಲಿರುವ ಸ್ತ್ರೀ ಮೂರ್ತಿಗಳಿಗೆ ಮಾತ್ರ.ಆದರೆ ವಾಸ್ತವದಲ್ಲಿ ಅವೆಲ್ಲ ಸ್ಥಾನ ಗಳು ನಿಲುಕಲು ಸಾಧ್ಯವೇ. ಅವು ಶೋಕಿಸಿನಲ್ಲಿಡುವ ಮೂರ್ತಿಗಳು.ಇವೇ ನಮಗೆ ಉತ್ತರ ನೀಡಬಲ್ಲ ಮಾನ ದಂಡಗಳು. ಮಹಿಳಾ ಸಂಘಟನೆಗಳಿಗೇನು ಬರವಿಲ್ಲ.ಆದರೆ ಮುಂದೆ ನಿಂತು ನಿಭಾಯಿಸುವ ಜವಾಬ್ದಾರಿ ಬೇಕಲ್ಲ.ಪುರುಷರಂತೆ ಮೂರು ಹೊತ್ತು ಆ ಕೆಲಸ ಮಾಡಲು ಆತ್ಮ ನಿರ್ಭರತೆಯಿ […]
ಕಸಾಪಗೆ ಮಹಿಳಾ ಅಧ್ಯಕ್ಷರು
ಕರ್ನಾಟಕ ಸಾಹಿತ್ಯ ಪರಿಷತ್ ಎಂಬ ಹೆಸರಿನೊಂದಿಗೆ 1915 ರಲ್ಲೇ ಕನ್ನಡ ನಾಡು ನುಡಿಯ ರಕ್ಷಣೆ ಹಾಗೂ ಕನ್ನಡ ಲೇಖಕ ಲೇಖಕಿಯರನ್ನು ಪ್ರೋತ್ಸಾಹಿಸಲೆಂದೇ ಹುಟ್ಟಿಕೊಂಡ ಸಂಸ್ಥೆ, ನಂತರದಲ್ಲಿ 1935ರಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣಗೊಂಡಿದ್ದು ಕನ್ನಡ ಭಾಷೆಯ ಗರಿಮೆಗೆ ಸಾಕ್ಷಿ. ಇಲ್ಲಿಯವರೆಗೂ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗುವುದರೊಂದಿಗೆ ಎಲ್ಲೆಡೆ ಕನ್ನಡ ಸಾಹಿತ್ಯದ ಘಮ ಪಸರಿಸಿದ ಹಿರಿಮೆ ಕನ್ನಡ ಸಾಹಿತ್ಯ ಪರಿಷತ್ ಗೆ ಸೇರಿದೆ ಎಂದರೆ […]
ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು
‘ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು’ ಇದು ಸಾಬೀತಾಗಿ ಶತಮಾನಗಳೇ ಕಳೆದರೂ ನಮ್ಮ ಕಸಾಪ ಗೆ ಒಮ್ಮೆಯೂ ಮಹಿಳಾ ಅಧ್ಯಕ್ಷರ ಆಯ್ಕೆ ಆಗಿಲ್ಲ, ಯಾರೂ ಸಹ ಸ್ಪರ್ಧಿಸಲಾಗಿಲ್ಲ. ಭಾರತವೆಂಬ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವನ್ನ ಇಂದಿರಾ ಗಾಂಧಿಯವರು ಆಳಿದರು. ಅಂತೆಯೇ ನಮ್ಮ ಕಸಾಪ ಗೂ ಮಹಿಳಾ ಅಧ್ಯಕ್ಷೆಯ ಆಯ್ಕೆ ಆಗಬೇಕು. ಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಆಕಾಶದಲ್ಲಿ ವಿಮಾನ ಚಾಲನೆ, ಅಷ್ಟೇ ಏಕೆ ಅಂತರಿಕ್ಷದವರೆಗೂ ಮಹಿಳೆ ತಲುಪಿಯಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದಾಗಿದೆ. ಇಲ್ಲಿ ಮಹಿಳೆ […]
ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ?
ಚರ್ಚೆ . ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷದ ಹಾದಿ ಸವೆಸಿ ಮೇಲೆ ನಾಲ್ಕು ವರ್ಷಗಳಾಗಿವೆ. ಮತ್ತೊಂದು ಚುನಾವಣೆ ಎದುರಿಸಿ, ಕಸಾಪ ಅಧ್ಯಕ್ಷ ಗದ್ದುಗೆ ಏರಲು ಹಲವಾರು ಕಸರತ್ತುಗಳು ನಡೆದಿವೆ. ಕಸಾಪ ಅಧ್ಯಕ್ಷರ ಅವಧಿ ಐದು ವರ್ಷ ಎಂದೂ ಬೈ ಲಾದಲ್ಲಿ (ಠರಾವು)ತಿದ್ದುಪಡಿಯಾಗಿ, ಅದಕ್ಕೆ ಕಸಾಪ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮುದ್ರೆ ಸಹ ಬಿದ್ದಿದೆ. ಚಾಮರಾಜನಗರದಲ್ಲಿ ೨೦೧೯ ರಲ್ಲಿ ನಡೆದ ರಾಜ್ಯ ಕಸಾಪ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಅವಧಿ ಐದು ವರ್ಷ ಎಂದು ಅನುಮೋದನೆ ಸಹ […]
ಬೆಳೆಯೋಣ ಬನ್ನಿ..
ಕವಿತೆ ಸುಜಾತ ಲಕ್ಷ್ಮೀಪುರ. ಮನುಜ ಮನುಜನೆದೆಯಲಿಪ್ರೀತಿ ನೀತಿಯ ಸಸಿ ನೆಟ್ಟುಸಹಕಾರ ಸಮಾನತೆ ನೀರೆರೆದುಮನುಷ್ಯತ್ವದ ಹೂ ಹಣ್ಣು ಕಾಯಿ ಬೆಳೆದುಬಯಲ ಮಕ್ಕಳೆಲ್ಲಾ ಸೇರಿ ಸವಿಯೋಣ ಬನ್ನಿ. ನಿತ್ಯ ನಡೆ ನುಡಿ ಆಚಾರದಲಿಸದ್ಭಾವನೆಯ ಸಿಂಪಡಿಸಿಸರ್ವೋದಯದ ಸಕಾರವನೆ ಉಸಿರಾಡುತ್ತಾಸಕಲ ಜೀವರಾಶಿಯ ಲೇಸು ಬಯಸೋಣ ಬನ್ನಿ ಕಟ್ಟೋಣ ನಾವುಎಲ್ಲರ ಹೃದಯಗಳಿಗೂಅಂತಃಕರಣದ ಸ್ನೇಹ ಸೇತುವೆನಾನು ನೀನಳಿದು ನಾವು ಆದಸಮಷ್ಟಿಯ ಸರ್ವಹಿತದಲಿ. ಸದಾ ಜೀಕೋಣ ಬನ್ನಿಒಬ್ಬರಿಗೊಬ್ಬರು ಕೈ ಕೈಯಿಡಿದು.ನಾವೆಲ್ಲಾ ಒಂದೇ ನಾವು ಜೀವ ಚೈತನ್ಯರು.ಸಾರಿ ಸಾರಿ ಘೋಷಿಸುತ್ತಾಸುತ್ತೋಣ ಬನ್ನಿಮಾನವಪ್ರೇಮದ ನಂದನವನ. *****************************
ನಮಗೊಂದು ಪ್ರಕೃತಿಯು..!
ಕವಿತೆ –ರಮಣ ಶೆಟ್ಟಿ ರೆಂಜಾಳ. ನಮಗೊಂದು ದೇಹವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಪರಿ ಪರಿಯ ನೋವ !ನಮಗೊಂದು ಮನವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ನಾನಾ ಪರಿ ಚಿಂತೆಯ !ನಮಗೊಂದು ಜಿಹ್ವೆಯಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ವಿಧ ವಿಧ ರುಚಿಯ !ನಮಗೊಂದು ನಾಸಿಕವಕೊಟ್ಟನು ಆ ದೇವ,ಆಘ್ರಾಣಿಸಬಿಟ್ಟನು ಇಹಪರದ ವಾಸನೆಯ !ನಮಗೆರಡು ಕಂಗಳಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಚಂಚಲ ನೋಟವ !ನಮಗೆರಡು ಕಿವಿಗಳಕೊಟ್ಟನು ಆ ದೇವ,ಕೇಳಲೆಂದನವ ತರಹಾವರಿ ಶಬ್ಧವ !ನಮಗೆರಡು ಕೈ ಕಾಲುಗಳಕೊಟ್ಟನು ಆ ದೇವ,ಗಂಟುಗಳಲಿಟ್ಟು ವೃದ್ಧಾಪ್ಯಕೆನೋವ ನಿರಖು ಠೇವಣಿಯ !ನಮಗೊಂದು ಜೀವನವಕೊಟ್ಟನು ಆ ದೇವ,ಅನುಭವಿಸಲೆಂದು […]
ಮನೋ ಇಂಧನ
ಕವಿತೆ ವಿದ್ಯಾ ಶ್ರೀ ಎಸ್ ಅಡೂರ್ ಸೀಟಿ ಹೊಡೆಯುತ್ತದೆ ಕುಕ್ಕರ್…ತಾಳದೇತನ್ನ ಅಡಿಯಲ್ಲಿ ಉರಿಯುತ್ತಿಯುವ ಬೆಂಕಿ.ನಾನೂಹೊರಹಾಕುತ್ತೇನೆ ನೋವು ನಲಿವುಗಳಪೆನ್ನು ಕಾಗದ ಹಿಡಿದು ,ಮನವನ್ನು ಕೆದಕಿ ಕೆದಕಿ . ಹಣೆಮೇಲಿನ ನೆರಿಗೆ, ಕಣ್ಣಂಚಿನ ಹನಿತುಟಿಯ ಮೇಲ್ಮುಖ ….ಕೆಳಮುಖ ಬಾಗುವಿಕೆಯಾವುದೂ ಅರ್ಥವಿಲ್ಲದ್ದಲ್ಲ….ಆಕಸ್ಮಿಕವಲ್ಲಪ್ರತಿಯೊಂದಕ್ಕೂ ಇದೆ ಬೇರೆ ಬೇರೆಯೇ ಪೀಠಿಕೆ. ಮನದ ಮ್ಲಾನತೆಯೋ, ಆಹ್ಲಾದಕತೆಯೋಮುಖದ ಮೇಲೆ ಕಾಣಬೇಕಾದರೆ…ಬೇಕುಏನಾದರೂ ಒಂದು ಇಂಧನ….ಅದಕ್ಕೇ..ಕುಕ್ಕರ್ ನ ಉದಾಹರಣೆ ಒಂದೇ..ಸಾಕು. ಮನವೆಂಬುದು ಒಂದು ಕುಲುಮೆಯೇ ಸರಿ..ಬೇಯುತ್ತಿರುತ್ತದೆ ಅಲ್ಲಿ ಬೇರೆ ಬೇರೆ ವಿಷಯಯಾವುದು ಮೊದಲು, ಯಾವುದು ಮತ್ತು, ಹೇಳುವಹಾಗಿಲ್ಲ,ಹೊರಹಾಕುತ್ತದೆ ನೋಡಿಕೊಂಡು ಸಮಯ…. […]
ಮೌಢ್ಯ
ಕವಿತೆ ವೀಣಾ ರಮೇಶ್ ಮಾನದಂಡವಿಲ್ಲದ ಮೂಢ ಸಂತೆಯೊಳಗೆಬದುಕು ವ್ಯಾಪಾರ ವಾಗುತ್ತಿದೆ .ನಂಬಿಕೆಯ ನಡುವೆ ಮೂಢತ್ವ ಬಿತ್ತಿಮೊಳಕೆಯೊಡೆದುಬೇರು ಚಾಚಿಮೌಢ್ಯ ಹೆಮ್ಮರವಾಗಿದೆ ಬೆತ್ತಲಾಗಬೇಡ ಬತ್ತಿದಕನಸುಗಳಿಗೆಪೊಳ್ಳು ಕಟ್ಟು ಪಾಡುಗಳಹೆಗಲೇರಿ ಶವವಾಗಬೇಡ. ನಿನ್ನ ಕನಸುಗಳ ಚಲುವಿಗೆಸುಜ್ಞಾನ ತೊಡಿಸಿಜ್ಞಾನ ದಾರದಿಂದ ಬಿಗಿದುಅಭಿಜ್ಞಾನದೆಡೆಗೆ ಹರಿಸಿ ಅಹಂಕಾರದ ಕತ್ತಲೆಯಮರೆಸಿ ಆತ್ಮದ ಹಣತೆಯಲಿಅಂತರಾತ್ಮದ ನವಿರು ಸ್ಪರ್ಶ ಬೆಳಕು ನೀಡಲಿ **********************************
ಕಣ್ಣುಗಳು ನನ್ನದಲ್ಲ
ಕವಿತೆ ಜಹಾನ್ ಆರಾ ಎಚ್. ಕೋಳೂರು ನಾನು ನಿನ್ನನ್ನು ನೋಡಿದ್ದೇನೆಆದ್ರೆ ಕಣ್ಣುಗಳು ನನ್ನದಲ್ಲ ದಶರಥನ ಮಹೋನ್ನತ ಯೋಚನೆಯಲ್ಲಿಮಂಥರೆಯ ಮೋಸದಲಿಊರ್ಮಿಳೆಯ ಉದಾಸೀನತೆ ಯಲ್ಲಿಲಕ್ಷ್ಮಣನ ನೆರಳಿನಲ್ಲಿಹನುಮಾನನ ಸೇವೆಯಲಿರಾವಣನ ಶೌರ್ಯದಲ್ಲಿಹೌದು ಅದೇ ಸೀತೆಯ ಕಂಬನಿಯಲ್ಲಿ ನಿನ್ನನ್ನು ಮತ್ತೆ ನೋಡುತಿದ್ದೇನೆಮತ್ತೆ ಮತ್ತೆ ಕಣ್ಣುಗಳು ನನ್ನದಲ್ಲ ಧರ್ಮದ ಚದರಿನಲ್ಲಿಜನ್ಮ ಭೂಮಿಯ ಹಂಗಿನಲಿರಾಜಕೀಯದ ದಾಳದಲಿಕೋರ್ಟುಗಳ ವಿವಾದಗಳಲಿದಾನಿಗಳ ದಾನದಲಿಮೌಢ್ಯದ ಹಾದಿಯಲ್ಲಿಮಾಧ್ಯಮದ ಗದ್ದಲದಲ್ಲಿ ನಿನ್ನ ಸೃಷ್ಟಿದ ವಾಲ್ಮೀಕಿಕಡತಗಳ ಹಿಡಿದುಇನ್ನೂ ಹೊರಗೆ ನಿಂತಿದ್ದಾನೆಅವನ್ನು ವಿಚಾರಿಸುನೀ ಮತ್ತೆ ಬರುವ ಅಗತ್ಯ ಇತ್ತೆ ಎಂದು? ಸಾವು ನೋವುಗಳ ಮೇಲೆ ಹಿಡಿತತಪ್ಪಿರುವಾಗ ದೇವರಾಗುವಬದಲು ವೈದ್ಯನಾಗುಮಂದಿರ […]